ಚಾಣಕ್ಯ ನೀತಿ: ಹೆಂಡತಿ ತನ್ನ ಪತಿಗೆ ಎಂದಿಗೂ ಈ ವಿಷಯಗಳನ್ನು ಹೇಳಿಕೊಳ್ಳಬಾರದು!

By Mahmad Rafik  |  First Published Jun 2, 2024, 3:56 PM IST

ಜೀವನದಲ್ಲಿಯ ಸಂಬಂಧಗಳ ಮಹತ್ವವನ್ನು ಹೇಳಿರುವ ಆಚಾರ್ಯ ಚಾಣಕ್ಯರು, ಯಾರಿಗೆ ಯಾರು ಗೌರವ ನೀಡಬೇಕು?  ಯಾರ ಜೊತೆ ಹೇಗೆ ಮಾತನಾಡಬೇಕು ಅನ್ನೋದನ್ನು ಸಹ ವಿವರವಾಗಿ ಹೇಳಿದ್ದಾರೆ. 


ಗಂಡ-ಹೆಂಡತಿ ಜೀವನ ಪಾರದರ್ಶಕವಾಗಿರಬೇಕು. ಇಬ್ಬರ ಮಧ್ಯೆ ಯಾವುದೇ ಮುಚ್ಚುಮರೆ ಇರಬಾರದು. ಹಾಗಿದ್ರೆ ಮಾತ್ರ ಸಂಸಾರದ ಬಂಡಿ ಯಾವುದೇ ಅಡೆತಡೆ ಇಲ್ಲದೇ ಸಾಗುತ್ತದೆ. ಆದ್ರೆ ಪತಿ-ಪತ್ನಿ (Husband And Wife) ನಡುವೆ ಕೆಲವು ರಹಸ್ಯಗಳು ಇರಬೇಕು. ಎಂದಿಗೂ ಇಬ್ಬರು ಈ ರಹಸ್ಯಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಾರದು ಎಂದು ಆಚಾರ್ಯ ಚಾಣಕ್ಯರು ತಮ್ಮ ನೀತಿಗಳಲ್ಲಿ ಹೇಳಿದ್ದಾರೆ. ಚಾಣಕ್ಯ ನೀತಿ (Chanakya Niti) ಪ್ರಕಾರ ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳದಿರೋದು ಸಂಸಾರಕ್ಕೆ ಒಳ್ಳೆಯದು. ಹಾಗಾದ್ರೆ ಚಾಣಕ್ಯ ನೀತಿಯಲ್ಲಿ ಹೇಳಿರುವ ಆ ವಿಷಯಗಳು ಏನು ಅಂತ ನೋಡೋಣ ಬನ್ನಿ. 

ಪ್ರಖ್ಯಾತ ತತ್ವಜ್ಞಾನಿ ಮತ್ತು ಆರ್ಥಿಕ ತಜ್ಞ ಚಾಣಕ್ಯನ ಮಾತುಗಳು ಇಂದಿನ ಜನರ ಜೀವನಕ್ಕೂ ಹೊಂದಾಣಿಕೆ ಆಗುತ್ತವೆ. ಪ್ರಸ್ತುತ ಜೀವನ ಮತ್ತು ನಡವಳಿಕೆಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಜೀವನದಲ್ಲಿಯ ಸಂಬಂಧಗಳ ಮಹತ್ವವನ್ನು ಹೇಳಿರುವ ಆಚಾರ್ಯ ಚಾಣಕ್ಯರು, ಯಾರಿಗೆ ಯಾರು ಗೌರವ ನೀಡಬೇಕು?  ಯಾರ ಜೊತೆ ಹೇಗೆ ಮಾತನಾಡಬೇಕು ಅನ್ನೋದನ್ನು ಸಹ ವಿವರವಾಗಿ ಹೇಳಿದ್ದಾರೆ. 

Tap to resize

Latest Videos

ಪತಿ-ಪತ್ನಿಯರ ಸಂಬಂಧ ಹೇಗಿರಬೇಕು? ಯಾವುದೇ ಜಗಳಗಳಿಲ್ಲದೇ ಹೇಗೆ ಸಂಸಾರ ನಡೆಸಬೇಕು? ಇದಕ್ಕಾಗಿ ಪತಿ ಮತ್ತು ಪತ್ನಿ ಯಾವ ನಿಯಮಗಳನ್ನು ಪಾಲಿಸಬೇಕು ಎಂಬುದನ್ನು ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಹೆಂಡತಿ ಕೆಲವು ವಿಷಯಗಳನ್ನು ಗಂಡನಿಂದ ಮುಚ್ಚಿಡಬಹುದು. ಪತ್ನಿ ಮುಚ್ಚಿಡುವ ಆ ವಿಷಯಗಳು ಏನು ಗೊತ್ತಾ? ಇಲ್ಲಿದೆ ಮಾಹಿತಿ

1.ಸೀಕ್ರೆಟ್ ಕ್ರಶ್ 
ಚಾಣಕ್ಯ ಹೇಳುವಂತೆ ಪ್ರತಿಯೊಬ್ಬ ಮಹಿಳೆಗೆ ಒಂದು ಸೀಕ್ರೆಟ್ ಕ್ರಶ್ ಇರುತ್ತಂತೆ. ಈ ಕ್ರಶ್ ಯಾವುದೇ ವಯಸ್ಸಿನಲ್ಲಿ ಆಗಿರಬಹುದು. ಜೀವನದಲ್ಲಿ ಪರ ಪುರುಷನ ಮೇಲೆ ಹಲವು ವಿಚಾರಗಳಿಗೆ ಪ್ರೇಮಾಂಕುರ ಆಗಬಹುದು. ಆದರೆ ಇದು ಒನ್ ಸೈಡ್ ಲವ್‌ ಆಗಿರುತ್ತದೆ. ಆತ್ಮೀಯರ ಬಳಿಯೂ ಮಹಿಳೆ ತನ್ನ ಮೊದಲ ಪ್ರೀತಿ ವಿಷಯವನ್ನು ಹೇಳಿಕೊಂಡಿರಲ್ಲ. ಇದು ಜೀವನದಲ್ಲಿ ರಹಸ್ಯವಾಗಿ ಉಳಿದುಕೊಂಡಿರುತ್ತವೆ. ಮದುವೆ ಬಳಿಕ ಈ ವಿಷಯವನ್ನು ಗಂಡನೊಂದಿಗೆ ಹಂಚಿಕೊಳ್ಳಬಾರದು. ಒಂದು ವೇಳೆ ಹೇಳಿಕೊಂಡರೆ ಗಂಡ ಪತ್ನಿಯ ಸೀಕ್ರೆಟ್ ಕ್ರಶ್ ಜೊತೆ ತನ್ನನ್ನು ಹೋಲಿಸಿಕೊಳ್ಳಲು ಆರಂಭಿಸುತ್ತಾನೆ. ಈ ಒಂದು ನಡವಳಿಕೆ ಸಂಸಾರದ ಬಿರುಕಿಗೆ ಕಾರಣವಾಗಬಹುದು. 

ಗಂಡ ಹೆಂಡತಿ ಹೆಚ್ಚು ವಯಸ್ಸಿನ ಅಂತರ ಡಿವೋರ್ಸ್‌ಗೆ ಕಾರಣವಂತೆ ಗೊತ್ತಾ?

2.ಲೈಂಗಿಕತೆಯ ತೃಪ್ತಿ
ಚಾಣಕ್ಯ ಹೇಳುವ ಪ್ರಕಾರ ಮಹಿಳೆಯರಿಗೆ ಲೈಂಗಿಕ ಆಸಕ್ತಿ ಮತ್ತು ಬಯಕೆ ಪುರುಷರಿಗಿಂತ ಹೆಚ್ಚಾಗಿರುತ್ತದೆ. ಲೈಂಗಿಕ ಪ್ರಕ್ರಿಯೆ ನಂತರ ಮಹಿಳೆ ತನ್ನ ಗಂಡನಿಗೆ ಸಂತೃಪ್ತ ಭಾವನೆ ಹೊಂದಿರೋದಾಗಿ ಸುಳ್ಳು ಹೇಳುತ್ತಾಳೆ. ಗಂಡ ನಿರಾಶೆಯಾಗದಿರಲಿ ಅನ್ನೋ ಕಾರಣಕ್ಕೆ ತನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುತ್ತಾಳೆ. ಈ ಸುಳ್ಳು ಸುಖ ಸಂಸಾರಕ್ಕೆ ಒಳ್ಳೆಯದು. ಈ ರೀತಿ ಸುಳ್ಳು ಹೇಳುವದರಲ್ಲಿ ಯಾವುದೇ ತಪ್ಪಿಲ್ಲ ಎಂದು ಚಾಣಕ್ಯ ಹೇಳುತ್ತಾರೆ. 

3.ಉಳಿತಾಯದ ಹಣ 
ದುಡಿಯುವ ಮಹಿಳೆ ಅಥವಾ ಗೃಹಿಣಿಯಾಗಿರಲಿ ಅವರು ರಹಸ್ಯವಾಗಿ ಹಣ ಉಳಿಸಿರುತ್ತಾರೆ. ಅದಕ್ಕಾಗಿಯೇ ಮಹಿಳೆಯನ್ನು ಗೃಹಲಕ್ಷ್ಮಿ ಎಂದು ಕರೆಯಲಾಗುತ್ತದೆ. ಮಹಿಳೆ ತನ್ನ ಬಳಿ ಎಷ್ಟು ಹಣವಿದೆ ಎಂಬ ವಿಷಯವನ್ನು ಪತಿ ಜೊತೆ ಎಂದಿಗೂ ಹಂಚಿಕೊಳ್ಳಲ್ಲ. ಈ ಹಣವನ್ನು ಕುಟುಂಬದ ಅವಶ್ಯಕತೆಗಳಿಗೆ ಬಳಕೆ ಮಾಡುತ್ತಾರೆ. ಕುಟುಂಬಕ್ಕೆ ತುರ್ತು ಸಂದರ್ಭದಲ್ಲಿ ಈ ಹಣ ಉಪಯೋಗಕ್ಕೆ ಬರುತ್ತದೆ ಎಂದು ಮಹಿಳೆ ತನ್ನ ಉಳಿತಾಯವನ್ನು ತೆಗೆದಿರಿಸುತ್ತಾಳೆ. 

ವೇಶ್ಯೆಯರು ಇವರನ್ನು ಶತ್ರುಗಳಂತೆ ಕಾಣ್ತಾರೆ; ಯಾಕೆ ಗೊತ್ತಾ? ಚಾಣಕ್ಯ ನೀತಿಯಲ್ಲಿದೆ ವಿವರ

4.ಅನಾರೋಗ್ಯ
ಮಹಿಳೆ ತಾನು ಎಷ್ಟೇ ದಣಿದಿದ್ದರೂ ಅದನ್ನ ಗಂಡನೊಂದಿಗೆ ಹೇಳಿಕೊಳ್ಳಲ್ಲ. ಅನಾರೋಗ್ಯದ ವಿಷಯಗಳನ್ನು ಸಹ ಮಹಿಳೆ ಗಂಡನಿಂದ ಬಚ್ಚಿಡುತ್ತಾಳೆ. ತನ್ನ ಅನಾರೋಗ್ಯದ ಸಮಯದಲ್ಲಿಯೂ ಕುಟುಂಬದ ಸದಸ್ಯರಿಗೆ ತೊಂದರೆಯಾಗದಂತೆ ಹೊಂದಿಕೊಂಡು ಮಹಿಳೆ ಹೋಗುತ್ತಾಳೆ.

click me!