ಹಿಂದೂ ಧರ್ಮದಲ್ಲಿ ಪೂಜೆಗೆ ಮಹತ್ತರವಾದ ಸ್ಥಾನವಿದೆ. ಕೆಲವು ಪ್ರಾಣಿ, ಗಿಡ-ಮರಗಳನ್ನು ಪೂಜಿಸಿದರೆ ಸುಖ ಪ್ರಾಪ್ತಿಯಾಗುತ್ತದೆ. ಯಾವುದನ್ನು ಪೂಜಿಸಿದರೆ ಶ್ರೇಷ್ಠ?
ಗರುಡ ಪುರಾಣದಲ್ಲಿ ತಿಳಿಸಿದಂತೆ ಕೆಲವೊಂದು ಕೆಲಸಗಳನ್ನು ಮಾಡಿದರೆ ಜೀವನದಲ್ಲಿ ಸಫಲತೆ ಸಿಗುತ್ತದೆ. ಜೀವನದಲ್ಲಿ ಉನ್ನತಿ ಪಡೆಯಬೇಕಾದರೆ ಇವನ್ನು ಪೂಜಿಸಿ.
ವಿಷ್ಣು: ಗರುಡ ಪುರಾಣದ ಅನುಸಾರ ವಿಷ್ಣು ತನ್ನ ಭಕ್ತರ ದುಃಖವನ್ನು ದೂರ ಮಾಡುತ್ತಾನೆ. ಜೊತೆಗೆ ಜೀವನದಲ್ಲಿ ಸುಖ ಶಾಂತಿ ಸಿಗುವಂತೆ ಮಾಡುತ್ತಾನೆ. ಯಾರು ತಮ್ಮ ದಿನದ ಆರಂಭವನ್ನು ವಿಷ್ಣುವಿನ ಅರ್ಚನೆಯಿಂದ ಆರಂಭಿಸುತ್ತಾನೋ ಅವರಿಗೆ ಎಲ್ಲ ಕಾರ್ಯದಲ್ಲೂ ಸಫಲತೆ ಸಿಗುತ್ತದೆ.
undefined
ಹಸು: ಗೋವಿಗೆ ಹಿಂದೂ ಧರ್ಮದಲ್ಲಿ ಮಹತ್ವವಿದೆ. ಹಸುವಿನ ಶರೀರದ ಬೇರೆ ಬೇರೆ ಭಾಗಗಳಲ್ಲಿ ದೇವಿ -ದೇವತೆಗಳು ವಾಸಿಸುತ್ತಾರೆ ಎಂಬ ನಂಬಿಕೆ ಇದೆ. ಇದು ಹಲವು ಸಮಸ್ಯೆಗಳಿಗೆ ಪರಿಹಾರವೆನ್ನಲಾಗುತ್ತದೆ.
ಶಾಂತಿ ಶಾಂತಿ ಶಾಂತಿ ಎಂದು 3 ಸಲ ಹೇಳುವುದೇಕೆ?
ಗಂಗಾ ನದಿ: ಗಂಗಾ ನದಿಯನ್ನು ಎಲ್ಲ ನದಿಗಿಂತ ಶ್ರೇಷ್ಠವೆಂದು ಭಾವಿಸುತ್ತಾರೆ. ಗಂಗಾ ನದಿಯನ್ನು ಅವಮಾನಿಸುವುದು ತರವಲ್ಲ. ಗಂಗಾ ಜಲಕ್ಕೆ ಪೂಜಿಸಿದರೆ ಕೆಲಸದಲ್ಲಿ ಯಶಸ್ಸು ಗ್ಯಾರಂಟಿ.
ತುಳಸಿ: ತುಳಸಿ ಭಗವಾನ್ ಸ್ವರೂಪಿ. ಪ್ರತಿದಿನ ತುಳಸಿಗೆ ನೀರು ಹಾಕಿ ಪೂಜಿಸಿದರೆ ಶುಭ. ವಿಷ್ಣು ಪೂಜೆ ನಂತರ ತುಳಸಿಯನ್ನು ಪೂಜಿಸಬೇಕು.
ಪಂಡಿತ: ಜ್ಞಾನಿಯನ್ನು ಗೌರವಿಸುವುದು ಉತ್ತಮ. ಯಾರು ಜ್ಞಾನಿಯನ್ನು ಗೌರವಿಸುತ್ತಾರೋ ಅವರಿಗೆ ವನದಲ್ಲಿ ಯಶಸ್ಸು ಸಿಗುತ್ತದೆ.
ಏಕಾದಶಿ ವ್ರತ: ಗ್ರಂಥ ಮತ್ತು ಪುರಾಣದಲ್ಲಿ ಏಕಾದಶಿ ವ್ರತ ಮಾಡುವುದು ಶ್ರೇಷ್ಠ. ಯಾರು ಪೂರ್ತಿ ಶ್ರದ್ಧೆ ಮತ್ತು ಭಕ್ತಿಯಿಂದ ಏಕಾದಶಿ ವೃತ ಮಾಡುತ್ತಾರೋ ಅವರಿಗೆ ಶುಭ ಫಲ ಸಿಗುತ್ತದೆ.