ನಿಮ್ಮ ಹೆಸರಿನ ಮೊದಲಕ್ಷರ ನಿಮ್ಮ ವ್ಯಕ್ತಿತ್ವದ ಕುರಿತು ಏನು ಹೇಳುತ್ತೆ ಚೆಕ್ ಮಾಡಿ

By Web Desk  |  First Published Sep 30, 2019, 3:22 PM IST

ಹೆಸರಲ್ಲೇನಿದೆ ಬಿಡಿ ಎನ್ನಬೇಡಿ. ಹೆಸರಿನಲ್ಲಿ ಹಲವಷ್ಟಿದೆ. ನಿಮ್ಮ ಹೆಸರು ನಿಮ್ಮ ಪರ್ಸನಾಲಿಟಿ ಮೇಲೆ ಪರಿಣಾಮ ಬೀರಬಲ್ಲದು. 


ನಿಮ್ಮ ಹೆಸರಿನ ಮೊದಲ ಅಕ್ಷರ ನಿಮ್ಮ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ಏಕೆಂದರೆ, ನಿಮ್ಮ ಹೆಸರಿಗೆ ವ್ಯಕ್ತಿತ್ವವನ್ನು ರೂಪಿಸುವ ತಾಕತ್ತಿದೆ. ನಿಮ್ಮ ಹೆಸರು ಬಹುತೇಕ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ ಮಾತ್ರವಲ್ಲ, ನಿಮ್ಮ ಕೆಲ ಗುಣಗಳನ್ನೂ ಹೇಳುತ್ತದೆ. ನಿಮ್ಮ ಹೆಸರು ಏನು ಹೇಳುತ್ತದೆ ತಿಳಿಯಿರಿ.

A: ಇದೊಂದು ಪವರ್‌ಫುಲ್ ಅಕ್ಷರ. ಈ ಅಕ್ಷರದಿಂದ ಹೆಸರು ಆರಂಭವಾಗಿದ್ದರೆ ನೀವು ಹೆಚ್ಚು ಧೈರ್ಯವಂತರಾಗಿಯೂ, ಛಲವುಳ್ಳವರಾಗಿಯೂ ಇರುತ್ತೀರಿ. ಯಾವಾಗಲೂ ಸಾಹಸ ಹಾಗೂ ಚಟುವಟಿಕೆಗೆ ಹುಡುಕುವ ಸ್ವಭಾವ ನಿಮ್ಮದು. ನಿಮ್ಮ ಕೌಶಲ್ಯಗಳ ಬಗ್ಗೆ ಹೆಚ್ಚು ಆತ್ಮವಿಶ್ವಾಸ ಇರುತ್ತದೆ.

Tap to resize

Latest Videos

undefined

B: ಬಿ ಲೆಟರ್‌ನಿಂದ ಹೆಸರು ಆರಂಭವಾಗಿದ್ದರೆ ನೀವು ಹೆಚ್ಚಾಗಿ ನಿಮ್ಮ ಭಾವನೆಗಳನ್ನು ಹಾಗೂ ಯೋಚನೆಗಳನ್ನು ಚೆಕ್ ಮಾಡುತ್ತಲೇ ಇರುತ್ತೀರಿ. ಜನರನ್ನು ಕಾಳಜಿಯಿಂದ ಹ್ಯಾಂಡಲ್ ಮಾಡುವುದು ಹೇಗೆಂದು ನಿಮಗೆ ಗೊತ್ತು. ಆದರೆ, ನೆಗೆಟಿವ್ ಸೈಡೆಂದರೆ ನೀವು ಸ್ವಲ್ಪ ಸ್ವಾರ್ಥಿಯೂ, ದುರಾಸೆಯವರೂ ಆಗಬಲ್ಲಿರಿ,

C: ನೀವು ಹೆಚ್ಚು ಪ್ರತಿಭಾವಂತರಾಗಿದ್ದು, ಎಲ್ಲರೊಂದಿಗೆ ಸುಲಭವಾಗಿ ಬೆರೆಯಬಲ್ಲಿರಿ. ಪ್ರಾಮಾಣಿಕತೆಗೆ ಹೆಚ್ಚು ಬೆಲೆ ಕೊಡುತ್ತೀರಿ. ಹುಟ್ಟು ಮಾತುಗಾರರಾಗಿರುವ ನೀವು ಕೆಲವೊಮ್ಮೆ ಹೆಚ್ಚು ಇಂಪಲ್ಸಿವ್ ಆಗಿ ವರ್ತಿಸುತ್ತೀರಿ.

D: ನೀವು ಸಮತೋಲನ, ಭದ್ರತೆ ಹಾಗೂ ಹಾರ್ಡ್ ವರ್ಕನ್ನು ಪ್ರತಿನಿಧಿಸುತ್ತೀರಿ. ಯಾವಾಗಲೂ ಸ್ವಚ್ಛತೆ ಹಾಗೂ ಜೋಡಣೆಗೆ ಮಹತ್ವ ನೀಡುತ್ತೀರಿ. ನಿಮಗೆ ಜೀವನದಲ್ಲಿ ಗುರಿ ಹಾಗೂ ಉದ್ದೇಶ ತಿಳಿದಿರುತ್ತಾದ್ದರಿಂದ ಹುಟ್ಟಾ ನಾಯಕರಂತಿರುತ್ತೀರಿ. ಆದರೆ ಕೆಲವೊಮ್ಮೆ ಅತಿಯಾದ ಹಟ ಹಿಡಿದು ಇತರರನ್ನು ಪೀಡಿಸಬಲ್ಲಿರಿ.‌

E: ಪ್ರೀತಿ ಹಾಗೂ ಸನ್ನಡತೆ ನಿಮ್ಮ ಸ್ವಭಾವ. ಕಷ್ಟದ ಸಮಸ್ಯೆಗಳನ್ನು ಸುಲಭವಾಗಿ ನಿಭಾಯಿಸಬಲ್ಲಿರಿ. ಜೀವನವನ್ನು ಚೆನ್ನಾಗಿ ಗಮನಿಸಿ ತಕ್ಷಣ ಯೋಚಿಸಿ ನಿರ್ಧರಿಸಬಲ್ಲ ಗುಣ ನಿಮ್ಮಲ್ಲಿದೆ. ನೀವೆಲ್ಲೇ ಹೋದರೂ ಹೆಚ್ಚು ಗೆಳೆಯರನ್ನು ಸಂಪಾದಿಸುತ್ತೀರಿ. ನೆಗೆಟಿವ್ ಸೈಡ್ ಎಂದರೆ ಸ್ವಲ್ಪ ಹೆಚ್ಚು ಫ್ಲರ್ಟ್ ಮಾಡುವ ಹಾಗೂ ಸಮಯ ಪಾಲನೆ ಮಾಡದ ಅಭ್ಯಾಸ.

F: ಸ್ವಭಾವತಃ ನೀವು ಮನೆಗುಬ್ಬಿ. ಕುಟುಂಬಕ್ಕೆ ಹೆಚ್ಚು ಮಹತ್ವ ಕೊಟ್ಟು ಜವಾಬ್ದಾರಿ ತೆಗೆದುಕೊಳ್ಳುತ್ತೀರಿ. ವೈಯಕ್ತಿಕ ಸಂಬಂಧಕ್ಕೆ ಬಂದರೆ ಸಿಕ್ಕಾಪಟ್ಟೆ ರೊಮ್ಯಾಂ
ಟಿಕ್ ಹಾಗೂ ಅತಿಯಾದ ಬದ್ಧತೆ ತೋರುತ್ತೀರಿ. ಕೆಲವೊಮ್ಮೆ ಚೈಲ್ಡಿಶ್ ಆಗಿ ಆಡಬಹುದು.

G: ಯಾರಾದರೂ ಸಲಹೆ ನೀಡಿದರೆ ಮಧ್ಯೆ ಮೂಗು ತೂರಿಸುತ್ತಿದ್ದಾರೆ ಎಂದು ನಿಮಗೆ ಕೋಪ ಬರುತ್ತದೆ. ನೀವು ಆವಿಷ್ಕಾರ ಮನಸ್ಥಿತಿಯುಳ್ಳವರು. ನಿಮ್ಮ ಜೀವನವನ್ನು ನಿಮಗಿಷ್ಟ ಬಂದಂತೆ ಬದುಕಲು ಬಯಸುವವರು. ಬುದ್ಧಿವಂತಿಕೆ ಹಾಗೂ ಚಾಣಾಕ್ಷತನದಿಂದಾಗಿ ಬಹುಬೇಗ ಸತ್ಯವನ್ನು ಹುಡುಕಬಲ್ಲಿರಿ.

H : ಜೀವನವನ್ನು ಪ್ರಾಕ್ಟಿಕಲ್ ಆಗಿ ನೋಡುವ ನೀವು ಅತಿಯಾದ ಮಹತ್ವಾಕಾಂಕ್ಷೆ ಉಳ್ಳವರಾಗಿದ್ದು, ಹಣಕಾಸು ನಿಮ್ಮ ಕೈಲಿ ನಿಲ್ಲುತ್ತದೆ. ಹುಟ್ಟಾ ಉದ್ಯಮಿಯ ಗುಣಗಳಿದ್ದು, ಉತ್ತಮ ಲೀಡರ್ ಆಗಬಹುದು. ತಾಳ್ಮೆ ಹಾಗೂ ಸೂಕ್ಷ್ಮತೆ ಹೊಂದಿರುತ್ತೀರಿ. ನೆಗೆಟಿವ್ ಸೈಡೆಂದರೆ ಸಂಬಂಧಗಳ ವಿಷಯದಲ್ಲಿ ಅತಿಯಾದ ಪೊಸೆಸಿವ್ನೆಸ್ ಹೊಂದಿರುತ್ತೀರಿ.

I: ಅತ್ಯಂತ ಒಳ್ಳೆಯ ಆತ್ಮ ನಿಮ್ಮದು. ನೀವು ಹೆಚ್ಚು ಅವಲಂಬಿತರು ಹಾಗೂ ಅತಿಯಾಗಿ ಯೋಚಿಸುವವರು. ಇನ್ನೊಬ್ಬರ ಕಷ್ಟಗಳಿಗೆ ಮರುಗುತ್ತಾ ಸಾಧ್ಯವಾದಷ್ಟು ಸಹಾಯ ಮಾಡುತ್ತೀರಿ. ಸಣ್ಣಪುಟ್ಟದ್ದಕ್ಕೂ ಕೊರಗುವುದು ನಿಮ್ಮ ವೀಕ್ನೆಸ್.

J : ಅತಿಯಾದ ಮಹತ್ವಾಕಾಂಕ್ಷೆ ಹೊಂದಿರುವ ನೀವು ಜೀವನದಲ್ಲಿ ಬೇಕಾದ್ದನ್ನೆಲ್ಲ ಪಡೆದೇ ತೀರುವ ಛಲ ತೋರಿಸುತ್ತೀರಿ. ಅರ್ಥ ಮಾಡಿಕೊಳ್ಳುವ ಪಾರ್ಟ್ನರ್ ಸಿಕ್ಕರೆ ಸಂತೋಷವಾಗಿರಬಲ್ಲಿರಿ.

K: ನಾಚಿಕೆ ಸ್ವಭಾವದೊಂದಿಗೆ ನಿಗೂಢವಾಗಿ ಉಳಿಯುವವರು ನೀವು. ನಿಮ್ಮ ಮನಸ್ಸಿನಲ್ಲೇನಾಗುತ್ತಿದೆ ಎಂದು ಮತ್ತೊಬ್ಬರು ಅರ್ಥ ಮಾಡಿಕೊಳ್ಳುವುದು ಕಷ್ಟ. ಇನ್ನೊಬ್ಬರ ಬಗ್ಗೆ ಅತಿಯಾಗಿ ಯೋಚಿಸುವವರು ಹಾಗೂ ಶಾಂತಿ ಬಯಸುವವರು. ಸಂಬಂಧಗಳಲ್ಲಿ ಆಟವಾಡುವುದು ನಿಮಗಿಷ್ಟವಿಲ್ಲ.

L: ನೀವು ಜೀವನವನ್ನು ಬಹಳ ವಿಭಿನ್ನ ದೃಷ್ಟಿಕೋನದಿಂದ ನೋಡುತ್ತೀರಿ. ಅದಕ್ಕೇ ನೀವು ಉಳಿದವರಿಗಿಂತ ವಿಶಿಷ್ಠರೆನಿಸುತ್ತೀರಿ. ನಿಮಗೆ ನಿಮ್ಮ ಸಂಗಾತಿ ಎಂದರೆ ಜೀವ. ಒಳ್ಳೆಯ ಹಾಸ್ಯಪ್ರಜ್ಞೆ ಹೊಂದಿರುವ ನೀವು ಸಾಮಾನ್ಯವಾಗಿ ತಮಾಷೆ ಮಾಡುತ್ತಾ ಖುಷಿಯಾಗಿರಬಲ್ಲಿರಿ.

M: ನೀವು ಕಷ್ಟಪಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡುವಂಥವರು. ಎಂ ಲೆಟರ್‌ನಿಂದ ಹೆಸರು ಆರಂಭವಾಗುವ ಜನರು ಸಾಮಾನ್ಯವಾಗಿ ವರ್ಕೋಹಾಲಿಕ್ಸ್. ಅವರು ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಾಗಿ ಮಾತನಾಡುವುದಿಲ್ಲ. ಆದರೆ, ತಾಳ್ಮೆ ಪರೀಕ್ಷಿಸಿದರೆ ಹೆಚ್ಚು ಅಗ್ರೆಸಿವ್ ಆಗಬಲ್ಲಿರಿ. 

N: ಏನೇ ಮಾಡಿದರೂ ಅದರಲ್ಲಿ ಪರ್ಫೆಕ್ಷನ್ ಇರಬೇಕು ಎನ್ನುವವರು ನೀವು. ಹುಟ್ಟಿನಿಂದಲೇ ಸಂವಹನ ಕಲೆ ಸಿದ್ದಿಸಿರುತ್ತದೆ. ಜನರನ್ನು ಫಾಲೋ ಮಾಡುವ ಬದಲು ನಿಮ್ಮದೇ ದಾರಿಯಲ್ಲಿ ನಡೆಯಲಿಚ್ಚಿಸುವಿರಿ.

O: ಬಹಳ ಕರುಣೆ ಹಾಗೂ ಪ್ರೀತಿಯುಳ್ಳವರು. ಅತಿ ನಂಬಿಕಸ್ಥ ಜನಗಳಲ್ಲಿ ಒಬ್ಬರಾಗಿರುತ್ತೀರಿ. ನಿಮ್ಮದೇ ಆದ ಸಿದ್ಧಾಂತಗಳಿಗನುಗುಣವಾಗಿ ಬದುಕಲು ಬಯಸುತ್ತೀರಿ. ನಿಮ್ಮ ಈ ಪ್ರೀತಿಯ ಗುಣವೇ ನೀವು ಹೋದಲ್ಲೆಲ್ಲ ಜನಪ್ರಿಯರಾಗುವಂತೆ ಮಾಡುತ್ತದೆ.

P: ಬದುಕಿನ ಬಗ್ಗೆ ಹೆಚ್ಚು ಕುತೂಹಲ ಉಳ್ಳವರು. ಹಟವಾದಿ, ನಿಮ್ಮ ಸುತ್ತಲಿನವರನ್ನು ಖುಷಿಯಾಗಿಡಲು ಸದಾ ಪ್ರಯತ್ನಿಸುತ್ತೀರಿ. ಹಾಸ್ಯಪ್ರಜ್ಞೆ ಚೆನ್ನಾಗಿರುತ್ತದೆ. ಆದರೆ ಕೆಲವೊಮ್ಮೆ ಸ್ವಾರ್ಥಿಯಾಗಿಬಿಡುತ್ತೀರಿ.

Q: ಇವರ ಸುತ್ತ ಒಂದು ನಿಗೂಢತೆ ಇರುತ್ತದೆ. ಪ್ರಾಮಾಣಿಕತೆಯಿದ್ದು, ಉತ್ತಮ ಗೆಳೆಯರಾಗಬಲ್ಲರು. 

R: ನಿಮ್ಮ ಹೆಸರು ಆರ್‌ನಿಂದ ಆರಂಭವಾದರೆ ನೀವು ಪ್ರೀತಿ, ಜ್ಞಾನ, ಆರನೇ ಇಂದ್ರಿಯದ ಸಮಾಗಮ. ಪ್ರೀತಿಪಾತ್ರರ ಸಂತೋಷಕ್ಕಾಗಿ ಏನು ಬೇಕಾದರೂ ಮಾಡಬಲ್ಲಿರಿ. ನಿಮ್ಮ ಶಾಂತಿ ಪ್ರಿಯತೆ ಹಾಗೂ ಎಲ್ಲವನ್ನೂ ಸರಳವಾಗಿ ತೆಗೆದುಕೊಳ್ಳುವ ಗುಣದಿಂದಾಗಿ ನಿಮ್ಮನ್ನು ಪ್ರೀತಿಸುವವರ ಸಂಖ್ಯೆ ಹೆಚ್ಚು. ಆದರೆ, ಬಹು ಬೇಗ ಕೋಪ ಬರುತ್ತದೆ. ಅಷ್ಟೇ ಬೇಗ ಹೋಗುತ್ತದೆ ಕೂಡಾ. 

S: ತುಂಬಾ ಪ್ರಾಮಾಣಿಕರಾದ ನೀವು ಉತ್ತಮ ನಾಯಕತ್ವ ಗುಣ ಹೊಂದಿರುತ್ತೀರಿ. ಸ್ವಲ್ಪವೇ ಕೊರತೆ ಇರುವುದು ರೊಮ್ಯಾಂಟಿಕ್ ಗುಣದಲ್ಲಿ. ಹೋದಲ್ಲೆಲ್ಲ ಆಕರ್ಷಣೆಯ ಕೇಂದ್ರಬಿಂದುವಾಗಬಲ್ಲಿರಿ. ನಿಮಗಿಷ್ಟವಾಗಿರುವವರ ಬಗ್ಗೆ ಅತಿಯಾದ ಪ್ರೀತಿ ತೋರಬಲ್ಲಿರಿ. 

T: ಸಖತ್ತಾಗಿ ಚರ್ಚಿಸುವ ಕಲೆ ನಿಮ್ಮಲ್ಲಿದೆ. ಸಾಮಾನ್ಯವಾಗಿ ಗಲಾಟೆಯಾದಾಗ ಅಲ್ಲಿ ಮಧ್ಯವರ್ತಿಯಾಗಿ ಶಾಂತಿ ಸ್ಥಾಪಿಸಬಲ್ಲಿರಿ. ಅದೃಷ್ಟಕ್ಕಿಂತ ಹೆಚ್ಚು ಹಾರ್ಡ್ ವರ್ಕ್‌ ಮೇಲೆ ನಂಬಿಕೆ ಇರಿಸಿರುವವರು ನೀವು. 

U: ಲಕ್ಷುರಿ ಲೈಫ್‌ಸ್ಟೈಲ್ ಪಡೆಯಬೇಕೆಂದು ಬಹಳ ಕಷ್ಟ ಪಡುತ್ತೀರಿ. ಯಾವಾಗ ಏನು ಮಾಡಬೇಕೆಂದು ನಿಮಗೆ ಚೆನ್ನಾಗಿ ಗೊತ್ತು. ಸದಾ ಹೊಸ ಐಡಿಯಾಗಳ ಮೇಲೆ ಕೆಲಸ ಮಾಡುತ್ತೀರಿ. ಹೀಗೆ ಮೇಲೇರುವ ಆಸೆಯ ಬೆನ್ನತ್ತಿ ಹತ್ತಿರದವರನ್ನು ಕಡೆಗಣಿಸುವಿರಿ.

V: ಪ್ರಾಮಾಣಿಕತೆ ಹಾಗೂ ಪ್ರೀತಿ ಎರಡೂ ನಿಮಗೊಲಿದಿವೆ. ಬಹಳ ಕಾಲದವರೆಗೂ ಹಲವಾರು ವಿಷಯಗಳನ್ನು ನೆನಪಿಟ್ಟುಕೊಳ್ಳುವ ಸಾಮರ್ಥ್ಯ ನಿಮ್ಮದು.  ಸಂಬಂಧಗಳಲ್ಲಿ ನೀವು ಹೆಚ್ಚು ಪೊಸೆಸಿವ್ ಆಗಿಬಿಡಬಲ್ಲಿರಿ. ಖುಷಿಗಾಗಿ ಗಾಸಿಪ್‌ನಲ್ಲಿ ತೊಡಗುವಿರಿ. ಅವಲಂಬಿತರಾದರೂ ಕೆಲಸದ ವಿಷಯಕ್ಕೆ ಬಂದರೆ ಕಷ್ಟ ಪಟ್ಟು ಕೆಲಸ ಮಾಡುವಿರಿ.

W: ಇವರು ಸಾಮಾನ್ಯವಾಗಿ ಎಗ್ಗುಸಿಗ್ಗಿಲ್ಲದೆ ನುಗ್ಗುವವರು. ಸಂಬಂಧ ಎಂದರೆ ಹೆದರುವ ನೀವು ಯಾರಿಗಾದರೂ ಹತ್ತಿರಾಗಲು ಬಹಳಷ್ಟು ಸಮಯ ತೆಗೆದುಕೊಳ್ಳುತ್ತೀರಿ. ಡೆಡ್‌ಲೈನ್ ಕೊಟ್ಟು ಕೆಲಸ ಮಾಡಿರೆಂದರೆ ಕಿರಿಕಿರಿಗೊಳಗಾಗುತ್ತೀರಿ.

X: ಈ ಅಕ್ಷರದ ಹೆಸರಿನವರು ಅಪರೂಪದಲ್ಲಿ ಅಪರೂಪವಾದರೂ, ಇವರನ್ನು ಬದ್ಧತೆ ಹೆಸರಿನಲ್ಲಿ ಕಟ್ಟಿಹಾಕಲಾಗುವುದಿಲ್ಲ. ಸ್ವಲ್ಪ ದುರಾಸೆ ಹಾಗೂ ಅಶಿಸ್ತಿನವರು.

Y: ಸ್ವತಂತ್ರಪ್ರಿಯರು ಹಾಗೂ ಇದಕ್ಕಾಗಿ ಏನು ಬೇಕಾದರೂ ಮಾಡಬಲ್ಲರು. ಬಹಳಷ್ಟು ವೈಗಳು ಉತ್ತಮವಾಗಿ ಸೆಟಲ್ ಆದವರನ್ನೇ ವಿವಾಹವಾಗುತ್ತಾರೆ. ಇನ್ನೊಬ್ಬರೊಂದಿಗೆ ಬೆರೆಯಲು ಸ್ವಲ್ಪ ಕಷ್ಟ ಪಡುತ್ತಾರೆ. 

Z: ದೈಹಿಕ ಶಕ್ತಿ ಹಾಗೂ ಆತ್ಮಶಕ್ತಿ ಎರಡೂ ಹೆಚ್ಚು. ಗುರಿ ಬೆನ್ನತ್ತುವವರು. ಉತ್ತಮ ಬಾಸ್ ಹಾಗೂ ಮ್ಯಾನೇಜರ್ ಆಗಬಲ್ಲರು. 

click me!