ಆರೋಗ್ಯದ ಮೇಲೆ ತೀವ್ರ ಎಚ್ಚರಿಕೆ ಇರಲಿ : ಇಂದಿನ ರಾಶಿಗಳ ಫಲಾ ಫಲ

Suvarna News   | Asianet News
Published : Mar 17, 2020, 07:15 AM IST
ಆರೋಗ್ಯದ ಮೇಲೆ ತೀವ್ರ ಎಚ್ಚರಿಕೆ ಇರಲಿ :  ಇಂದಿನ ರಾಶಿಗಳ ಫಲಾ ಫಲ

ಸಾರಾಂಶ

ಯಾವ ರಾಶಿಗೆ ಯಾವ ಫಲ, ಹೇಗಿದೆ ಇಂದಿನ ರಾಶಿಗಳ ಫಲಾ ಫಲ..? ಇಂದಿನ ಭವಿಷ್ಯವೇನು..?

ಆರೋಗ್ಯದ ಮೇಲೆ ತೀವ್ರ ಎಚ್ಚರಿಕೆ ಇರಲಿ :  ಇಂದಿನ ರಾಶಿಗಳ ಫಲಾ ಫಲ

ಮೇಷ
ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಆಹಾರ
ಕ್ರಮವನ್ನು ಸರಿ ಮಾಡಿಕೊಳ್ಳಿ. ಮನಸ್ಸಿನಲ್ಲಿ
ಇದ್ದ ತಳಮಳಗಳು ನಿವಾರಣೆಯಾಗಲಿವೆ.

ವೃಷಭ
ಆರ್ಥಿಕವಾಗಿ ಈ ದಿನ ಲಾಭದಾಯಕ
ವಾಗಲಿದೆ. ಸಣ್ಣ ವ್ಯಾಪಾರಿಗಳಿಗೆ ಶುಭ ಲಾಭ.
ಆತುರ ಪಡದೇ ನಿಧಾನಕ್ಕೆ ಹೆಜ್ಜೆ ಹಾಕಿ.

ಮಿಥುನ
ನಾಳೆಗಳು ಚೆನ್ನಾಗಿ ಇರಬೇಕು ಎಂದರೆ ಇಂದು
ಶ್ರಮಪಡಬೇಕು. ಹಿರಿಯ ಅಧಿಕಾರಿಗಳಿಂದ
ಕಿರಿಕಿರಿ ಸಾಧ್ಯತೆ. ಆರೋಗ್ಯದಲ್ಲಿ ಸ್ಥಿರತೆ.

ಕಟಕ
ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಹತ್ತಿರದ
ಬಂಧುಗಳು ಮನೆಗೆ ಆಗಮಿಸಲಿದ್ದಾರೆ.
ದೂರದೂರಿನ ಪ್ರಯಾಣಕ್ಕೆ ಬ್ರೇಕ್ ಹಾಕಿರಿ.

ಸಿಂಹ
ಒಂದೇ ಮನಸ್ಸಿನಲ್ಲಿ ಅಂದುಕೊಂಡ ಕಾರ್ಯ
ಗಳನ್ನು ಮಾಡಿ ಮುಗಿಸಿ. ನಾಲ್ಕಾರು
ಮಂದಿಯ ಮಾತಿಗೆ ಚಿಂತೆ ಮಾಡದಿರಿ

ಕನ್ಯಾ
ಸಾಧ್ಯವಾದಷ್ಟು ಮಿತವಾಗಿ ಖರ್ಚು ಮಾಡಿರಿ.
ಸಂಸಾರದಲ್ಲಿ ಸಂತೋಷ ಇರಲಿದೆ. ಸಕಾ
ರಾತ್ಮಕ ಗುಣ ಹೆಚ್ಚಿಸಿಕೊಳ್ಳಿರಿ. ಶುಭಫಲ.

ತುಲಾ 
ಮತ್ತೊಬ್ಬರ ಗಾಯದ ಮೇಲೆ ಬರೆ
ಎಳೆಯುವುದು ಬೇಡ. ನಿಮ್ಮ ಪಾಡಿಗೆ ನೀವು
ಇರಿ. ದಿನಾಂತ್ಯಕ್ಕೆ ಶುಭವಾರ್ತೆ ಕೇಳುವಿರಿ.

ವೃಶ್ಚಿಕ
ಉಳಿತಾಯದ ಕಡೆಗೆ ಹೆಚ್ಚಿನ ಗಮನ ನೀಡಿರಿ.
ಪತ್ನಿಯೊಂದಿಗೆ ಕಲಹ ಬೇಡ. ಶುದ್ಧ
ಮನಸ್ಸಿನಿಂದ ಇಡೀ ದಿನ ಕಳೆಯುವಿರಿ. ಧನುಸ್ಸು

ಧನಸ್ಸು
ಒಂದು ಗೆಲುವಿಗಾಗಿ ಮೂರು ಸೋಲುಗಳನ್ನು
ಎದುರಿಸಬೇಕಾಗುತ್ತದೆ. ನಂಬಿಕೆ ಇರಲಿ,
ಛಲದಿಂದ ಮುಂದೆ ಸಾಗಿ. ಕೋಪ ಬೇಡ.

ಮಕರ
ಬಂಧುಗಳ ಮನೆಗೆ ಹೋಗಬೇಕು
ಎಂದುಕೊಂಡರೂ ಅದು ಸಾಧ್ಯವಾಗುವು
ದಿಲ್ಲ. ಪದೇ ಪದೇ ದುಡುಕುವುದು ಬೇಡ.

ಕುಂಭ
ವೇಗವಾಗಿ ಕೆಲಸ ಕಾರ್ಯ ಮುಗಿಸಿಕೊಳ್ಳಿ.
ಅಧಿಕ ಹೊರೆ ಬೀಳುವ ಸಾಧ್ಯತೆ ಇದೆ.
ತಾಳ್ಮೆಯಿಂದ ಎಲ್ಲವನ್ನೂ ಗೆಲ್ಲುವಿರಿ.

ಮೀನ 
ಸಿಟ್ಟು ಕಡಿಮೆ ಮಾಡಿಕೊಳ್ಳಿರಿ. ಇನ್ನೊಬ್ಬರನ್ನು
ಹೆಚ್ಚಾಗಿ ಅವಲಂಬಿಸುವುದು ಬೇಡ. ನಿಮ್ಮ
ಬುದ್ದಿ ನಿಮ್ಮ ಕೈಯಲ್ಲಿ ಇರಲಿ. ಶುಭಫಲ.

PREV
click me!

Recommended Stories

ಚಾಣಕ್ಯ ನೀತಿಯ ಪ್ರಕಾರ ಇಂಥ ಸಂಗಾತಿ ಸಿಕ್ಕರೆ ಜೀವನಪೂರ್ತಿ ಕಷ್ಟ ತಪ್ಪಿದ್ದಲ್ಲ!
ಜೆನ್‌ ಜೀ ಮನಗೆದ್ದ ಭಗವದ್ಗೀತೆ: ಏನಿದರ ಗುಟ್ಟು?