ಒತ್ತಡ ನಿವಾರಣೆ, ಸಮೃದ್ಧಿಗೆ ವಾಸ್ತು ಟಿಪ್ಸ್...

By Web Desk  |  First Published Dec 12, 2018, 1:08 PM IST

ಒತ್ತಡ ಯಾರಿಗಿಲ್ಲ ಹೇಳಿ? ಮಗುವನ್ನು ಸ್ಕೂಲಿಗೆ ಸೇರಿಸಿದ ದಿನದಿಂದಲೇ ಆರಂಭವಾಗೋ ಈ ಒತ್ತಡ, ಮಣ್ಣಾಗೋವರೆಗೂ ಮನುಷ್ಯನನ್ನು ಬಿಡೋಲ್ಲ. ಅದರಲ್ಲಿಯೂ ಬೆಂಗಳೂರಿನಂಥ ಊರಲ್ಲಿ ಬದುಕೇ ಒತ್ತಡ. ಇದರ ನಿವಾರಣೆಗೆ ಇಲ್ಲಿದೆ ವಾಸ್ತು ಟಿಪ್ಸ್..


ಸ್ಟ್ರೆಸ್, ಸ್ಟ್ರೆಸ್...ಎಲ್ಲರದ್ದೂ ಇದೇ ನೋವು, ತೊಳಲಾಟ. ಕೆಲವೊಮ್ಮೆ ಎಲ್ಲವೂ ಸರಿ ಇದ್ದರೂ ಈ ಒತ್ತಡ ಇರುತ್ತೆ. ಯೋಗ, ಧ್ಯಾನದ ಜತೆಗೆ ಮನೆಯಲ್ಲಿ ಕೆಲವು ವಾಸ್ತು ಬದಲಾವಣೆಗಳನ್ನು ಮಾಡೋದ್ರಿಂದಲೂ ಒತ್ತಡವನ್ನು ನಿವಾರಿಸಿಕೊಳ್ಳಬಹುದು. ಅದಕ್ಕೆ ಇಲ್ಲಿವೆ ಕೆಲವು ಸಿಂಪಲ್ ಟಿಪ್ಸ್.

- ಊಟಕ್ಕೆ ಮರದ ಮೇಜು ಒಳಿತು. ಮಾರ್ಬಲ್ ಇತ್ಯಾದಿ ಟೇಬಲ್ ಮೇಲೆ ಊಟ ಮಾಡಿದರೆ ಒತ್ತಡ ಹೆಚ್ಚುತ್ತದೆ. 
- ಹಾಸಿಗೆ ಮೇಲೆ ಬೆಳಕು ಬೀಳಬಾರದು. ಬೆಳಕು ‌ಶಕ್ತಿಯ ಮೇಲೆ ಒತ್ತಡ ಹಾಕುವುದರಿಂದ ಜೀವನದಲ್ಲೂ ಒತ್ತಡ ಹೆಚ್ಚುತ್ತದೆ. 
- ಹಾಸಿಗೆಯನ್ನು ಗೋಡೆಗೆ ತಾಗಿಸಿ ಇರಿಸಬೇಕು. ಇದರಿಂದ ಆಳ ನಿದ್ರೆಯೊಂದಿಗೆ, ಉಲ್ಲಾಸದಿಂದ ಬೆಳಗ್ಗೆ ಏಳಬಹುದು. 
- ಅಡುಗೆ ಮನೆ ಸ್ಟವ್ ಹತ್ತಿರ ಫ್ರಿಡ್ಜ್, ವಾಷಿಂಗ್ ಮಷಿನ್, ವಾಷ್ ಬೇಸಿನ್ ಮತ್ತು ಟಾಯ್ಲೆಟ್ ಇರಬಾರದು. ಬೆಂಕಿ ಹಾಗೂ ಅಗ್ನಿ ಸಂಬಂಧದಿಂದ ಮನೆಯವರ ಸಂಬಂಧವೂ ಹಾಳಾಗಬಹುದು. ಸಂಬಂಧ ಹಾಳಾಯ್ತು ಎಂದರೆ ಒತ್ತಡ ಹೆಚ್ಚೋದು ಗ್ಯಾರಂಟಿ.
-ಅಕ್ವೇರಿಯಂ ಇಟ್ಟಾಗ ಏನಾದರೂ ಸಮಸ್ಯೆ ಎದುರಾದರೆ, ಸ್ಥಳ ಬದಲಾಯಿಸಿ. ಇಲ್ಲದಿದ್ದರೆ ಕಾನೂನು, ಆರ್ಥಿಕ ಸಮಸ್ಯೆಗಳ ಮೂಲಕ ಕೆಲಸದ ಒತ್ತಡವೂ ಹೆಚ್ಚುತ್ತದೆ. 
- ಮಲಗುವ ಹಾಸಿಗೆಗೆ ಎದುರಾಗಿ ಅಥವಾ ಪಕ್ಕದಲ್ಲಿ ಕನ್ನಡಿ ಇಡಬೇಡಿ. ಹಾಸಿಗೆ ಎದುರು ಕನ್ನಡಿಯಿದ್ದರೆ, ಅದು ಬೇರೆಯವನ್ನು ಆಕರ್ಷಿಸಬಹುದು. ಎಲ್ಲೆಂದರಲ್ಲಿಯೂ ಕನ್ನಡಿ ಇಡಬೇಡಿ. 
- ಮಲಗುವ ಕೋಣೆಯಲ್ಲಿ ಟೆಲಿವಿಷನ್ ಇರಬಾರದು.  ಒಂದು ವೇಳೆ ಇರಿಸಲೇಬೇಕಾದರೆ, ಟಿವಿ ವೀಕ್ಷಿಸಿದ ನಂತರ ಅದನ್ನು ಬಟ್ಟೆಯಿಂದ ಮುಚ್ಚಬೇಕು. 
- ಮನೆ ಹೊರಗೆ ಚಪ್ಪಲಿ ಮತ್ತು ಬೂಟುಗಳನ್ನು ಚೆಲ್ಲಾಪಿಲ್ಲಿಯಾಗಿ ಹರಡಬಾರದು.
- ಉತ್ತರದೆಡೆಗೆ ತಡೆ ಇದ್ದರೆ, ಅದು ಸಮೃದ್ಧಿಯನ್ನು ತಡೆಯುತ್ತದೆ. 
- ನೆಗಟಿವ್ ಪ್ರಭಾವ ಬೀರುವ ಕಾದಾಡುವ ಪ್ರಾಣಿಗಳು, ಹೂಗಳಿಲ್ಲದ ಗಿಡಮರಗಳು, ಸತ್ತ ಪ್ರಾಣಿಗಳು, ಯುದ್ಧ ದೃಶ್ಯ, ಇತರೆ ಸತ್ವ ರಹಿತ ಚಿತ್ರಗಳು  ಮನೆಯಲ್ಲಿಬಾರದು. 
- ಪೂಜೆಗೆ ಕಬ್ಬಿಣ, ಸ್ಟೈನ್ ಲೆಸ್ ಸ್ಟೀಲ್, ಅಲ್ಯೂಮಿನಿಯಂ ವಸ್ತುಗಳನ್ನು ಬಳಸಬಾರದು. 
- ಉತ್ತರ ದಿಕ್ಕಿಗೆ ತಲೆ ಇಟ್ಟುಕೊಂಡು ಮಲಗಬಾರದು.
-ಪಶ್ಚಿಮ ದಿಕ್ಕಿಗೆ ತಲೆ ಹಾಕಿ ಮಲಗಬಾರದು. ಇದು ದುಃಖ, ಅನಾರೋಗ್ಯ ಮತ್ತು ಅಸಂತೋಷವನ್ನು ಉಂಟು ಮಾಡುತ್ತದೆ.

Tap to resize

Latest Videos

ವಾಸ್ತು ಟಿಪ್ಸ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ

 

click me!