
ಬೆಂಗಳೂರು (ಫೆ.20): ದೆಹಲಿಯಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು, ಮಹಿಳೆಯೊಬ್ಬರು ಸಿಎಂ ಆಗಲಿದ್ದಾರೆ ಎಂದು ಕರ್ನಾಟಕದ ಮೂಲದ ಜ್ಯೋತಿಷಿ ಪ್ರಶಾಂತ್ ಕಿಣಿ ಹೇಳಿದ್ದ ಭವಿಷ್ಯವಾಣಿ ನಿಜವಾಗಿತ್ತು. 2024ರ ಅಕ್ಟೋಬರ್ 13 ರಂದು ಅವರು ಮಾಡಿದ್ದ ಟ್ವೀಟ್‌ನಲ್ಲಿ ಬಿಜೆಪಿ ದೆಹಲಿಯಲ್ಲಿ ಅಧಿಕಾರ ಪಡೆಯಲಿದೆ ಎಂದು ಬರೆದಿದ್ದರೆ, ಮುಖ್ಯಮಂತ್ರಿ ಸ್ಥಾನ ಕೂಡ ಮಹಿಳೆಯೊಬ್ಬರಿಗೆ ಸಿಗಲಿದೆ ಎಂದು ಅವರು ಬರೆದುಕೊಂಡಿದ್ದರು. ಅದರಂತೆ ಜಿದ್ದಾಜಿದ್ದಿನಿಂದ ಕೂಡಿದ್ದ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 48 ಸ್ಥಾನ ಗೆದ್ದು 27 ವರ್ಷಗಳ ಬಳಿಕ ಅಧಿಕಾರ ಪಡೆದುಕೊಂಡಿದ್ದಲ್ಲದೆ, ಇದೇ ಮೊದಲ ಬಾರಿಗೆ ಶಾಸಕಿಯಾಗಿದ್ದ 50 ವರ್ಷದ ರೇಖಾ ಗುಪ್ತಾರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಿತತು. ನಾಲ್ಕು ತಿಂಗಳ ಹಿಂದೆ ತಾವೇ ಮಾಡಿದ್ದ ಟ್ವೀಟ್‌ಅನ್ನು ಪ್ರಶಾಂತ್ ಕಿಣಿ ನೆನಪಿಸಿ, ನಾನು ಹೇಳಿದ್ದು ನಿಜವಾಗಿದೆ ಎಂದಿದ್ದರು.
ಇದರ ಬೆನ್ನಲ್ಲಿಯೇ ಕರ್ನಾಟಕದ ರಾಜಕೀಯದ ಬಗ್ಗೆ ಅವರು 2024ರ ಏಪ್ರಿಲ್ 11 ರಂದು ಮಾಡಿದ್ದ ಟ್ವೀಟ್‌ಅನ್ನು ಮತ್ತೊಮ್ಮೆ ನೆನಪಿಸಿದ್ದಾರೆ. ಕರ್ನಾಟಕದ ಮುಂದಿನ ಮುಖ್ಯಮಂತ್ರಿಯ ಬಗ್ಗೆ ನನ್ನ ಭವಿಷ್ಯ. 2025ರ ಏಪ್ರಿಲ್‌ನಲ್ಲಿ ಸಿದ್ಧರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಕರ್ನಾಟಕದಿಂದ ಒಂದು ಮಹಿಳೆ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಲಕ್ಷ್ಮೀ ಹೆಬ್ಬಾಳ್ಕರ್ ಕರ್ನಾಟಕದ ಮುಂದಿನ ಸಿಎಂ ಆಗಬಹುದು ಎಂದು ಅವರು ಬರೆದಿದ್ದರು.
ದೆಹಲಿ ಸಿಎಂ ವಿಚಾರದಲ್ಲಿ ತಮ್ಮ ಪ್ರೆಡಿಕ್ಷನ್ ನಿಜವಾದ ಬೆನ್ನಲ್ಲಿಯೇ ಅವರು ಮತ್ತೊಮ್ಮೆ ಇದನ್ನು ನೆನಪಿಸಿದ್ದಾರೆ. ಶೀಘ್ರದಲ್ಲಿಯೇ ಸಿದ್ಧರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರ ಎಂದು ತಿಳಿಸಿದ್ದಾರೆ.
ದರ್ಶನ್-ಸುದೀಪ್ ಒಂದಾಗುವ ಸುದಿನ ಹತ್ತಿರ ಬಂದಿದೆ; ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ
ಇದಕ್ಕೆ ಕಾಮೆಂಟ್ ಮಾಡಿರುವ ಹಲವರು, ಹಾಗೇನಾದರೂ ಇದು ನಿಜವೇ ಆದಲ್ಲಿ ಕರ್ನಾಟಕದ ರಾಜಕೀಯದಲ್ಲಿ ಅಲ್ಲೋಲ ಕಲ್ಲೋಲವಾಗೋದು ಖಚಿತ ಎಂದಿದ್ದಾರೆ. 'ಅಸಾಧ್ಯ, ಕನಸು ಮನಸಲ್ಲೂ ಇದು ಆಗೋದಿಲ್ಲ. ಇದು ಸಾಧ್ಯವೇ ಆಗದಿರುವ ಮಾತು. ಹಾಗೇನಾದರೂ ಇದು ನಿಜವೇ ಆದಲ್ಲಿ ನಿಮ್ಮ ಕಾಲ ಬಳಿ ನನ್ನ ತಲೆ ಇಡುತ್ತೇನೆ. ನನ್ನ ಮುಂದಿನ ಜೀವನದಲ್ಲಿ ಎಲ್ಲಾ ನಿರ್ಧಾರಕ್ಕೂ ಮುನ್ನ ನಿಮ್ಮ ಮಾತನ್ನೇ ಕೇಳುತ್ತೇನೆ' ಎಂದು ಒಬ್ಬರು ಬರೆದಿದ್ದಾರೆ. 'ಕಾಂಗ್ರೆಸ್ ಪಕ್ಷದಿಂದ ಸಿಎಂ ಆಗ್ತಾರಾ? ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಆಗ್ತಾರಾ?' ಎಂದು ಮತ್ತೊಬ್ಬರು ತಮಾಷೆ ಮಾಡಿದ್ದರೆ, ಕಾಂಗ್ರೆಸ್‌ನಿಂದ ಆದಲ್ಲಿ ಸತೀಶ್ ಜಾರಕಿಹೊಳಿ ಒಪ್ಪಬೇಕಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಹಾಗೇನಾದರೂ ನೀವು ಹೇಳಿದಂತೆ ಲಕ್ಷ್ಮೀ ಹೆಬ್ಬಾಳ್ಕರ್ ಸಿಎಂ ಆದಲ್ಲಿ, ಡಿಕೆ ಶಿವಕುಮಾರ್ ಖಂಡಿತವಾಗಿ ಕಾಂಗ್ರೆಸ್ ಪಕ್ಷವನ್ನು ಪಡೆದು ಚೂರು ಮಾಡುತ್ತಾರೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
Shani Sade Sati: ಈ ರಾಶಿ ಜನರು 2025ರಲ್ಲಿ ಶನಿ ಸಾಡೇಸಾತಿಯಿಂದ ತೊಂದರೆಗೊಳಗಾಗುತ್ತಾರೆ, ಶನಿಯ ಕೋಪಕ್ಕೆ ಗುರಿ