ಒಂದು ರಾಶಿಗೆ ಭಾರೀ ಎಚ್ಚರ ಅತ್ಯಗತ್ಯ : ರಾಶಿಗಳ ಈ ವಾರದ ಫಲಾ ಫಲ

By Suvarna News  |  First Published Mar 15, 2020, 7:17 AM IST

ಈ ವಾರದ ರಾಶಿಗಳ ಫಲಾ ಫಲ ಹೇಗಿದೆ..? ನಿಮ್ಮ ಭವಿಷ್ಯ ಹೇಗಿದೆ ತಿಳಿದುಕೊಳ್ಳಿ 


ಒಂದು ರಾಶಿಗೆ ಭಾರೀ ಎಚ್ಚರ ಅತ್ಯಗತ್ಯ : ರಾಶಿಗಳ ಈ ವಾರದ ಫಲಾ ಫಲ


ಮೇಷ
ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ ಸಿಗಲಿದೆ. ಬಹು
ದಿನಗಳ ಕನಸು ನನಸಾಗಲಿದೆ. ಸಂಬಂಧಗಳ
ಬಗ್ಗೆ ಎಚ್ಚರಿಕೆ ಇರಲಿ. ರಾಜಕಾರಣಿಗಳ
ಜೀವನದಲ್ಲಿ ದೊಡ್ಡ ತಿರುವು ಏರ್ಪಡಲಿದೆ. ವಿದ್ಯಾರ್ಥಿಗಳು
ತುಸು ಪರಿಶ್ರಮ ಹಾಕುವುದು ಒಳಿತು. ಹಿಂದಿನ
ನಿರಂತರವಾದ ಪರಿಶ್ರಮಕ್ಕೆ ಒಳ್ಳೆಯ ಪ್ರತಿಫಲ ಸಿಗಲಿದೆ.

Tap to resize

Latest Videos

undefined

ವೃಷಭ
ಆತ್ಮೀಯರು ಕಷ್ಟಕಾಲದಲ್ಲಿ ಸಹಾಯ
ಮಾಡಲಿದ್ದಾರೆ. ಮಾಡುವ ಕೆಲಸಗಳಲ್ಲಿ ನಿರೀಕ್ಷಿತ
ಫಲ ದೊರೆಯಲಿದೆ. ಆರೋಗ್ಯದಲ್ಲಿ ಚೇತರಿಕೆ
ಕಾಣಲಿದೆ. ಉಳಿತಾಯಕ್ಕೆ ಹೆಚ್ಚಿನ ಆದ್ಯತೆ ನೀಡಿ. ಹೊಸ
ಮನೆ ಕೊಳ್ಳುವವರಿಗೆ ಒಳ್ಳೆಯ ದಿನಗಳಿವು. ಮಕ್ಕಳ
ವಿದ್ಯಾಭ್ಯಾಸದಲ್ಲಿ ಪ್ರಗತಿ. ಯೋಚಿಸಿ ನಿರ್ಧಾರ ಕೈಗೊಳಿ

ಮಿಥುನ
ಅಧಿಕ ಧನಾಗಮನವಾಗಲಿದೆ. ಕೆಲಸದಲ್ಲಿ ಆಸಕ್ತಿ
ಇರಲಿ. ಗೆಳೆಯರ ಸಾಧನೆಯಿಂದ ಸಂತೋಷ
ಗೊಳ್ಳುವಿರಿ. ಹತ್ತಿರದ ಬಂಧುಗಳೊಂದಿಗೆ
ಆರ್ಥಿಕ ವ್ಯವಹಾರ ಬೇಡ. ಉದ್ಯೋಗದಲ್ಲಿ ಒಳ್ಳೆಯ
ಬೆಳವಣಿಗೆಯಾಗಲಿದೆ. ಆರ್ಥಿಕ ಪ್ರಗತಿ. ವಾರಂತ್ಯದ
ವೇಳೆಗೆ ನಿಮ್ಮ ಪಾಲಿಗೆ ಶುಭವಾರ್ತೆ ತಿಳಿಯಲಿದೆ.

ಕಟಕ
ಣಕಾಸಿನ ತೊಂದರೆಯಿಂದ ಸ್ವಲ್ಪ ಹೊರಗೆ
ಬರುವಿರಿ. ಖರ್ಚಿನ ಮೇಲೆ ಸಾಧ್ಯವಾದಷ್ಟು
ಹಿಡಿತ ಸಾಧಿಸಿ. ಕ್ರೀಡಾಪಟುಗಳಿಗೆ ಒಳ್ಳೆಯ
ಅವಕಾಶಗಳು ದೊರಕಲಿವೆ. ಉದ್ಯೋಗ ಬದಲಾವಣೆ
ಸಾಧ್ಯತೆ. ದೂರದ ಪ್ರಯಾಣ ಮಾಡುವಾಗ ಅಗತ್ಯ
ಮುನ್ನೆಚ್ಚರಿಕೆ ವಹಿಸುವುದು ಸೂಕ್ತ. ಶುಭಫಲವಿದೆ.

ಸಿಂಹ
ದೂರದ ಪ್ರಯಾಣದಿಂದ ಜೀವನಕ್ಕೆ ಹೊಸ
ಹುರುಪು ಬರಲಿದೆ. ನಿಮ್ಮ ಕಾರ್ಯವನ್ನು
ಹೆಚ್ಚಿನ ಸಂಖ್ಯೆಯ ಜನರು ಮೆಚ್ಚಿಕೊಳ್ಳಲಿದ್ದಾರೆ.
ಉಳಿತಾಯದ ಹಣ ಬಳಕೆಯಾಗಲಿದೆ. ಆಲೋಚಿಸಿ
ನಿರ್ಧಾರಗಳನ್ನು ತೆಗೆದುಕೊಳ್ಳಿ. ಅಧಿಕಾರದ ಸ್ಥಾನದಲ್ಲಿ
ರುವವರು ಸಮಾಜಮುಖಿ ಕಾರ್ಯಗಳನ್ನು ಮಾಡುವಿರಿ.

ಕನ್ಯಾ
ಸಾಹಸ ಪ್ರಿಯರಿಗೆ ಹೆಚ್ಚು ಅವಕಾಶಗಳಿವೆ.
ರಾಜಕಾರಣಿಗಳಿಗೆ ಮುನ್ನಡೆ ಸಿಗಲಿದೆ. ಅಸಹಾ
ಯಕರಿಗೆ ಕೈಲಾದ ಸಹಾಯ ಮಾಡಿ. ಉದ್ಯೋಗ
ದಲ್ಲಿ ಪ್ರಗತಿ. ದೊಡ್ಡವರ ಮಾತಿಗೆ ಬೆಲೆ ನೀಡಿ. ಮಾಡುವ
ಕೆಲಸದಲ್ಲಿ ಶ್ರದ್ಧೆ ಇರಲಿ. ಕೆಟ್ಟ ಆಲೋಚನೆಗಳಿಂದ ಹೊರ
ಬರುವಿರಿ. ಪುಣ್ಯ ಕ್ಷೇತ್ರಗಳಿಗೆ ಹೋಗಿ ಬನ್ನಿ.

ತುಲಾ
ಚಿನ್ನಾಭರಣಕೊಳ್ಳುವ ಸಾಧ್ಯತೆ ಇದೆ. ಹತ್ತಿರದ
ಬಂಧುಗಳೊಂದಿಗೆ ಆತ್ಮೀಯವಾಗಿ ವರ್ತಿಸಿ.
ಉಳಿತಾಯದ ಕಡೆಗೆ ಆಸಕ್ತಿ ವಹಿಸುವಿರಿ. ಮಕ್ಕಳ
ಆರೋಗ್ಯದ ಕಡೆ ಗಮನವಿರಲಿ. ಹೊಸ ವಾಹನ ಕೊಳ್ಳುವ
ಯೋಗ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ.
ದೂರದ ಸಂಬಂಧಿಕರ ಆಗಮನ. ಶುಭಫಲ.

ವೃಶ್ಚಿಕ
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಕ್ರಿಯ
ರಾಗುವಿರಿ. ಹಣಕಾಸಿನ ವ್ಯವಹಾರದಲ್ಲಿ ಅಗತ್ಯ
ಮುನ್ನೆಚ್ಚರಿಕೆ ವಹಿಸಿ. ಪ್ರೀತಿ ಪಾತ್ರರಿಂದ ಸಿಹಿ
ಸುದ್ದಿ ಕೇಳುವಿರಿ. ವಿದ್ಯಾರ್ಥಿಗಳ ಪಾಲಿಗೆ ಒಳ್ಳೆಯ ದಿನ
ಗಳಿವು. ಅನಗತ್ಯ ಗೊಂದಲಕ್ಕೆ ತುತ್ತಾಗುವುದು ಬೇಡ.
ಆಗುವುದೆಲ್ಲಾ ಒಳ್ಳೆಯದ್ದಕ್ಕೆ ಎಂಬ ಮಾತು ತಿಳಿಯಿರಿ.

ಧನಸ್ಸು
ಪುಸ್ತಕ ಓದುವ ಹವ್ಯಾಸವು ಅಧಿಕವಾಗಲಿದೆ.
ಹಣಕಾಸಿನ ವ್ಯವಹಾರದಲ್ಲಿ ಎಚ್ಚರಿಕೆ ವಹಿಸು
ವುದು ಅಗತ್ಯ. ಮನೆಯಲ್ಲಿ ಶೀಘ್ರವೇ ಶುಭ
ಕಾರ್ಯಗಳು ನಡೆಯಲಿವೆ. ಹೊಸ ಕೆಲಸಕ್ಕೆ ಮುಂದಾಗು
ವಿರಿ. ವಿನಾಕಾರಣ ಕೋಪ ಬೇಡ. ನೆಮ್ಮದಿ ಇರಲಿದೆ.

ಮಕರ
ಹೊಸ ವಾಹನ ಕೊಳ್ಳುವ ಸಾಧ್ಯತೆ. ಅನಿರೀಕ್ಷಿತ
ಘಟನೆಗಳಿಂದ ತಳಮಳ. ಧೈರ್ಯದಿಂದ
ಎಲ್ಲವನ್ನೂ ಎದುರಿಸಿ. ಮಾಡಿದ ಕೆಲಸಕ್ಕೆ ಪ್ರಶಂಸೆ
ದೊರೆಯಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ. ಖ್ಯಾತ
ನಾಮರನ್ನು ಭೇಟಿಯಾಗುವ ಅವಕಾಶ.

ಕುಂಭ
ಹೊಸ ವ್ಯಕ್ತಿಗಳ ಪರಿಚಯವಾಗಲಿದೆ. ಒಳ್ಳೆಯ
ದಿನಗಳ ಪ್ರಾರಂಭ. ಹಣಕಾಸಿನ ವಿಚಾರದಲ್ಲಿ
ಒಳ್ಳೆಯದಾಗಲಿದೆ. ಆರೋಗ್ಯದಲ್ಲಿ ಚೇತರಿಕೆ
ಕಾಣಲಿದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯ
ರಾಗುವಿರಿ. ಹೆಚ್ಚು ಹೆಚ್ಚು ವಿಚಾರಗಳನ್ನು ತಿಳಿದು
ಕೊಳ್ಳುವಿರಿ. ಸಾಲದಿಂದ ಮುಕ್ತರಾಗುವಿರಿ. ಶುಭಫಲ.

ಮೀನ
ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಿರಿ.
ಅನಾವಶ್ಯಕ ಗೊಂದಲಗಳಿಗೆ ಮಣೆ ಹಾಕುವುದು
ಬೇಡ. ಆದಾಯದಲ್ಲಿ ಏರಿಕೆ ಕಂಡುಬರಲಿದೆ.
ಹೊಸ ವಿಚಾರಗಳತ್ತ ಮನಸ್ಸು ಹರಿಯಲಿದೆ.
ಉದ್ಯೋಗ ದಲ್ಲಿ ಪ್ರಗತಿ. ಸಂಗಾತಿಯೊಂದಿಗೆ ಪ್ರೀತಿ
ಯಿಂದ ವರ್ತಿಸಿ.ಸಮಸ್ಯೆಗಳಿಗೆ ಪರಿಹಾರ ದೊರೆಯಲಿ

click me!