Asianet Suvarna News Asianet Suvarna News

ಬಾಲಾಸೋರ್ ದುರಂತ ಬೆನ್ನಲ್ಲೇ ಹಳಿ ತಪ್ಪಿದ ಮತ್ತೊಂದು ರೈಲು: ದುರಂತಗಳ ಮೇಲೆ ದುರಂತ.. ಏನಾಗ್ತಿದೆ ಒಡಿಶಾದಲ್ಲಿ..?

ಘೋರ ದುರಂತ.. 275 ಸಾವಿನ ಹಿಂದೆ ಸಂಚಿನ ನೆರಳು..? 
ದುರಂತದ ಪ್ರಾಥಮಿಕ ವರದಿ ಹೇಳಿದ ಆ ಸತ್ಯಗಳೇನು..? 
ಒಡಿಶಾ ರೈಲು ದುರಂತ.. ಸಿಬಿಐ ತನಿಖೆಗೆ ವಹಿಸಿದ್ದೇಕೆ..?  
 

ಒಡಿಶಾ ರೈಲು ದುರಂತದಲ್ಲಿ 275 ಸಾವಾಗಿದೆ. ಸಾವಿರಕ್ಕೂ ಹೆಚ್ಚಿನ ಗಾಯಾಳುಗಳು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ. ನೂರಾರು ಮಂದಿ ಇನ್ನೂ ಪತ್ತೆಯಾಗಿಲ್ಲ. ಈ ಭಯಾನಕ ದುರಂತದ ನಿಜಾಂಶ ತಿಳಿಯಲು ಕೇಂದ್ರ ಸರ್ಕಾರ ಸಿಬಿಐಗೆ ಜವಾಬ್ದಾರಿ ವಹಿಸಿದೆ. ಈ ಜವಾಬ್ದಾರಿಯನ್ನು ಸಿಬಿಐಗೆ ವಹಿಸಲು ಅನೇಕ ಸೂಕ್ಷ್ಮ ಕಾರಣಗಳಿವೆ. ಇದರ ಬೆನ್ನಲೇ ಇದೀಗ ಮತ್ತೊಂದು ರೈಲು ಹಳಿ ತಪ್ಪಿದೆ. ಮುಖ್ಯ ರಸ್ತೆಯಲ್ಲಿ ತೆರಳಬೇಕಿದ್ದ ರೈಲು ಗೂಡ್ಸ್ ರೈಲು ನಿಂತಿದ್ದ ಲೂಪ್ ಹಳಿ ಮೇಲೆ ಏಕೆ ಹೋಯ್ತು ಅನ್ನೋದು ಪ್ರಮುಖ ಪ್ರಶ್ನೆಯಾಗಿದೆ. ಪ್ರಾರ್ಥಮಿಕ ತನಿಖೆಯಲ್ಲೂ ಉತ್ತರ ಸಿಕ್ಕಿಲ್ಲ. ಇಲ್ಲಿ ಉತ್ತರ ಸಿಗುವುದಕ್ಕಿಂತ ಬದಲು ಅನುಮಾನಗಳು ಹುಟ್ಟಿಕೊಂಡಿವೆ. ಹೀಗಾಗಿನೇ ಇದರ ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ.

ಇದನ್ನೂ ವೀಕ್ಷಿಸಿ: ಪ್ರೀತಿಸಿದ ಹುಡುಗಿ ಕೈ ಹಿಡಿದ ರೆಬೆಲ್ ಸ್ಟಾರ್ ಪುತ್ರ: ನವಜೋಡಿಗೆ ಹಾರೈಸಿದ ತಲೈವಾ.. ಕಿಚ್ಚ.. ರಾಕಿ ಭಾಯ್..

Video Top Stories