Asianet Suvarna News Asianet Suvarna News

Podcast: ಇಸ್ರೋ ಅಧ್ಯಕ್ಷ ಸೋಮನಾಥ್‌ರಿಂದ ಚಂದ್ರಯಾನ -3 ಯಶೋಗಾಥೆ

ಇಸ್ರೋದ ಮುಂದಿನ ಯೋಜನೆಗಳನೇನು? ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬಿತ್ಯಾದಿ ವಿಚಾರಗಳನ್ನು ಸ್ವತಃ ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌ ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಇದರ ಪಾಡ್‌ಕಾಸ್ಟ್‌ ಇಲ್ಲಿದೆ..
 

ಯಾವಾಗ ದೇಶದ ಸಾಧನೆಯನ್ನು ಇಡೀ ವಿಶ್ವವೇ ಗುರುತಿಸುತ್ತದೆಯೋ ಆಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಇಸ್ರೋ ಈ ಥರಹದ ಅನುಭವವನ್ನು ಪದೇ ಪದೇ ನೀಡುತ್ತಿದೆ. ಚಂದ್ರಯಾನ-3 ಯಶಸ್ಸಿನಿಂದ ವಿಶ್ವವೇ ಬೆರಗಾಗಿದೆ. ಇಷ್ಟು ಕಡಿಮೆ ಬಜೆಟ್‌ನಲ್ಲಿ ಇಂತಹ ಅದ್ಭುತ ಸಾಧನೆ ಹೇಗೆ ಮಾಡಿದರು ಎಂದು ಎಲ್ಲರೂ ಅಚ್ಚರಿಗೊಂಡಿದ್ದಾರೆ. ಹಾಗಿದ್ದರೆ ಇಸ್ರೋದ ಮುಂದಿನ ಯೋಜನೆಗಳನೇನು? ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬಿತ್ಯಾದಿ ವಿಚಾರಗಳನ್ನು ಸ್ವತಃ ಇಸ್ರೋ ಅಧ್ಯಕ್ಷ ಎಸ್‌.ಸೋಮನಾಥ್‌(ISRO Chairman S Somanath) ನಮ್ಮ ಜೊತೆ ಹಂಚಿಕೊಂಡಿದ್ದಾರೆ. ಚಂದ್ರಯಾನ-3ರ ಮೇಲೆ ನಮಗಿರುವ ಆತ್ಮವಿಶ್ವಾಸದಂತೆ ವಿಕ್ರಂ ಲ್ಯಾಂಡರ್(Vikram lander)  ಹಾಗೂ ರೋವರ್(Pragyan rover) ಮತ್ತೆ ಕೆಲಸ ಮಾಡಲಿದೆ. ನಾವು ಅಂದುಕೊಂಡಂತೆ ಆದರೆ 22ಕ್ಕೆ ಮತ್ತೊಂದು ಇತಿಹಾಸ ಸೃಷ್ಟಿಯಾಗಲಿದೆ. ಅಂತಹ ಕಡಿಮೆ ತಾಪಮಾನದಲ್ಲಿ ಹೆಚ್ಚು ಕಾಲ ಉಪಕರಣಗಳು ಬದುಕುಳಿಯೋದು ಕಷ್ಟ. ಆದರೂ ನಮ್ಮ ಉಪಕರಣಗಳು ಕೆಲಸ ಮಾಡುತ್ತವೆ ಎಂಬ ನಂಬಿಕೆ ಇದೆ ಎಂದು ಎಸ್‌.ಸೋಮನಾಥ್‌ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  Asianet Exclusive ಜಗತ್ತು ನಿಬ್ಬೆರಗಾಗೋ ಯೋಜನೆಗಳ ಲಿಸ್ಟ್‌ ವಿವರಿಸಿದ ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌!