ರಾಜಯೋಗದ ಜೊತೆ ಲಕ್ಷ್ಮೀದೇವಿಯ ಕೃಪೆಯೂ ಇವರ ಮೇಲೆ ಸದಾ ಇರುತ್ತದೆ. ಅಂಗೈಯಲ್ಲಿನ ರೇಖೆಗಳು ಮತ್ತು ಗುರುತುಗಳು ವ್ಯಕ್ತಿಯ ವ್ಯಕ್ತಿತ್ವ, ಸ್ವಭಾವ ತಿಳಿಸುತ್ತವೆ.
ಜಾತಕ, ಹುಟ್ಟಿದ ದಿನಾಂಕದ ಪ್ರಕಾರ ಜ್ಯೋತಿಷ್ಯ ನುಡಿಯಲಾಗುತ್ತದೆ. ಅಂಗೈಯಲ್ಲಿನ ರೇಖೆಗಳು ಮತ್ತು ಗುರುತುಗಳ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯ ನಿರ್ಧರವಾಗಿರುತ್ತದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರ ಹೇಳುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೆಲವು ರೇಖೆಗಳು ಜೀವನದ ಅದೃಷ್ಟವನ್ನು ಹೇಳುತ್ತವೆ. ಇಂತಹ ವಿಶೇಷ ರೇಖೆಯನ್ನು ಹೊಂದಿರುವ ವ್ಯಕ್ತಿಗಳು ಸಮಾಜದಲ್ಲಿ ಉನ್ನತ ಸ್ಥಾನ ಪಡೆಯುತ್ತಾರೆ. ಇಂತಹವರ ಜೀವನದಲ್ಲಿಯೂ ಸದಾ ಯಶಸ್ಸು ಹೊಂದಿರುತ್ತಾರೆ. ಯಾವುದೇ ವ್ಯಕ್ತಿಯ ಅಂಗೈಯಲ್ಲಿರುವ ಅಡ್ಡ ರೇಖೆಗಳು ಆರೋಗ್ಯ, ವೃತ್ತಿ, ಮದುವೆ, ವ್ಯಕ್ತಿತ್ವ, ಸಂಪತ್ತು ಸೇರಿದಂತೆ ಹಲವು ರಹಸ್ಯಗಳನ್ನು ಹೇಳುತ್ತವೆ. ಈ ರೇಖೆಗಳು ವ್ಯಕ್ತಿಯ ಜೀವನದ ಭವಿಷ್ಯ ಹೇಳುವ ಕಣ್ಣುಗಳು ಎಂದು ಜ್ಯೋತಿಷ್ಯ ಶಾಸ್ತ್ರಜ್ಞರು ತಿಳಿಸುತ್ತಾರೆ.
ಜ್ಯೋತಿಷ್ಯದ ಕಣ್ಣುಗಳು ಎಂದು ಕರೆಯಲಾಗುವ ಅಂಗೈಯಲ್ಲಿನ ರೇಖೆಗಳ ಮೂಲಕ ವರ್ತಮಾನವನ್ನು ತಿಳಿದುಕೊಳ್ಳಬಹುದು. ಈ ವಿಶೇಷ ರೇಖೆಗಳನ್ನು ಹೊಂದಿರುವ ವ್ಯಕ್ತಿಗಳು ರಾಜರಂತೆ ಬದುಕುತ್ತಾರೆ. ರಾಜಯೋಗದ ಜೊತೆ ಲಕ್ಷ್ಮೀದೇವಿಯ ಕೃಪೆಯೂ ಇವರ ಮೇಲೆ ಸದಾ ಇರುತ್ತದೆ. ಅಂಗೈಯಲ್ಲಿನ ರೇಖೆಗಳು ಮತ್ತು ಗುರುತುಗಳು ವ್ಯಕ್ತಿಯ ವ್ಯಕ್ತಿತ್ವ, ಸ್ವಭಾವ ತಿಳಿಸುತ್ತವೆ. ವ್ಯಕ್ತಿಯ ರಾಜಯೋಗ ಹೇಳುವ ರೇಖೆಗಳು ಯಾವವು ಅಂತ ನೋಡೋಣ ಬನ್ನಿ.
1.ಕಮಾನು, ಬಾಣ, ರಥ, ಚಕ್ರ ಅಥವಾ ಧ್ವಜ
ಬಲ ಅಂಗೈಯ ಮಧ್ಯ ಭಾಗದಲ್ಲಿ ಕಮಾನು, ಬಾಣ, ರಥ, ಚಕ್ರ ಅಥವಾ ಧ್ವಜದ ರೀತಿಯ ಹೋಲುವ ಚಿಹ್ನೆಗಳಿದ್ದರೆ ಅವರು ತುಂಬಾ ಅದೃಷ್ಟವಂತರು. ಅಂಗೈಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಈ ರೀತಿಯ ಚಿಹ್ನೆಗಳು ಕಾಣಿಸುತ್ತವೆ. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಈ ಚಿಹ್ನೆಗಳನ್ನು ಹೊಂದಿರುವವರು ಸರ್ಕಾರಿ ಆಡಳಿತದಲ್ಲಿ ಉನ್ನತ ಸ್ಥಾನ ತಲುಪುವ ಅವಕಾಶಗಳಿರುತ್ತವೆ. ಇವರ ಜೀವನದಲ್ಲಿ ಯಶಸ್ಸು ಎಂಬುವುದು ಸದಾ ಜೊತೆಯಲ್ಲಿಯೇ ಇರುತ್ತದೆ. ಒಂದು ರೀತಿ ಇವರು ರಾಜರಂತೆ ಸುಖವಾಗಿ ಜೀವನ ನಡೆಸುತ್ತಾರೆ. ಅಪಾರ ಸಂಪತ್ತು ಹೊಂದಿರುವ ಇವರು ಎಲ್ಲಾ ಸುಖ ಅನುಭವಿಸುತ್ತಾರೆ.
2.ಹೆಬ್ಬೆರಳಿನ ಮೇಲಿರುತ್ತೆ ಚಿಹ್ನೆಗಳು
ಹೆಬ್ಬೆರಳಿನ ಮೇಲೆ ಮೀನು, ವೀಣೆ ಅಥವಾ ಸರೋವರದ ಚಿಹ್ನೆ ಹೊಂದಿರುವ ವ್ಯಕ್ತಿಗಳು ದೊಡ್ಡ ಉದ್ಯಮಿಗಳಾಗಿ ಲಕ್ಷ್ಮೀ ಪುತ್ರರಾಗುತ್ತಾರೆ. ಈ ಚಿಹ್ನೆ ಹೊಂದಿರುವ ಜನರು ಕೈ ಹಾಕಿದ ಎಲ್ಲಾ ಕೆಲಸದಲ್ಲಿಯೂ ಸಕ್ಸಸ್ ಕಾಣುತ್ತಾರೆ. ಸಮಾಜದಲ್ಲಿಯೂ ಖ್ಯಾತ ವ್ಯಕ್ತಿಯಾಗಿ ಗುರುತಿಸಿಕೊಳ್ಳುವ ಇವರು ಗೌರವ ಸ್ಥಾನದಲ್ಲಿರುತ್ತಾರೆ. ಈ ಗುರುತುಗಳು ಬಹಳ ಸೂಕ್ಷ್ಮವಾಗಿರೋದರಿಂದ ತುಂಬಾ ಹತ್ತಿರ ಅಥವಾ ಭೂತಗನ್ನಡಿಯ ಸಹಾಯದಿಂದ ನೋಡಿದಾಗ ಮಾತ್ರ ಕಾಣಸುತ್ತವೆ.
Surya Ketu Yuti 2024: 18 ವರ್ಷಗಳ ನಂತರ ಸೂರ್ಯ-ಕೇತುವಿನ ಸಂಯೋಗ, ಬದಲಾಗಲಿದೆ 5 ರಾಶಿಚಕ್ರದವರ ಜೀವನ
3.ಶನಿ ರೇಖೆ
ಅಂಗೈಯಲ್ಲಿನ ಪುಣ್ಯ ರೇಖೆಯು ಉಂಗುರದ ಬೆರಳಿನ ಕೆಳಗೆ ಮತ್ತು ಶನಿ ರೇಖೆಯು ಮಣಿಕಟ್ಟಿನಿಂದ ಮಧ್ಯದ ಬೆರಳಿಗೆ ಹೋದರೆ ನೀವು ರಾಜಯೋಗಕ್ಕೆ ಅರ್ಹರು ಎಂದರ್ಥ. ಈ ರೀತಿಯ ವಿಶೇಷ ರೇಖೆ ಹೊಂದಿರುವವರ ಮೇಲೆ ಶನಿದೇವನ ಅನುಗ್ರಹ ಇರುತ್ತದೆ ಎಂದು ಹಸ್ತಸಾಮುದ್ರಿಕ ಶಾಸ್ತ್ರ ಹೇಳುತ್ತದೆ. ಈ ರೇಖೆಯನ್ನು ಹೊಂದಿರುವ ಜನರು ಆಡಳಿತಾತ್ಮಕ ವಿಭಾಗದಲ್ಲಿ ಉನ್ನತ ಸ್ಥಾನ ಹೊಂದಿರುತ್ತಾರೆ. ಹಾಗೆಯೇ ಅಪಾರ ಸಂಪತ್ತಿನ ಒಡೆಯರಾಗಿರುತ್ತಾರೆ.
4.ತ್ರಿಶೂಲ ಚಿಹ್ನೆ
ಅಂಗೈಯಲ್ಲಿ ತ್ರಿಶೂಲದ ಚಿಹ್ನೆ ಹೊಂದಿರುವವರು ಸಮಾಜದಲ್ಲಿ ಗೌರವಕ್ಕೆ ಪಾತ್ರರಾಗುತ್ತಾರೆ. ತ್ರಿಶೂಲದ ಚಿಹ್ನೆಯು ಹೃದಯ ರೇಖೆಯ ಕೊನೆಯಲ್ಲಿ ಗುರು ಪರ್ವತದ ಬಳಿ ಇದ್ದರೆ ಆ ವ್ಯಕ್ತಿಯು ರಾಜಕೀಯದಲ್ಲಿ ದೊಡ್ಡ ಸ್ಥಾನವನ್ನು ಪಡೆಯುವ ಮೂಲಕ ಜನಪ್ರಿಯ ವ್ಯಕ್ತಿಯಾಗುತ್ತಾರೆ ಎಂದು ಹಸ್ತಸಾಮುದ್ರಿಕ ಶಾಸ್ತ್ರ ಹೇಳುತ್ತದೆ.
ಪಿತೃದೋಷ, ನಾಗದೋಷ ನಿವಾರಣೆಗಾಗಿ ನಾಗಪಂಚಮಿ ದಿನದಂದು ಮಾಡಿ ಈ 6 ಕೆಲಸ
Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಜ್ಯೋತಿಷಿಗಳು, ಪಂಚಾಂಗ, ಧಾರ್ಮಿಕ ಗ್ರಂಥ, ನಂಬಿಕೆ ಹಾಗೂ ಅಂತರ್ಜಾಲದಲ್ಲಿ ಲಭ್ಯವಿರೋ ವಿಷಯವನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ.