userpic
user icon

ಆಟೋ ಚಾಲಕರ ಮುಷ್ಕರ : ಬಸ್‌ ಕಿಟಕಿ ಗಾಜು ಪುಡಿ ಪುಡಿ ಮಾಡಿದ ಲೇಡಿ ಡ್ರೈವರ್ ...!

Sushma Hegde  | Updated: Mar 20, 2023, 1:28 PM IST

ರ್ಯಾಪಿಡೋ, ಓಲಾ, ಊಬರ್​ ಸೇರಿ ವಿವಿಧ ಕಂಪನಿಗಳ ವೈಟ್​ಬೋರ್ಡ್​​​ ಬೈಕ್​ ಟ್ಯಾಕ್ಸಿ ಸೇವೆ ನಿಷೇಧಿಸಬೇಕೆಂದು ವಿವಿಧ ಬೇಡಿಕೆ ಆಗ್ರಹಿಸಿ ಬೆಂಗಳೂರಿನಲ್ಲಿ ಆಟೋ ಚಾಲಕರು ಮುಷ್ಕರ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ನಿವಾಸದ ಬಳಿ ಆಟೋ ಚಾಲಕರು ಮುತ್ತಿಗೆ ಹಾಕಲು ಪ್ರಯತ್ನಿಸಿದ್ದು , ಪೊಲೀಸರು ತಡೆದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಮಹಿಳಾ ಆಟೋ ಚಾಲಕಿ ಬಿಎಂಟಿಸಿ ಬಸ್ ಕಿಟಕಿ ಗಾಜು ಪುಡಿ ಪುಡಿ ಮಾಡಿದ್ದಾಳೆ. ಆಟೋ ಚಾಲಕಿ ಸುಮ ಬಸ್ ಗಾಜು ಪುಡಿ ಮಾಡಿದ್ದು, ಪ್ರತಿಭಟನೆಯಲ್ಲಿ ನಿರತರಾಗಿರುವ ಆಟೋ ಚಾಲಕರನ್ನು  ಬಿಎಂಟಿಸಿ ಬಸ್‌ಗೆ ತುಂಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
 

Must See