ರಾಜ್ಯದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ಕರ್ನಾಟಕದ ಉತ್ತರ ಭಾಗ, ಮಲೆನಾಡು ಮತ್ತು ಕರಾವಳಿ ಮಳೆಯಿಂದ ಕೊಚ್ಚಿ ಹೋಗುತ್ತಿದೆ. ಅದು ಯಾರು ಏನು ಹೇಳುತ್ತಾರೋ ಈ ಪಂಚಾಂಗದಲ್ಲಿ ಉಲ್ಲೇಖ ಮಾಡಿದ್ದ ಸಂಗತಿ ಮಾತ್ರ ನಿಜವಾಗುತ್ತಿದೆ. ಭವಿಷ್ಯ ನಂಬೋದು...ಬಿಡೋದು.. ನಿಮಗೆ ಬಿಟ್ಟಿದ್ದು.. ಆದರೆ ಆಶ್ಲೇಷಾ ಮಳೆಯ ಬಗ್ಗೆ ಪಂಚಾಂಗದಲ್ಲಿ ಉಲ್ಲೇಖ ಮಾಡಿದ್ದ ಸಂಗತಿ ನಿಜವಾಗುತ್ತಿದೆ.
ಬೆಂಗಳೂರು(ಆ. 08) ಜ್ಯೋತಿಷಗಳ ಭವಿಷ್ಯ, ಪಂಚಾಂಗಗಳ ಭವಿಷ್ಯ ನಂಬೋದು ಬಿಡೋದು ಅವರವರ ನಂಬಿಕೆಗೆ ಬಿಟ್ಟಿದ್ದು. ಇಲ್ಲಿ ಒತ್ತಾಯವೂ ಇಲ್ಲ.. ಒತ್ತಡವೂ ಇಲ್ಲ.. ಮಳೆ.. ಮದುವೆ, ವೃತ್ತಿ, ರಾಜಕೀಯ, ದೇಶ.. ಹೀಗೆ ಹತ್ತು ಹಲವು ವಿಚಾರದ ಬಗ್ಗೆ ಭವಿಷ್ಯ ಹೇಳುವವರಿಗೇನೂ ಕೊರತೆ ಇಲ್ಲ. ಜೋತಿಷ್ಯ ಸಹ ಒಂದು ಉದ್ಯಮವಾಗಿ ಬೆಳೆದಿರುವುದನ್ನು ಒಪ್ಪಿಕೊಳ್ಳಲೇಬೇಕು.
ಆಗಸ್ಟ್ ತಿಂಗಳಿನಲ್ಲಿ ಉತ್ತರ ಕರ್ನಾಟಕ, ಮಲೆನಾಡು ಮತ್ತು ಕರಾವಳಿ ಭಾಗ ಹಿಂದೆಂದೂ ಕಂಡು ಕೇಳರಿಯದ ಮಳೆ ಕಾಣುತ್ತಿದೆ. ಸೋಶಿಯಲ್ ಮೀಡಿಯಾದಲ್ಲು ವೈರಲ್ ಆಗುತ್ತಿರುವ ಪಂಚಾಂಗದ ಪೋಟೋವೊಂದು ಮಳೆಯ ಭವಿಷ್ಯವನ್ನು ಕರಾರುವಕ್ಕಾಗಿ ಮೊದಲೆ ಹೇಳಿದೆ.
ಕರ್ನಾಟಕ ಪ್ರವಾಹ: ಸಾಕು ನಿಲ್ಲಿಸು ನಿನ್ನ ಪ್ರತಾಪ, ಮಳೆರಾಯ...!
ಸೋಶಿಯಲ್ ಮೀಡಿಯಾದಲ್ಲಿ ಸದ್ಯಕ್ಕೆ ಅದಿ ಹೆಚ್ಚು ಪಾರ್ವಡ್ ಆಗುತ್ತಿರುವ ಸಂದೇಶ ಎಂದರೆ ಅದು ಈ ಪಂಚಾಂಗದ ತುಣುಕೆ ಇರಬಹುದು. ಹಾಗಾದರೆ ಪಂಚಾಂಗದಲ್ಲಿ ಏನು ಬರೆಯಲಾಗಿದೆ? ಮೇಲ್ನೋಟಕ್ಕೆ ಇದು ಧಾರವಾಡ ಪಂಚಾಂಗದಂತೆ ಕಂಡುಬರುತ್ತಿದೆ.
ಆಶ್ಲೇಷಾ ಮಳೆಯು ಶ್ರಾವಣ ಶುದ್ಧ ತೃತೀಯಾ ಶನಿವಾರ ದಿನಾಂಕ 3-8-2019 ಶನಿವಾರ ಮಧ್ಯಾಹ್ನ 3.17 ಮಿನಿಟಿಗೆ ವೃಶ್ಚಿಕ ಲಗ್ನದಲ್ಲಿ ಪ್ರವೇಶವಾಗಿದೆ. ಮಂಡೂಕ ವಾಹನವಾಗಿದ್ದು ಸ್ತ್ರೀ-ಸ್ತ್ರೀ, ಚಂದ್ರ-ಚಂದ್ರ ಯೋಗವಾಗಿದೆ. ಸಮುದ್ರದಲ್ಲಿ ಇಳಿದು ಕುಂಬಾರ ಮನೆಯಲ್ಲಿ ವಾಸ ಮಾಡಿದ್ದಾನೆ. ಕೇಂದ್ರದಲ್ಲಿ ಚತುರ್ಥ ಸ್ಥಾನ ಮಾತ್ರ ಸಜಲ ರಾಶಿಯಾಗಿದೆ., ಉಳಿದ ಎಲ್ಲಾ ರಾಶಿಗಳು ನಿರ್ಜಲ ರಾಶಿಯಾಗಿವೆ.
ಚಂದ್ರ ವಾತನಾಡಿಯಲ್ಲಿಯೂ, ಮಂಗಳ ಜಲನಾಡಿಯಲ್ಲಿಯೂ, ಗುರು ಅಮೃತನಾಡಿಯಲ್ಲಿಯೂ, ಶುಕ್ರ ಮಾತ್ರ ಸೌಮ್ಯ ನಾಡಿಯಲ್ಲಿಯೂ, ಶನಿ ಅಗ್ನಿ ನಾಡಿಯಲ್ಲಿಯೂ ಇರುವುದರಿಂದ ಈ ಮಳೆಯು ನಮ್ಮ ಕರ್ನಾಟಕದ ಉತ್ತರ ಭಾಗಕ್ಕೆ ಮಾತ್ರ ಖಂಡ ಮಂಡಲವಾಗಿ ಸುರಿಯುತ್ತದೆ. ದಕ್ಷಿಣದ ಭಾಗಕ್ಕೆ ಹೋದಂತೆ ಉತ್ತಮದಿಂದ ಸ್ವಲ್ಪ ಹೆಚ್ಚೆನಿಸುವಷ್ಟು ಸುರಿಯುವುದು. ಪೂರ್ವದ ಕಡೆಗೆ ಮಾತ್ರ ತುಂತುರಾಗಿ ಮಳೆಯಾಗುವ ಸಂಭವ ಇರುತ್ತದೆ. ಪಶ್ಚಿಮ ಭಾಗದಲ್ಲಿ ಮಾತ್ರ ಅನಾವೃಷ್ಟಿ ಆಘುತ್ತದೆ.
ಕರ್ನಾಟಕ: ಇನ್ನು ಮೂರು ಗಂಟೇಲಿ ಭಾರೀ ಮಳೆ, ಜೋಪಾನ
ಅಂತೂ ಈ ಮಳೆಯೂ ಮೂರನೇ ಚರಣದಲ್ಲಿ ಎಂಟು ಆಣೆ ಪ್ರಮಾಣ ಇದ್ದು ಸಾಧಾರಣ ವೃಷ್ಟಿ ಸಂಭವ ದಿನಾಂಗಳೆಂದರೆ 5,7,8,9 ,10, 11, 12, 16, 18. ನಮ್ಮ ಕರ್ನಾಟಕದ ಉತ್ತರ ಭಾಗಕ್ಕೆ ಮಾತ್ರ ಖಂಡ ಮಂಡಲವಾಗಿ ಸುರಿಯುತ್ತದೆ ಎಂಬ ಮಾತು ನಿಜವಾಗುತ್ತಿದೆ. ಯಾರು ಏನೇ ಹೇಳಿದರೂ ಮಳೆಯನ್ನು ಸಹಿಸಿಕೊಳ್ಳದೇ ಬೇರೆ ದಾರಿ ನಮ್ಮ ಮುಂದೆ ಉಳಿದಿಲ್ಲ.