ಈ ರಾಶಿಯವರು ಧೈರ್ಯದಿಂದ ಮುನ್ನಡೆದರೆ ಭರ್ಜರಿ ಯಶಸ್ಸು

Published : Oct 01, 2019, 07:11 AM ISTUpdated : Dec 03, 2019, 03:18 PM IST
ಈ ರಾಶಿಯವರು ಧೈರ್ಯದಿಂದ ಮುನ್ನಡೆದರೆ ಭರ್ಜರಿ ಯಶಸ್ಸು

ಸಾರಾಂಶ

1ಅಕ್ಟೋಬರ್ 2019 ಮಂಗಳವಾರ, ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ನಿಮ್ಮ ಭವಿಷ್ಯ ?


ಮೇಷ
ಸುಲಭಕ್ಕೆ ಎಲ್ಲವೂ ದಕ್ಕಬೇಕು ಎನ್ನುವ ಆಸೆ
ಬೇಡ. ಕಷ್ಟಪಟ್ಟರೆ ಮಾತ್ರ ಸೂಕ್ತವಾದ
ಪ್ರತಿಫಲ ಸಿಕ್ಕುವುದು. ಗೆಲುವು ಸಿಗಲಿದೆ.

ವೃಷಭ
ಧಾರ್ಮಿಕ ಆಚರಣೆಗಳಲ್ಲಿ ಇಡೀ ದಿನ
ತೊಡಗಿಕೊಳ್ಳಲಿದ್ದೀರಿ. ಮತ್ತೊಬ್ಬರ ಮೇಲೆ
ಆರೋಪ ಮಾಡುವುದು ಸರಿಯಲ್ಲ.

ಮಿಥುನ
ಅಸಮರ್ಥರನ್ನು ಕಡೆಗಣಿಸಿ ನೀವು ಮುಂದೆ
ಸಾಗುತ್ತಿರಿ. ಇಲ್ಲದೇ ಇದ್ದರೆ ಅವರೂ ನಿಮ್ಮ
ಶಕ್ತಿಯನ್ನು ಕುಂದುವಂತೆ ಮಾಡಿ ಬಿಡುತ್ತಾರೆ.

ಕಟಕ
ದೊಡ್ಡ ಕಾರ್ಯ ಮಾಡುವಾಗ ಸಣ್ಣ ಪುಟ್ಟ
ತಪ್ಪುಗಳು ಆಗುವುದು ಸಹಜ. ಅವುಗಳನ್ನು
ಸರಿ ಮಾಡಿಕೊಂಡು ಮುಂದೆ ಸಾಗುತ್ತಿರಬೇಕು.

ಸಿಂಹ
ಅಧಿಕಾರಸ್ಥರ ಮುಂದೆ ಹಲ್ಲು ಕಿರಿದು
ನಿಲ್ಲುವುದಕ್ಕೆ ಬದಲಾಗಿ ಪ್ರಾಮಾಣಿಕವಾಗಿ
ನಿಮ್ಮ ಕಾರ್ಯವನ್ನು ನೀವು ಮಾಡಿಕೊಳ್ಳಿ

ಕನ್ಯಾ
ಕೆಲಸದ ಜಾಗದಲ್ಲಿ ನೆಮ್ಮದಿಯ ವಾತಾವರಣ
ಇರಲಿದೆ. ಮನೆಯಲ್ಲಿ ಖರ್ಚು ಅಧಿಕ.
ಎಲ್ಲರೂ ಸಂತೋಷದಿಂದ ದಿನ ಕಳೆಯುವಿರಿ.

ತುಲಾ
ಅಳೆತೆ ಮೀರುವುದು ಬೇಡ. ನಿಮ್ಮ ಶಕ್ತಿಯನ್ನು
ಕಡೆಗಣಿಸುವುದು ಬೇಡ. ಆದ ಎಲ್ಲಾ
ಅನಾಹುತಕ್ಕೂ ನೀವೇ ಜವಾಬ್ಧಾರರಲ್ಲ.

ವೃಶ್ಚಿಕ
ಧೈರ್ಯದಿಂದ ಮುಂದೆ ಸಾಗಿದರೆ ಅರ್ಧ
ಗೆಲುವು ಸಿಕ್ಕಂತೆಯೇ. ಗೌರವ ದೊರೆಯಲಿದೆ.
ಅದಕ್ಕೆ ತಕ್ಕಂತೆ ನೀವು ನಡೆದುಕೊಳ್ಳಿ. 

ಧನುಸ್ಸು
ಪುಣ್ಯ ಕ್ಷೇತ್ರಗಳಿಗೆ ಭೇಟಿ ನೀಡಲಿದ್ದೀರಿ. ನೀವು
ಅಂದುಕೊಂಡಂತೆ ಎಲ್ಲಾ ಕಾರ್ಯಗಳು
ಆಗುವುದಿಲ್ಲ. ಹಾಗೆಂದು ಕುಗ್ಗುವುದು ಬೇಡ.

ಮಕರ
ಅಪರಿಚಿತ ಸ್ಥಳದಲ್ಲಿ ಪರಿಚಿತ ವ್ಯಕ್ತಿಯ ಭೇಟಿ
ಯಾಗಲಿದೆ. ಚಿಂತೆ ಮರೆತು ಮಾಡಬೇಕಾದ
ಕಾರ್ಯಗಳನ್ನು ಮಾಡಿ ಮುಗಿಸಿರಿ.

ಕುಂಭ
ಪ್ರಾರಂಭದಲ್ಲಿ ಇದ್ದ ಉತ್ಸಾಹವನ್ನು ಕಡೆಯ
ವರೆಗೂ ಹಾಗೆಯೇ ಉಳಿಸಿಕೊಳ್ಳಿ. ಕ್ಷಣಿಕ
ಸುಖಕ್ಕೆ ಸೋತು ಮುಂದೆ ಸಾಗಿದರೆ ಒಳಿತು.

ಮೀನ 
ಕರ್ಮಕ್ಕೆ ಸರಿಯಾದ ಫಲವನ್ನು ಅನುಭವಿಸಿ
ಯೇ ತೀರುತ್ತೀರಿ. ನಿಮ್ಮಿಂದ ಮತ್ತೊಬ್ಬರು
ಕಣ್ಣೀರು ಹಾಕದಿರಲಿ. ಎಚ್ಚರಿಕೆ ಅಗತ್ಯ

PREV
click me!

Recommended Stories

ಅಯೋಧ್ಯೆಯ ರಾಮಲಲ್ಲಾ ಪ್ರತ್ಯಕ್ಷನಾಗಿ ಆಶೀರ್ವದಿಸಿದರೆ ಹೇಗಿರತ್ತೆ? ರೋಮಾಂಚಕಾರಿ ವಿಡಿಯೋ ವೈರಲ್​
ಈ ಸಂಖ್ಯೆ ಹೊಂದಿರುವ ವ್ಯಕ್ತಿ ರಾತ್ರೋರಾತ್ರಿ ಸ್ಟಾರ್ ಆಗುತ್ತಾನೆ ಮತ್ತು ಹಣದ ಸುರಿಮಳೆಯೇ ಆಗುತ್ತದೆ!