userpic
user icon

ಶಿವಮೊಗ್ಗದಲ್ಲಿ ಮತ್ತೆ 'ಧರ್ಮ ದಂಗಲ್ ', ವಿಎಚ್‌ಪಿಯಿಂದ ಇಂದು ಭಜನಾ ಪ್ರತಿಭಟನೆ

Sushma Hegde  | Published: Mar 20, 2023, 9:57 AM IST

 ಮಲೆನಾಡು ಶಿವಮೊಗ್ಗದಲ್ಲಿ ಮತ್ತೆ ಧರ್ಮ ದಂಗಲ್‌ ಶುರು ಆಗಿದ್ದು, ಮುಸ್ಲಿಂ ದೇವರು ಅಲ್ಲಾಗೆ ಕಿವಿ ಕೇಳಲ್ವಾ, ಕಿವುಡಾ ಎಂದಿದ್ದ ಈಶ್ವರಪ್ಪ ವಿರುದ್ಧ ಮುಸ್ಲಿಂ ಸಮುದಾಯ ಕಿಡಿಕಾರಿದೆ. ಈಶ್ವರಪ್ಪ ಹೇಳಿಕೆ ವಿರುದ್ಧ ಶಿವಮೊಗ್ಗ ನಗರಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕೆಲ ದಿನಗಳ ಹಿಂದೆ ಎಸ್‌ಡಿಪಿಐ ನಾಯಕರು ಈಶ್ವರಪ್ಪ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದರ ಬೆನ್ನಲ್ಲೇ ಮುಸ್ಲಿಂ ಯುವಕನೊಬ್ಬ ಶಿವಮೊಗ್ಗ ನಗರದ ಜಿಲ್ಲಾಧಿಕಾರಿ ಕಚೇರಿ ಮೇಲೆ ನಿಂತು ಆಜಾನ್‌ ಕೂಗಿದ್ದಾನೆ. ಹೀಗಾಗಿ ಆಜಾನ್‌ ದಂಗಲ್‌ಗೆ ತಿರುಗೇಟು ನೀಡಲು ವಿಎಚ್‌ಪಿ ರೆಡಿಯಾಗಿದ್ದು, ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಭಜನಾ ಪ್ರತಿಭಟನೆಗೆ ಸಿದ್ಧತೆ ಮಾಡಲಾಗಿದೆ. ವಿಶ್ವ ಹಿಂದೂ ಪರಿಷತ್‌, ಭಜರಂಗದಳ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ.

 

Must See