
ಕಾಗೆ ಕಾಣಿಸದ, ಕೂಗದ ಊರಿಲ್ಲ ಅಲ್ಲವೇ. ಹೀಗಾಗಿ ಕಾಗೆ ನಮ್ಮ ಜೀವನದ ಒಂದು ಅಂಗವಾಗಿದೆ ಎನ್ನಬಹುದು. ಕಾಗೆ ಕಂಡರೆ ಅನೇಕ ಜನರು ಓಡಿಸುತ್ತಾರೆ. ಮನೆಯ ಬಳಿ ಇದು ಬಂದು ಶಬ್ಧ ಮಾಡಿದರೆ ಕಿರಿಕಿರಿ ಆಗುತ್ತದೆ ಎನ್ನುವ ಕಾರಣಕ್ಕೆ ಜನರಿಗೆ ಇಷ್ಟವಾಗುವುದಿಲ್ಲ. ಆದರೆ ಜ್ಯೋತಿಷ್ಯದ ಪ್ರಕಾರ ಈ ಕಾಗೆ ನಮ್ಮ ಪೂರ್ವಜರ ಸಂಕೇತ ಎನ್ನಲಾಗುತ್ತದೆ. ಶ್ರಾದ್ಧಗಳ ಸಮಯದಲ್ಲಿ ತಪ್ಪದೇ ಕಾಗೆಗಳಿಗೆ ಆಹಾರವನ್ನು ನೀಡಲಾಗುತ್ತದೆ. ಈ ಕಾಗೆಗಳು ನಮ್ಮ ಪೂರ್ವಜರ ಬಗ್ಗೆ ಸಹ ಹಲವು ಸಂಕೇತಗಳನ್ನ ನೀಡುತ್ತದೆ.
ಕಾಗೆಯನ್ನು ಶನಿದೇವರ ವಾಹನ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಜ್ಯೋತಿಷ್ಯದ ಪ್ರಕಾರ ಕಾಗೆಯ ಮನೆ ಹತ್ತಿರ ಬಂದು ಕೂರುವುದಕ್ಕೂ ಹಾಗೂ ತಲೆಗೆ ಬಂದು ಕುಕ್ಕಿದರೂ ಅವುಗಳಿಗೆ ನೂರಾರು ಅರ್ಥಗಳಿದೆ. ಈ ಕಾಗೆಗಳು ನಮ್ಮ ಜೀವನದಲ್ಲಿ ಮುಂದೆ ನಡೆಯುವ ಅನೇಕ ವಿಚಾರಗಳ ಮುನ್ಸೂಚನೆ ನೀಡುತ್ತದೆ ಎನ್ನಲಾಗುತ್ತದೆ. ಕೆಲವರ ನಂಬಿಕೆಯ ಪ್ರಕಾರ ಈ ಕಾಗೆಗಳು ಸಾವಿನ ಸೂಚನೆಯನ್ನ ಸಹ ನೀಡುತ್ತದೆ. ಅದು ಹೇಗೆ?
ಕಾಗೆ ಅನಿರೀಕ್ಷಿತವಾಗಿ ಇದು ಏನಾದರೂ ನಮ್ಮ ತಲೆ ಮೇಲೆ ಕುಟ್ಟಿದರೆ ಅದಕ್ಕೆ ಕೆಟ್ಟ ಫಲಗಳು ಸಿಗುತ್ತದೆ ಎನ್ನುವ ನಂಬಿಕೆ ಇದೆ. ಮುಖ್ಯವಾಗಿ ನಿಮಗೆ ಈ ರೀತಿ ಕಾಗೆ ಕುಟ್ಟುವುದು ಅಶುಭ ಘಟನೆ ನಡೆಯುವ ಸೂಚನೆ ಇದು. ಹೀಗೆ ಕಾಗೆ ಕುಟ್ಟಿದರೆ, ಮುಂದಿನ ದಿನಗಳಲ್ಲಿ ನಿಮಗೆ ಯಾವುದಾದರೂ ಆಪತ್ತು ಕಾದಿದೆ. ಅಲ್ಲದೇ, ಸದ್ಯದಲ್ಲಿ ನೀವು ಅಶುಭ ಸುದ್ದಿ ಕೇಳುವ ಸಾಧ್ಯತೆ ಇರುತ್ತದೆ. ತಲೆಗೆ ಕಾಗೆ ಕುಕ್ಕಿದರೆ ಮನೆಯಲ್ಲಿ ನೋವಿನ ಘಟನೆ ನಡೆಯಬಹುದು. ನೀವು ಸಾವಿನ ಸುದ್ದಿ ಕೇಳುವಿರಿ ಎಂಬ ಸೂಚನೆಯಂತೆ. ಒಟ್ಟಾರೆಯಾಗಿ ಕಾಗೆ ನಿಮ್ಮ ತಲೆಗೆ ಕುಟ್ಟುವುದು ಅತ್ಯಂತ ಕೆಟ್ಟ ಸೂಚನೆ ಎಂದು ಪರಿಗಣಿಸಲಾಗುತ್ತದೆ.
ಅನೇಕ ಬಾರಿ ನಾವು ಒಂದೇ ಜಾಗದಲ್ಲಿ ಅನೇಕ ಕಾಗೆಗಳು ಕುಳಿತಿರುವುದನ್ನ ನೋಡುತ್ತೇವೆ. ಇದು ಬಹಳ ಸಾಮಾನ್ಯ. ಆದರೆ ಯಾವುದಾದರೂ ಮನೆಯ ಮೇಲೆ ಈ ರೀತಿ ಕಾಗೆಗಳು ಬಂದು ಕುಳಿತು ಜಗಳ ಮಾಡಲು ಅಥವಾ ಕೂಗಾಡಲು ಪ್ರಾರಂಭಿಸಿದರೆ ಅದು ಬಹಳ ಕೆಟ್ಟ ಸೂಚನೆ ಎನ್ನಲಾಗುತ್ತದೆ. ಮುಖ್ಯವಾಗಿ ಕೆಲವೇ ದಿನಗಳಲ್ಲಿ ಆ ಮನೆಯ ಮಾಲೀಕರು ಕಷ್ಟಗಳನ್ನ ಅನುಭವಿಸಬಹುದು, ಜೀವನದಲ್ಲಿ ಒಂದೆಲ್ಲಾ ಒಂದು ತೊಂದರೆಗಳು ಬರುತ್ತದೆ ಎನ್ನುವ ನಂಬಿಕೆ ಇದೆ.
ಕಾಗೆ ನಿಮ್ಮ ಬಾಲ್ಕನಿಯಲ್ಲಿ ಕುಳಿತು ತುಂಬಾ ಶಬ್ದ ಮಾಡಿದರೆ, ಅತಿಥಿಗಳು ನಿಮ್ಮ ಮನೆಗೆ ಬರುವ ಸಾಧ್ಯತೆ ಇರುತ್ತದೆ. ಶಕುನ ಶಾಸ್ತ್ರದ ಪ್ರಕಾರ, ಕಾಗೆಯು ಮಧ್ಯಾಹ್ನ ಉತ್ತರ ದಿಕ್ಕಿನಲ್ಲಿ ಶಬ್ದ ಮಾಡಿದರೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಕಾಗೆಯು ಪೂರ್ವ ದಿಕ್ಕಿಗೆ ಶಬ್ದ ಮಾಡಿದರೆ ಅದನ್ನೂ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ದಕ್ಷಿಣ ದಿಕ್ಕಿಗೆ ಮುಖಮಾಡಿ ಕುಳಿತು ಕೂಗುತ್ತಿದ್ದರೆ ತುಂಬಾ ಕೆಟ್ಟ ಸೂಚನೆ ಎನ್ನಬಹುದು. ಇದರ ಅರ್ಥ ಸದ್ಯದಲ್ಲಿ ನಿಮ್ಮ ಬಂಧುಗಳ ಮನೆಯಲ್ಲಿ ಯಾರದ್ದಾದರೂ ಸಾವಾಗಬಹುದು.
ಶಕುನ ಶಾಸ್ತ್ರದ ಪ್ರಕಾರ ನೀವು ಕಾಗೆ ನೀರು ಕುಡಿಯುವುದನ್ನು ನೋಡುವುದು ಒಳ್ಳೆಯ ಸಂಕೇತ ಎನ್ನಲಾಗುತ್ತದೆ. ಅದರಲ್ಲೂ ಎಲ್ಲಾದರೂ ಹೊರಗೆ ಹೋಗುವಾಗ ಕಾಗೆ ನೀರು ಕುಡಿಯುತ್ತಿದ್ದರೆ ಹೋಗುತ್ತಿರುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ ಎನ್ನುತ್ತಾರೆ ಪಂಡಿತರು. ಆದರೆ ಕಾಗೆ ಸ್ನಾನ ಮಾಡುವುದನ್ನು ನೋಡಬಾರದಂತೆ. ಕಾಗೆ ಹೊಂಡದಲ್ಲಿ ನಿಂತ ನೀರಿನಲ್ಲಿ ಮುಳುಗಿ ಎದ್ದು ರೆಕ್ಕೆಗಳನ್ನು ಕೊಡಹುವುದನ್ನು ನೋಡಿದರೆ ಅಶುಭ ಎನ್ನಲಾಗುತ್ತದೆ. ಹಾಗೆ ನೋಡಿದರೆ, ನಿಮ್ಮ ಸಾವಿನ ಸುಳ್ಳು ಸುದ್ದಿಯನ್ನು ಹಬ್ಬಿಸಬೇಕು, ಅದರಿಂದ ಕೆಟ್ಟದು ನಿವಾರಣೆಯಾಗುತ್ತದೆ ಎಂದು ನಂಬಿಕೆ ಹಲವು ಕಡೆ ಇದೆ.