ಮನೆಯಲ್ಲಿರುವ ಜನರ ನೆಮ್ಮದಿಗಾಗಿಯೂ ವಾಸ್ತು ಶಾಸ್ತ್ರದಲ್ಲಿ ಒಂದಿಷ್ಟು ಉಪಾಯಗಳಿವೆ. ಅವುಗಳನ್ನು ಪಾಲಿಸಿದರೆ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.
ಮನೆಯಲ್ಲಿ ಶ್ರೀಮಂತಿಕೆ, ವಿದ್ಯೆ, ಕೆಲಸ ಇದ್ದರೆ ಮಾತ್ರ ಸಂತಸವಾಗಿರಲು ಸಾಧ್ಯವಿಲ್ಲ. ಮನೆಯಲ್ಲಿ ಶಾಂತಿ ನೆಲೆಸಿ ನೆಮ್ಮದಿಯಾಗಿದ್ದರೆ ಮಾತ್ರ ಮನೆ ಮಂದಿ ಸಂತಸವಾಗಿರಲು ಸಾಧ್ಯ. ಮನೆಯಲ್ಲಿ ಉಪಯೋಗ ಮಾಡುವಂತಹ ಕೆಲವೊಂದು ವಸ್ತುಗಳು ಮನೆಯವರ ನೆಮ್ಮದಿ ಹಾಳು ಮಾಡುತ್ತವೆ. ಅಲ್ಲದೆ ವಸ್ತುಗಳನ್ನು ಇಡುವಂತಹ ದಿಕ್ಕೂ ಸಮಸ್ಯೆ ತರುತ್ತದೆ. ಹಾಗಾದರೆ ನೆಮ್ಮದಿ ಇರಲು ಹೇಗಿರಬೇಕು ಮನೆ?
- ಮನೆಯ ಯಜಮಾನನ ಕೋಣೆಯಲ್ಲಿ ಸೋಫಾ ಮತ್ತು ಇತರ ಪೀಠೋಪಕರಣಗಳು ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿರಲಿ.
- ತಿಜೋರಿ ದಕ್ಷಿಣ ದಿಕ್ಕಿನಲ್ಲಿರಲಿ. ಅದನ್ನು ತೆರೆಯುವ ಸಮಯದಲ್ಲಿ ತಿಜೋರಿಯ ಮುಖ ಉತ್ತರ ದಿಕ್ಕಿನಲ್ಲಿರಲಿ.
- ಡೈನಿಂಗ್ ರೂಮಿನಲ್ಲಿ ಊಟ ಮಾಡುವ ಸಮಯದಲ್ಲಿ ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಊಟ ಮಾಡಿ.
- ಯಾವಾಗಲೂ ಪೂರ್ವ ಅಥವಾ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿ.
undefined
ಕಿಟಕಿ ಬಳಿ ಬೆಡ್ ಇದ್ದರೆ ದಾಂಪತ್ಯಕ್ಕೆ ಆಪತ್ತು...!
- ಎರಡು ಕೋಣೆಗಳ ಬಾಗಿಲು ಒಂದಕ್ಕೊಂದು ಎದುರು ಬದುರಾಗಿ ಇರದಂತೆ ನೋಡಿಕೊಳ್ಳಿ.
- ಮನೆಯ ಈಶಾನ್ಯ ದಿಕ್ಕಿನಲ್ಲಿ ಯಾವತ್ತೂ ಕಸ ಹಾಕಬೇಡಿ. ಆ ಜಾಗವನ್ನು ಸುಂದರವಾಗಿಡಿ.
- ಮನೆಯ ಅಡುಗೆ ಕೋಣೆಯ ಮುಖ್ಯ ಭಾಗ ಆಗ್ನೇಯ ದಿಕ್ಕು. ಇದನ್ನ ಅಗ್ನಿ ಮೂಲೆ ಎಂದು ಕರೆಯುತ್ತಾರೆ. ಇದು ಮನೆಯ ಒಂದು ಮುಖ್ಯವಾದ ಭಾಗವಾಗಿದೆ.
- ಅಡುಗೆ ಕೋಣೆಯಲ್ಲಿ ಫ್ರಿಜ್, ಮಿಕ್ಸಿ ಮತ್ತು ಇತರ ಭಾರವಾದ ಸಾಮಗ್ರಿಗಳನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇರಿಸಿ.
- ಮನೆಯಲ್ಲಿ ತೆರೆದ ಭಾಗ ಅಂದರೆ ಬಾಲ್ಕನಿ ಮೊದಲಾದ ಜಾಗ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇದ್ದರೆ ಉತ್ತಮ.
ಸೂರ್ಯ ರಶ್ಮಿ ಮೈ ತಾಕಿದರೆ ಚೆನ್ನ: ಬಂಗಾರದ ಬೆಳಕೇ ನೈಜ ಚಿನ್ನ!
- ಪೂಜೆಗಾಗಿ ಮನೆಯ ಈಶಾನ್ಯ ದಿಕ್ಕು ಅತ್ಯುತ್ತಮ. ಮೂರ್ತಿಯ ಮುಖ ಪೂರ್ವ ಅಥವಾ ಪಶ್ಚಿಮ ದಿಕ್ಕಿನಲ್ಲಿರಲಿ.
- ಬಾಲ್ಕನಿ ಉತ್ತರ, ಪೂರ್ವ ಅಥವಾ ಈಶಾನ್ಯ ದಿಕ್ಕಿನಲ್ಲಿದ್ದರೆ, ಸುಖ, ಸಮೃದ್ಧಿ ಮತ್ತು ಅರೋಗ್ಯ ಉತ್ತಮವಾಗುತ್ತದೆ.
- ಈಶಾನ್ಯ ದಿಕ್ಕಿನಲ್ಲಿ ಬಾತ್ ರೂಮ್ ಇರಲೇಬಾರದು, ಮುಖ್ಯವಾಗಿ ಟಾಯ್ಲೆಟ್ ಇರಲೇಬಾರದು. ಈ ದಿಕ್ಕಿನಲ್ಲಿ ಬಾತ್ ರೂಮ್ ಇದ್ದರೆ ಅಶುಭ ಎನ್ನಲಾಗುತ್ತದೆ.