ರೋಗ ರುಜಿನ ದೂರವಾಗಲು ವಾಸ್ತು ಟಿಪ್ಸ್...

By Web DeskFirst Published Apr 7, 2019, 1:39 PM IST
Highlights

ಮನೆಯಲ್ಲಿ ಎಲ್ಲವೂ ವ್ಯವಸ್ಥಿತವಾಗಿದ್ದರೆ ಮನೆಯವರ ಮನಸ್ಸೂ ಹಾಗೂ ಆರೋಗ್ಯ ಚೆನ್ನಾಗಿರುತ್ತದೆ. ಮನೆ ಮಂದಿ ಎಲ್ಲರೂ ಆರೋಗ್ಯವಾಗಿರಬೇಕೆಂದರೆ ಕೆಲವು ವಾಸ್ತು ನಿಮಯಗಳನ್ನು ಪಾಲಿಸುವುದು ಅತ್ಯಗತ್ಯ.

ಪ್ರತಿಯೊಂದೂ ಮನೆ ವಾಸ್ತು ಶಾಸ್ತ್ರದ ಪ್ರಕಾರವಿದ್ದರೆ ಮನೆಯಲ್ಲಿ ಅಭಿವೃದ್ಧಿ, ಶಾಂತಿ ನೆಲೆಸುತ್ತದೆ. ಜೊತೆಗೆ ಆರೋಗ್ಯದ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಜನರು ಕೆಲವೊಂದು ವಾಸ್ತು ಟಿಪ್ಸ್ ಪಾಲಿಸಿದರೆ, ರೋಗ ರುಜಿನಗಳು ದೂರವಾಗುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ. 

  • ದೇಹದ ಮುಖ್ಯ ಭಾಗ ಹೊಟ್ಟೆ. ಅದೇ ರೀತಿ ಮನೆಯ ಮಧ್ಯ ಭಾಗ ದೇಹದ ಮೇಲೂ ಪರಿಣಾಮ ಬೀರುತ್ತದೆ. ಮನೆ ಮಧ್ಯ ಭಾಗ ಖಾಲಿಯಾಗಿರಬೇಕು. ಜೊತೆಗೆ ಸ್ವಚ್ಛವಾಗಿರಬೇಕು. ಮನೆ ಮಧ್ಯ ಭಾಗದಲ್ಲಿ ಇನ್ವರ್ಟರ್, ಮೆಟ್ಟಿಲು ಅಥವಾ ಟಾಯ್ಲೆಟ್ ಇದ್ದರೆ ಅದರಿಂದ ದೇಹದ ಮೇಲೆ ಪ್ರಭಾವ ಬೀರುತ್ತದೆ. 
  • ಪಾಂಡು ಪ್ಯಾಸೇಜು ಮಾಡಿಕೊಂಡಲ್ಲಿ ಡೈನಿಂಗ್ ಟೇಬಲ್ ಇಡಬಹುದು. ಆದರೆ ಭಾರವಾದ ವಸ್ತುಗಳಿನ್ನ ಇಡಬೇಡಿ. 
  • ಆಗ್ನೇಯ ದಿಕ್ಕು ಮಹಿಳೆ ಮತ್ತು ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ನೈಋತ್ಯ ಭಾಗ ಹಿರಿಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಎರಡು ಕಡೆಗಳಲ್ಲೂ ಸ್ಲೋಪ್, ಅಂಡರ್ ಗ್ರೌಂಡ್ ಟೆಂಟ್ ಅಥವಾ ಡ್ರೈನೇಜ್ ಸಿಸ್ಟಮ್ ಇರಬಾರದು. 
  • ಈಶಾನ್ಯದಲ್ಲಿ ಡಸ್ಟ್ ಬಿನ್, ಟಾಯ್ಲೆಟ್, ಗೋಡೌನ್ ಮೊದಲಾದವು ಇರಬಾರದು. ಜೊತೆ ಈ ಭಾಗ ಕ್ಲೀನ್ ಆಗಿರಬೇಕು. ಕಿಚನ್‌ನಲ್ಲಿ ಯಾವುದೇ ರೀತಿಯ ಮೆಡಿಸಿನ್ ಇಡಬಾರದು. ಇಟ್ಟರೆ ರೋಗಗಳನ್ನು ಆಹ್ವಾನಿಸಿದಂತೆ. 

ದಾಂಪತ್ಯ ವಿರಸ ಪರಿಹಾರಕ್ಕೆ ಬೆಡ್‌ರೂಂ ವಾಸ್ತು...

  • ಕಿಚನ್ ಅಗ್ನಿ ಮೂಲೆಯಲ್ಲಿರಬೇಕು. ಇರದಿದ್ದರೆ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. 
  • ಮನೆಯ ಆವರಣ ಗೋಡೆ ಮತ್ತು ಗೇಟ್ ಒಂದೇ ಎತ್ತರದಲ್ಲಿರಬೇಕು. ಗೇಟಿನ ಎರಡು ಭಾಗಗಳಲ್ಲೂ ಸಿಟ್ರಸ್ ಹಣ್ಣುಗಳ ಗಿಡನೆಟ್ಟರೆ ಅದರಿಂದ ಅರೋಗ್ಯ ಉತ್ತಮವಾಗಿರುತ್ತದೆ. 
  • ಮನೆಯ ಆಗ್ನೇಯ ದಿಕ್ಕಿನಲ್ಲಿ ಪ್ರತಿದಿನ ದೀಪ ಬೆಳಗಿಸಿದರೆ ಅರೋಗ್ಯ ಉತ್ತಮವಾಗಿರುತ್ತದೆ.
click me!