ಕೈಗಳಿಗೆ ಬಳೆ ಏಕೆ ಧರಿಸಬೇಕು?

By Web Desk  |  First Published May 15, 2019, 12:52 PM IST

ಭಾರತದಲ್ಲಿ ಹೆಣ್ಣು ಮಕ್ಕಳು ಬಳೆ ಧರಿಸುವುದು ಕಾಮನ್. ಆದರೆ, ಈಗೀಗ ವಿವಿಧ ಕಾರಣಗಳಿಂದ ಅದು ಕಡಿಮೆಯಾಗುತ್ತಿದೆ. ಹಿಂದೆ ಮಾಡಿರುವ ಆಚಾರ ವಿಚಾರಗಳಿಗೆ ತನ್ನದೇ ಆದ ಮಹತ್ವವಿದೆ. ಅಷ್ಟಕ್ಕೂ ಬಳೆ ಧರಿಸುವುದರಿಂದ ಏನು ಉಪಯೋಗ?


ಮಹಿಳೆಯರು ಕೈಗೆ ಬಳೆ, ಕಾಲಿಗೆ ಗೆಜ್ಜೆ, ಕಾಲ್ಬೆರಳಿಗೆ ಉಂಗುರ, ಕಿವಿಗೆ ಓಲೆ, ಮೂಗಿಗೆ ನತ್ತು ಇವುಗಳನ್ನೆಲ್ಲ ಧರಿಸಬೇಕು ಎಂಬುದು ಕೇವಲ ಅಲಂಕಾರಕ್ಕೆ ಅಲ್ಲ. ಅಥವಾ ಇವು ಬರೀ ಸಂಪ್ರದಾಯ ಅಥವಾ ಸಂಸ್ಕೃತಿಗೆ ಸಂಬಂಧಿಸಿದ ಸಂಗತಿಗಳೂ ಅಲ್ಲ. ಇವುಗಳ ಹಿಂದೆ ಪ್ರತಿಯೊಂದಕ್ಕೂ ಶರೀರಶಾಸ್ತ್ರ, ಆರೋಗ್ಯ ಹಾಗೂ ಮಾನಸಿಕತೆಗೆ ಸಂಬಂಧಿಸಿದ ಕಾರಣಗಳಿವೆ.

ನಮ್ಮ ದೇಹದಲ್ಲಿ ಕೈನ ಮಣಿಕಟ್ಟು ಅತ್ಯಂತ ಶಕ್ತಿಯುತ ಜಾಗ. ಅಲ್ಲಿ ಸಾಕಷ್ಟು ಶಕ್ತಿ ಉತ್ಪನ್ನವಾಗುತ್ತದೆ. ಆ ಶಕ್ತಿ ದೇಹದ ಎಲ್ಲ ಭಾಗಕ್ಕೂ ಹರಡುತ್ತದೆ. ಬಳೆ ಧರಿಸುವುದು ಇದೇ ಮಣಿಕಟ್ಟಿನ ಸುತ್ತ. ಈ ಮಣಿಕಟ್ಟು ಪದೇ ಪದೇ ಬಳೆಯ ಸಂಪರ್ಕಕ್ಕೆ ಬಂದು ಪ್ರಚೋದನೆಗೆ ಒಳಗಾಗುವುದರಿಂದ ರಕ್ತ ಪರಿಚಲನೆ ಹೆಚ್ಚುತ್ತದೆ. ಹಿಂದೆಲ್ಲ ಮಹಿಳೆಯರು ಪುರುಷರಂತೆ ದೇಹಕ್ಕೆ ಹೆಚ್ಚು ಶ್ರಮ ನೀಡುವ ಕೆಲಸ ಮಾಡದೆ ಸಣ್ಣಪುಟ್ಟ ಮನೆಗೆಲಸಗಳಲ್ಲೇ ಮುಳುಗಿರುತ್ತಿದ್ದರು. ಆಗ ಅವರ ದೇಹಕ್ಕೆ ಹೆಚ್ಚು ಶಕ್ತಿಯನ್ನು ನೀಡುವ ಕೆಲಸವನ್ನು ಬಳೆ ಮಾಡುತ್ತಿತ್ತು. ಕೈಗಳು ನಿರಂತರವಾಗಿ ಅಲುಗಾಡುವುದರಿಂದ ಬಳೆಯ ಘರ್ಷಣೆಯೊಂದಿಗೆ ಹಿದ್ಯುತ್ಕಾಂತೀಯ ತರಂಗಗಳು ಉತ್ಪನ್ನವಾಗಿ ಅವು ಇಡೀ ದೇಹಕ್ಕೆ ಹರಡುತ್ತಿದ್ದವು. ಬಳೆ ವೃತ್ತಾಕಾರವಾಗಿರುವುದರಿಂದ ಅಲ್ಲಿ ಉತ್ಪನ್ನವಾದ ಶಕ್ತಿ ಬೇರೆಲ್ಲಿಗೂ ವರ್ಗಾವಣೆಯಾಗದೆ ನರವ್ಯೂಹದ ಮೂಲಕ ನಮ್ಮ ದೇಹಕ್ಕೇ ವರ್ಗವಣೆಯಾಗಬೇಕು. ಇದರ ಪ್ರಮಾಣ ಬಹಳ ಸಣ್ಣದಾದರೂ ನಿರಂತರವಾಗಿ ಈ ಶಕ್ತಿ ದೇಹಕ್ಕೆ ಸಿಗುತ್ತಾ ಇರುವುದರಿಂದ ನಾವು ಕ್ರಿಯಾಶೀಲರಾಗಿರಲು ಬಳೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

Latest Videos

undefined

ಹಳೆ ಆಚಾರ, ಹೊಸ ವಿಚಾರಕ್ಕೆ ಸಂಬಂಧಿಸಿದ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಗರ್ಭಿಣಿ ಮಹಿಳೆಗೆ ಸೀಮಂತ ಮಾಡಿ ಕೈತುಂಬಾ ಗಾಜಿನ ಬಳೆ ಇರಿಸುತ್ತಾರೆ. ಈ ಬಳೆಗಳ ಶಬ್ದ ಬೆಳೆಯುತ್ತಿರುವ ಭ್ರೂಣಕ್ಕೆ ಸಂಗೀತದ ಹಾಗೆ! ಮಗು ತನ್ನ ತಾಯಿಯನ್ನು ಗುರುತಿಸಲು ಅವು ನೆರವಾಗುತ್ತವೆ. ಇನ್ನು, ಲೋಹದ ಬಳೆ ಇಲ್ಲವೇ ಕಡಗವು ನಾವು ಧರಿಸಿರುವ ಬಟ್ಟೆಗಳಿಂದ ಉತ್ಪಾದನೆಯಾಗಬಹುದಾದ ಸ್ಟಾಟಿಕ್ ಎಲೆಕ್ಟ್ರಿಸಿಟಿ ಸುಲಭವಾಗಿ ಹೊರಹರಿಸಲು ನೆರವಾಗುತ್ತದೆ. ಕೈತುಂಬ ಬಳೆಗಳನ್ನು ಧರಿಸಿದ್ದರೆ, ಅದು ಸಣ್ಣ ಪುಟ್ಟ ಪೆಟ್ಟುಗಳಿಂದ ಕೈಗಳನ್ನು ರಕ್ಷಿಸುತ್ತದೆ.

- ಮಹಾಬಲ ಸೀತಾಳಬಾವಿ
 

click me!