Asianet Suvarna News Asianet Suvarna News

ಅಪಾಯದ ಅಂಚಿನಲ್ಲಿ ಭೂಮಿ: ವಿಶ್ವಸಂಸ್ಥೆ ಎಚ್ಚರಿಕೆ

ಜಾಗತಿಕ ತಾಪಮಾನ ಏರಿಕೆ, ಹಿಮನದಿಗಳು ಮತ್ತು ಸಮುದ್ರದಲ್ಲಿನ ನೀರ್ಗಲ್ಲು ಕುಸಿತ ಏರಿಕೆ, ಭೂಮಿ, ನೀರಿನ ಉಷ್ಣಾಂಶ ಹೆಚ್ಚಳವು ಆತಂಕಕಾರಿ ಮಟ್ಟ ತಲುಪಿದ್ದು ಭೂಮಿ ಅಪಾಯದ ಅಂಚಿನಲ್ಲಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಘಟನೆ ರೆಡ್ ಅಲರ್ಟ್ ನೀಡಿದೆ.

Earth on the brink United Nations warning gvd
Author
First Published Mar 20, 2024, 11:17 AM IST

ಜಿನೇವಾ (ಮಾ.20): ಜಾಗತಿಕ ತಾಪಮಾನ ಏರಿಕೆ, ಹಿಮನದಿಗಳು ಮತ್ತು ಸಮುದ್ರದಲ್ಲಿನ ನೀರ್ಗಲ್ಲು ಕುಸಿತ ಏರಿಕೆ, ಭೂಮಿ, ನೀರಿನ ಉಷ್ಣಾಂಶ ಹೆಚ್ಚಳವು ಆತಂಕಕಾರಿ ಮಟ್ಟ ತಲುಪಿದ್ದು ಭೂಮಿ ಅಪಾಯದ ಅಂಚಿನಲ್ಲಿದೆ ಎಂದು ವಿಶ್ವಸಂಸ್ಥೆಯ ವಿಶ್ವ ಹವಾಮಾನ ಸಂಘಟನೆ ರೆಡ್ ಅಲರ್ಟ್ ನೀಡಿದೆ. ಈ ಕುರಿತ ವರದಿ ಬಿಡುಗಡೆ ಮಾಡಿರುವ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟನಿಯೋ ಗ್ಯುಟೆರಸ್, "2023ನೇ ವರ್ಷ, ಉಷ್ಣಾಂಶ ದಾಖಲು ಆರಂಭವಾದ ಬಳಿಕ ಅತ್ಯಂತ ಉಷ್ಣತೆಯ ಮತ್ತು 2023ಕ್ಕೆ ಕೊನೆಗೊಂಡ ದಶಕವು, ಇತಿಹಾಸದಲ್ಲೇ ಅತ್ಯಂತ ಉಷ್ಣಾಂ ದಾಖಲಿಸಿದ ದಶಕವಾಗಿ ಹೊರಹೊಮ್ಮಿದೆ. 

ಇದು ಭೂಮಿ ಅತ್ಯಂತ ಅಪಾಯದ ಅಂಚಿನಲ್ಲಿದೆ ಎಂಬುದನ್ನು ತೋರಿಸುತ್ತದೆ'  ಎಂದು ಗ್ಯುಟೆರಸ್ ಹೇಳಿದ್ದಾರೆ. ವಿಶ್ವ ಹವಾಮಾನ ಇಲಾಖೆ ಬಿಡುಗಡೆ ಮಾಡಿದ ವರದಿ ಅನ್ವಯ 2023ರಲ್ಲಿ ಸರಾಸರಿ ತಾಪಮಾನ ಏರಿಕೆ 1.45 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದು ಇದು ಅತಿ ಆತಂಕಕ್ಕೆ ಕಾರಣವಾಗಿದೆ. 2015ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಹವಾಮಾನ ಸಮ್ಮೇಳನದಲ್ಲಿ ಅಂಗೀಕರಿಸಲ್ಪಟ್ಟ 1.5 ಡಿಗ್ರಿ ಸೆಲ್ಸಿಯಸ್ಗಿಂತ ಮಿತಿಗಿಂತ ಕೊಂಚವೇ ಕಡಿಮೆಯಾಗಿದೆ. 

ಮುಸ್ಲಿಂರ ಬಹುಪತ್ನಿತ್ವ ನೋಡಿ ಬೇರೆಯವರಿಗೆ ಹೊಟ್ಟೆಕಿಚ್ಚು: ಜಾವೇದ್ ಅಖ್ತರ್

2023ರಲ್ಲಿ ಭೂಮಿಯ ಶೇ.90ರಷ್ಟು ಸಾಗರ ಪ್ರದೇಶಗಳು ಉಷ್ಣ ಮಾರುತ ಕಂಡಿದೆ. ಇದರ ಪರಿಣಾಮವಾಗಿ ಸ್ವಿಜರ್ಲೆಂಡ್‌ನ ಅಲೈನ್ ಹಿಮ ಪರ್ವತದಲ್ಲಿ ಎರಡು ವರ್ಷದಲ್ಲಿ ಶೇ.20ರಷ್ಟು ಹಿಮ ಕರಗಿದೆ. ಅಂಟಾರ್ಟಿಕದಲ್ಲಿ ದಶಕದಲ್ಲಿ ಅತಿ ಹೆಚ್ಚು ಹಿಮಕರಗುವಿಕೆಯಾಗಿದೆ ಎಂದು ವರದಿ ಹೇಳಿದೆ. ಇನ್ನು ಈ ಹಿಮ ಕರಗುವಿಕೆ, ಸಮುದ್ರ ಉಷ್ಣತೆಯಿಂದಾಗಿ ಸಮುದ್ರ ಮಟ್ಟ ಏರಿಕೆಯಾಗಿದೆ. ಹವಳದ ದ್ವೀಪಗಳು ಕಳೆಗುಂದುತ್ತಿವೆ. ಜಲಚರಗಳು ನಶಿಸುತ್ತಿವೆ ಎಂದು ವರದಿ ಆತಂಕಕಾರಿ ಅಂಶಗಳನ್ನು ಹೊರಹಾಕಿದೆ.

Follow Us:
Download App:
  • android
  • ios