Asianet Suvarna News Asianet Suvarna News

ಭಾರತದ ಎಐ ಕಾರ್ಯತಂತ್ರ, ಅವಕಾಶಗಳ ಜೊತೆ ಅಪಾಯದ ಸವಾಲು!

ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಇದೀಗ ಎಲ್ಲಾ ಕ್ಷೇತ್ರಗಳನ್ನು ಹಾಸುಹೊಕ್ಕಿದೆ. ಎಐ ಬಳಕೆ ಒಂದು ದೇಶದ ಪ್ರಗತಿಯಲ್ಲೂ ಮಹತ್ವದ ಕೊಡುಗೆ ನೀಡಲಿದೆ. ಎಐ ಅವಕಾಶಗಳನ್ನು ಸೃಷ್ಟಿಸಲಿದೆ ನಿಜ, ಆದರೆ ಅಪಾಯಗಳನ್ನು ಸರಿದೂಗಿಸ ಬೇಕಾದ ಸವಾಲು ಕೂಡ ಇದೆ.  ಈ ನಿಟ್ಟಿನಲ್ಲಿ ಭಾರತದ ಗ್ಲೋಬಲ್ ಟೆಕ್ನಾಲಜಿ ಸಮ್ಮಿಟ್‌ನಲ್ಲಿ ತಜ್ಞರು ನೀಡಿದ ಉತ್ತರ ಇಲ್ಲಿದೆ.
 

India artificial intelligence Strategy balance between fostering innovation and mitigating risk ckm
Author
First Published Apr 9, 2024, 7:32 PM IST

ಭಾರತ ಡಿಜಿಟಲ್ ಇಂಡಿಯಾ ಯೋಜನೆ ಮೂಲಕ ಈಗಾಗಲೇ ದೇಶದಲ್ಲಿ ತಂತ್ರಜ್ಞಾನದ ಕ್ರಾಂತಿ ಮಾಡಿದೆ. ಭಾರತ ಇದೀಗ ವಿಶ್ವದಲ್ಲೇ ಡಿಜಿಟಲ್ ಹಬ್ ಆಗಿ ಹೊರಹೊಮ್ಮುತ್ತಿದೆ. ಈ ಪೈಕಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮಹತ್ವದ ಪಾತ್ರ ವಹಿಸುತ್ತಿದೆ. ಹಲವು ಕ್ಷೇತ್ರಗಳು ಎಐ ತಂತ್ರಜ್ಞಾನ ಬಳಸಿಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸಮಾಜಿಕ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ AI ಆ್ಯಪ್ಲಿಕೇಶನ್‌ಗಳನ್ನು ಪ್ರೋತ್ಸಾಹಿಸುತ್ತಿದೆ. ಆರೋಗ್ಯ ಸಮಸ್ಯೆಗಳ ಪತ್ತೆ ಹಚ್ಚುವಿಕೆ ಕೃಷಿ ಉತ್ಪಾದಕತೆ ಹೆಚ್ಚಿಸುವಿಕೆ, ಭಾಷ ವೈವಿದ್ಯತೆ ಸೇರಿದಂತೆ ಹಲವು AI ಆಧಾರಿತ ಆಪ್ಲಿಕೇಶನ್‌ಗಳನ್ನು ಪ್ರೋತ್ಸಾಹಿಸಿದೆ.

ಅತ್ಯಂತ ಪ್ರಭಾವಶಾಲಿಯಾಗಿ ಹಾಗೂ ಪರಿಣಾಮಕಾರಿಯಾಗಿ ತಂತ್ರಜ್ಞಾನ ಬಳಸಿಕೊಳ್ಳುವ ಕುರಿತು ಭಾರತ ನೀಡಿರುವ ಪ್ರಸ್ತಾವನಗೆ ವಿಶ್ವವೇ ಮನ್ನಣೆ ನೀಡುತ್ತಿದೆ. ಉದಾಹರಣೆಗೆ  ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು (DPI) ಹತೋಟಿಗೆ ತರುವ ಪ್ರಯತ್ನಗಳನ್ನು ವಿಶ್ವಬ್ಯಾಂಕ್ ಉಲ್ಲೇಖಿಸಿದೆ.   ಇದೀಗ ವಿಶ್ವದ ಗಮನ ತ್ವರಿತವಾಗಿ ಮಹತ್ತರ ಬದಲಾವಣೆ ತರಬಲ್ಲ AI ತಂತ್ರಜ್ಞಾನದ ಮೇಲೆ ಬಿದ್ದಿದೆ. ಭಾರತದ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ರಾಷ್ಟ್ರೀಯ ಕಾರ್ಯತಂತ್ರದ ಅತ್ಯಂತ ಪ್ರಭಾವಶಾಲಿಯಾಗಿದೆ. ಭಾರತದ ಹೊಸತನದ ಕಲ್ಯಾಣ ಆಧಾರಿತ ವಿಧಾನ ಅಭಿವೃದ್ಧಿ ಹೊಂದುತ್ತಿರುವ ಗ್ಲೋಬಲ್ ಸೌಥ್ ರಾಷ್ಟ್ರಗಳಿಗೆ ವರದಾನವಾಗಿದೆ.  

ಭಾರತ ಎಐ ಆಧಾರಿತ ರಾಷ್ಟ್ರೀಯ ಕಾರ್ಯತಂತ್ರದ ಕುರಿತು ಜಾಗತಿಕ ವೇದಿಕೆಯಲ್ಲಿ ಸ್ಪಷ್ಟ ಸಂದೇಶ ನೀಡಿದೆ. ಇತ್ತೀಚೆಗೆ ನಡೆದ ಜಿ20 ಶೃಂಗಸಭೆಯಲ್ಲಿ ವಿಶ್ವದ ನಾಯಕರು ಸಹಿ ಮಾಡಿದ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ  ನಾವೀನ್ಯತೆ ಆಡಳಿತ ವಿಧಾನ ಹಾಗೂ ಪರಿಣಾಮಕಾರಿ ಆಡಳಿತಲನ್ನು ಪ್ರತಿಪಾದಿಸುತ್ತದೆ. ಜಿ20ಯಲ್ಲಿ ಭಾರತ ಆಯೋಜಿಸಿದ್ದ ಎಐ ಜಾಗತಿಕ ಸಹಭಾಗಿತ್ವ ಸಭೆಯಲ್ಲಿ AI ಸಹಕಾರಿ ಪರಿಕಲ್ಪನೆ ರೂಪಿಸಲಾಗಿದೆ. ಈ ವೇಳೆ ಜಿ20 ಸದಸ್ಯ ರಾಷ್ಟ್ರಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಮಾನ ಪ್ರವೇಶ ಉತ್ತೇಜನಕ್ಕೆ ಒಪ್ಪಿಗೆ ಸೂಚಿಸಿದೆ. 

ಭಾರತದ AI ರಾಷ್ಟ್ರೀಯ ಕಾರ್ಯತಂತ್ರದ ಭಾಗವಾಗಿ ನೀತಿಗಳನ್ನು ರೂಪಿಸಲು ಪರಿಗಣಿಸಬೇಕಾದ ಪ್ರಮುಖ ಅಂಶಗಳು ಕುರಿತ ಮಾಹಿತಿ ಇಲ್ಲಿದೆ. 
ಡೇಟಾ: ಭಾರತ ಡೇಟಾವನ್ನು ಹೊಸತನದ ಆವಿಷ್ಕಾರ ಎಂದು ಪರಿಗಣಿಸಿದೆ. ಡೇಟಾ ಸಬಲೀಕರಣಕ್ಕೆ ತಾಂತ್ರಿಕ ಪ್ರೊಟೊಕಾಲ್ ರೂಪಿಸಿದೆ. ಇದರಲ್ಲಿ ಕೆಲ ಪ್ರಮಖ ಅಂಶಗಳಿವೆ. ಸಾರ್ವಜನಿಕ ಪ್ರಯೋಜನಕ್ಕಾಗಿ ಡೇಟಾ ಹಂಚಿಕೊಳ್ಳುವುದನ್ನು ಉತ್ತೇಜಿಸಲು ಭಾರತ ನೀತಿ ರಚಿಸಿದೆ. ಇದೇ ವೇಳೆ ಡೇಟಾ ಗೌಪ್ಯತೆ ಕಾಪಾಡಲು ಡೇಟಾ ಸಂರಕ್ಷಣೆ ಕಾನೂನು ಕೂಡ ರೂಪಿಸಿದೆ. ಸಾರ್ವಜನಿಕವಾಗಿ ಲಭ್ಯವಿರುವ ವೈಯುಕ್ತಿಕ ಡೇಟಾವನ್ನು ಹೊಗಿಡಲಾಗುತ್ತದೆ. ಆದರೆ ಎಐ ತಂತ್ರಜ್ಞಾನ ಬಳಕೆಯಲ್ಲಿ ಸ್ಥಳೀಯ ಭಾಷೆಯಲ್ಲಿ ಡೇಟಾ ಸಂರಕ್ಷಣೆ ಸವಾಲಾಗಿದೆ.  ಹೀಗಾಗಿ ಭಾರತ ಸಾರ್ವಜನಿಕಗೊಳಿಸಬಲ್ಲ ಡಿಜಿಟಲ್ ವಿಷಗಳನ್ನು ಸುಲಭವಾಗಿ ಸಿಗುವಂತೆ ಮಾಡಬೇಕು. ಇದೇ ವೇಳೆ ಎಐ ಸಹಭಾಗಿತ್ವದಲ್ಲಿ ಭಾರತೀಯ ಸಂಸ್ಕೃತಿಗಳನ್ನು ಪ್ರತಿನಿಧಿಸುವ ಡೇಟಾಗಳನ್ನು ಜಾಗತಿಕ ಮಟ್ಟದಲ್ಲಿ ಹಂಚಿಕೊಳ್ಳಲು ಇತರ ದೇಶಗಳೊಂದಿಗೆ ಪಾಲುದಾರಿಕೆಯನ್ನು ಮಾಡಬೇಕು.  

ಕಂಪ್ಯೂಟ್: ಭಾರತದ ಕಂಪ್ಯೂಟಿಂಗ್ ಶಕ್ತಿ ಹೆಚ್ಚಿಸುವ ಪ್ರಸ್ತಾವನಯಲ್ಲಿ ಬಂಡವಾಳ, ಕಾರ್ಮಿಕ, ಮೂಲಸೌಕರ್ಯ ಸವಾಲುಗಳನ್ನು ಎದುರಿಸಲು ಎಐ ಸುಧಾರಿತ ತಂತ್ರಜ್ಞಾನ ಬಳಕೆಯನ್ನು ಪರಿಣಾಮಕಾರಿಯಾಗಿ ಮಾಡುವುದಾಗಿದೆ. ಆದರೆ ನುರಿತ ಕೌಶಲ್ಯಭರಿತ ಕಾರ್ಮಿಕರು ಹಾಗೂ ಬಂಡವಾಳ ಇಲ್ಲಿ ಸವಾಲಾಗಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಅವಿಷ್ಕಾರ ಯಾವುದೇ ಸಮಸ್ಯೆ ಇಲ್ಲದ ಸಾಗಲು ಭಾರತ ಸ್ವಾವಲಂಬಿ ಹಾಗೂ ಸಮರ್ಥ ಕಂಪ್ಯೂಟ್ ಸ್ಟಾಕ್ ಅಭಿವೃದ್ಧಿ ಮೇಲೆ ಗಮನಕೇಂದ್ರೀಕರಿಸಬೇಕು.  ಇದಕ್ಕಾಗಿ ಶಾಸನ ರೂಪಿಸುವ ನಾಯಕರು ಭಾರತದಲ್ಲಿರುವ ಪ್ರಸ್ತುಕ ಕಂಪ್ಯೂಟ್ ಸಾಮರ್ಥ್ಯವನ್ನು ವಿಶ್ವಾಸಾರ್ಹತೆಗೆ ತರಬೇಕು. ಜಾಗತಿಕ ಪ್ರವೇಶ ಉತ್ತೇಜಿಸಲು ಹೊಸ ತಂತ್ರಜ್ಞಾನ ಮಾದರಿಗಳ ಅನ್ವೇಷಣೆಯನ್ನು ಮಾಡಬೇಕಾದ ಮಹತ್ತರ ಸವಾಲುಗಳು ಇಲ್ಲಿ ಎದುರಾಗುತ್ತದೆ.

ಮಾಡೆಲ್ಸ್: ಗ್ಲೋಬಲ್ ಟೆಕ್ ಸಮ್ಮಿಟ್‌‌ನಲ್ಲಿ ಮಾಡಿರುವ ಚರ್ಚೆಗಳ ಆಧಾರದಲ್ಲಿ ಹೇಳುವುದಾದರೆ, ಭಾರರತ ತನ್ನ ರಾಷ್ಟ್ರೀಯ ಎಐ ಉದ್ದೇಶಗಳನ್ನು ನಿರ್ದಿಷ್ಟ ಬಳಕೆ ಪ್ರಕರಣಗಳಿಗೆ ಕಸ್ಟಮೈಸ್ಡ್ ಮಾಡಬಹುದೇ ಅನ್ನೋದು ಪ್ರಮುಖ ವಿಷಯವಾಗಿತ್ತು. ಭಾರತದ ಎಐ ಭವಿಷ್ಯದಲ್ಲಿ ಬಹಿರಂಗ ಮೂಲ ಹಾಗೂ ಸ್ವಾಮ್ಯದ ಮಾದರಿಗಳಿಗೆ ಸ್ಥಳವಕಾಶ ನೀಡಲಾಗುತ್ತದೆ. ಒಪನ್ ಸೋರ್ಸ್ ವಿಚಾರದಲ್ಲಿ ಭಾರತ ಬಲವಾದ ನಿಲುವು ತೆಗೆದುಕೊಂಡಿದೆ. 2014ರಲ್ಲಿ ಭಾರತ ಸರ್ಕಾರಿ ಸಂಸ್ಥೆಗಳಲ್ಲಿ ಒಪನ್ ಸೋರ್ಸ್ ಸಾಫ್ಟ್‌ವೇರ್ ಅಳವಡಿಕೆಗೆ ನೀತಿ ರೂಪಿಸಿದೆ. ಈ ನೀತಿ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ವ್ಯವಸ್ಥೆಗೆ ವಿಸ್ತರಣೆಗೊಳ್ಳಲಿದೆಯಾ ಅನ್ನೋದು ಎಐ ಕಾರ್ಯತಂತ್ರದ ಚರ್ಚಾ ವಿಷಯವಾಗಿದೆ.  

ಅಪಾಯಗಳನ್ನು ಗುರುತಿಸುವುದು
AI ಇನೋವೇಶನ್ ಮೂಲಕ ಸಾಗುವಾಗ ಭಾರತದ ನೀತಿ ರೂಪಿಸುವ ನಾಯಕರು ಅದರಲ್ಲಿ ಎದುರಾಗುವ ಅಪಾಯವನ್ನೂ ಸೂಕ್ಷ್ಮವಾಗಿ ಗಮನಿಸಬೇಕು. ಭಾರತ ಶಾಸನ ರೂಪಿಸುವ ನಾಯಕರು ಇನ್ನೋವೇಶನ್ ಭರದಲ್ಲಿ ನೀತಿ ಹಾಗೂ ನಿಯಂತ್ರಣಕ್ಕಿಂತ ಮುಂದೆ ಸಾಗಬಾರದು ಎಂದು 2023ರ ನವೆಂಬರ್ ತಿಂಗಳಲ್ಲಿ ನಡೆದ AI ಸುರಕ್ಷತಾ ಶೃಂಗಸಭೆಯಲ್ಲಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವಿಷಗಳ ಚರ್ಚೆ ಬಳಿಕ ಬ್ಲೆಚ್ಲೆ( Bletchley)ಡಿಕ್ಲರೇಶನ್‌ಗೆ ಸಹಿ ಹಾಕಿದ್ದಾರೆ. ಇದು ಗಡಿಗಳ ಸುರಕ್ಷತೆ ಹಾಗೂ ಅಪಾಯವನ್ನು ವಿವರಿಸುತ್ತದೆ. ನ್ಯಾಯಸಮ್ಮತತೆ, ಹೊಣೆಗಾರಿಕೆ, ಪಾರದರ್ಶಕತೆ, ಗೌಪ್ಯತೆ, ಬೌದ್ಧಿಕ ಆಸ್ತಿ ಮತ್ತು ವಿಶ್ವಾಸಾರ್ಹತೆ ಎಐ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ಭಾರತ ಒತ್ತಿ ಹೇಳಿದೆ.  

 AI ನಿಯಂತ್ರಿಸುವ ಭಾರತದ ದೇಶಿಯ ವಿಧಾನ ಪರಿಣಾಮಕಾರಿಯಾಗಿಲ್ಲ, ಮುಕ್ತತೆ, ಸುರಕ್ಷತೆ, ನಂಬಿಕೆ ಹಾಗೂ ಹೊಣೆಗಾರಿಕೆ ತತ್ವಗಳು ಸರ್ಕಾರದ ಕಾರ್ಯಸೂಚಿಯ ಪ್ರಮುಖ ಭಾಗವಾಗಿದೆ. ಆದರೆ ಇದನ್ನು ನಿಯಂತ್ರಿಸುವ ಕಾರ್ಯತಂತ್ರ ಕಾಣುತ್ತಿಲ್ಲ. ಉದಾಹರಣೆಗೆ ಡೀಫ್ ಫೇಕ್ ಎದುರಿಸಲು ಭಾರತದಲ್ಲಿ ಸೂಕ್ತ ನೀತಿ, ಕಾರ್ಯತಂತ್ರ, ಕಾನೂನು ಬೇಕಿದೆ. ಇದಕ್ಕೆ ಸಂಶೋಧನೆ ಕೊರತೆ ಅನ್ನೋ ಮಾತಗಳು ಇವೆ.  ತಪ್ಪು ಮಾಹಿತಿ, ಸುಳ್ಳು ಮಾಹಿತಿಗಳನ್ನು ನಿಯಂತ್ರಿಸಲು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಪರಿಣಾಮಕಾರಿಯಾಗಿ ಹೇಗೆ ಬಳಸಿಕೊಳ್ಳಬೇಕು ಅನ್ನೋ ಮಾರ್ಗದರ್ಶನ  ಅವಶ್ಯಕ. 
 

Follow Us:
Download App:
  • android
  • ios