)
ಅಣ್ಣಾವ್ರ ಸಿನಿಮಾ ಕಾಮನಬಿಲ್ಲು ನೆನಪಿಸಿದ ರಜನಿಕಾಂತ್: ಸೂಪರ್ ಸ್ಟಾರ್ ಕಾಣಲು ಕಿಕ್ಕಿರಿದ ಅಭಿಮಾನಿಗಳು
ಜೈಲರ್-2 ರಜನಿಕಾಂತ್ ನಟನೆಯ ಮೋಸ್ಟ್ ಅವೇಟೆಡ್ ಸಿನಿಮಾ.. ಸದ್ಯ ಜೈಲರ್ ಮೂವಿ ಟೀಮ್ ಮೈಸೂರಿನಲ್ಲಿ ಬೀಡು ಬಿಟ್ಟಿದೆ. ಆದರೆ ಹೀಗೆ ಎಂಟ್ರಿ ಕೊಟ್ಟಿರೋ ಜೈಲರ್ ಸಿನಿಮಾ ತಂಡ 43 ವರ್ಷಗಳ ಹಿಂದಿನ ರಾಜಣ್ಣ ಅವರ ಕಥೆ ನೆನಪು ಮಾಡ್ಸಿದೆ.
ಜೈಲರ್-2 ರಜನಿಕಾಂತ್ ನಟನೆಯ ಮೋಸ್ಟ್ ಅವೇಟೆಡ್ ಸಿನಿಮಾ.. ಸದ್ಯ ಜೈಲರ್ ಮೂವಿ ಟೀಮ್ ಮೈಸೂರಿನಲ್ಲಿ ಬೀಡು ಬಿಟ್ಟಿದೆ. ಆದರೆ ಹೀಗೆ ಎಂಟ್ರಿ ಕೊಟ್ಟಿರೋ ಜೈಲರ್ ಸಿನಿಮಾ ತಂಡ 43 ವರ್ಷಗಳ ಹಿಂದಿನ ರಾಜಣ್ಣ ಅವರ ಕಥೆ ನೆನಪು ಮಾಡ್ಸಿದೆ. ಅಷ್ಟೇ ಅಲ್ಲಾ ತಲೈವಾ ಎಂಟ್ರಿ ಆಗಿದೆ ಅಂತ ಅಭಿಮಾನಿಗಳು ರಜಿನಿ ಇದ್ದ ಜಾಗಕ್ಕೆ ಓಡೋಡಿ ಬಂದಿದ್ದಾರೆ.. ಅಲ್ಲಿ ರಜಿನಿ ಮೇನಿಯಾನೇ ನಡೀತಾ ಇದೆ. ಈ ಡೈಲಾಗ್ ಕೇಳಿದ್ರೇನೆ ಗೊತ್ತಾಗುತ್ತೆ ನಾವ್ ಯಾರ್ ಬಗ್ಗೆ ಮಾತಾಡ್ತಾ ಇದ್ದೀವಿ ಅಂತ.. ಯೆಸ್ ವಯಸ್ಸು 72.. ಆದ್ರೂ ಕಮ್ಮಿ ಆಗಿಲ್ಲ ಕ್ರೇಜ್.. ಅವ್ರೆ ಸ್ಟೈಲ್ ಕಾ ಬಾಪ್.. ಸೂಪರ್ ಸ್ಟಾರ್ ರಜನಿಕಾಂತ್..
ತಲೈವಾ, ಅನ್ನೋ ಹೆಸರು ಕೇಳಿದ್ರೇನೆ ಇಂದಿಗೂ ಅಭಿಮಾನಿಗಳು ಹುಚ್ಚೆದ್ದು ಕುಣಿತಾರೆ. ಸೇಲ್ಫಿ, ಶೇಕ್ ಹ್ಯಾಂಡ್ಗಾಗಿ ಮುಗಿಬೀಳ್ತಾರೆ.. ತಲೈವಾ ತಲೈವಾ ಅಂತ ರಜಿನಿ ನೋಡಲು ಕಿಕ್ಕಿರಿದು ಸೇರ್ತಾರೆ.. ಅದಕ್ಕೆ ಮತ್ತೊಂದು ಬೆಸ್ಟ್ ಎಕ್ಸಾಂಪಲ್ ಇಲ್ಲಿದೆ ನೋಡಿ. ಯೆಸ್.. ನೋಡಿದ್ರಲ್ವಾ ಇಂದಿಗೂ ರಜಿನಿ ಸ್ವ್ಯಾಗ್, ಕ್ರೇಜ್ ಕಮ್ಮಿ ಆಗಿಲ್ಲ ಅನ್ನೋದಕ್ಕೆ ಈ ವಿಡಿಯೋನೆ ಸಾಕ್ಷಿ. ಈ ಕ್ರೇಜ್ಗೆ ಸಾಕ್ಷಿಯಾಗಿದ್ದು, ನಮ್ಮ ಮೈಸೂರಿನ ಹುಣಸೂರು ಸಮೀಪವಿರುವ ಬಿಳಿಕೆರೆ.. ಮೈಸೂರಿನಲ್ಲಿ ಜೈಲರ್ 2 ಸಿನಿಮಾ ಟೀಮ್ ಬೀಡುಬಿಟ್ಟಿದ್ದು, ರಜಿನಿ ಎಂಟ್ರಿ ಮ್ಯಾಟರ್ ಕೇಳಿ ಫ್ಯಾನ್ಸ್ ಓಡೋಡಿ ಬಂದಿದ್ದಾರೆ. ಹೀಗೆ ಬಂದ ಫ್ಯಾನ್ಸ್ಗೆ ರಜಿನಿ ನಿರಾಸೆ ಮಾಡ್ತಾರಾ.. ಚಾನ್ಸೇ ಇಲ್ಲ.. ಕಾರಿನ ಮೇಲೆ ನಿಂತು ಅಭಿಮಾನಿಗಳತ್ತ ಕೈ ಬೀಸಿದ್ದಾರೆ.
ರಾಜ್ ಕುಟುಂಬಕ್ಕೂ ರಜನಿಕಾಂತ್ಗೂ ಇರೊ ನಂಟಿನ ಬಗ್ಗೆ ಹೊಸದಾಗಿ ಹೇಳ್ಬೇಕಿಲ್ಲ. ಸಂದರ್ಭ ಸಿಕ್ಕಾಗಲೆಲ್ಲಾ, ಶಿವಣ್ಣ, ಅಪ್ಪು, ರಾಘವೇಂದ್ರ ರಾಜ್ ಕುಮಾರ್, ರಜಿನಿ ಅವರನ್ನ ಹಾಡಿ ಹೊಗಳ್ತಾರೆ. ಇದ್ರಿಂದ ರಜಿನಿ ಕೂಡ ಹೊರತಾಗಿಲ್ಲ.. ಸದ್ಯ ಸೂಪರ್ ಸ್ಟಾರ್ ರಜನಿಕಾಂತ್ ಅವರ ಮೋಸ್ಟ್ ಅವೇಟೆಡ್ಸಿನಿಮಾ ಜೈಲರ್-2 ಮೈಸೂರಿನಲ್ಲಿ ಶೂಟಿಂಗ್ ನಡಿತ್ತಿದ್ದು, ಈಗ ನಡಿತಿರೋ ಶೂಟಿಂಗ್ ಸ್ಪಾಟ್ ವರನಟರ ಕಾಮನಬಿಲ್ಲು ಸಿನಿಮಾವನ್ನ ನೆನಪಿಸಿದೆ. 43 ವರ್ಷದ ಹಿಂದೆ ಕಾಮನಬಿಲ್ಲು ಚಿತ್ರದ ಹಾಡಿನ ಚಿತ್ರೀಕರಣ ಮಾಡಿದ್ದಲ್ಲೇ `ಜೈಲರ್ 2' ಚಿತ್ರೀಕರಣ ಮಾಡಲಾಗ್ತಿದೆ. ಸದ್ಯ ರಜನಿಕಾಂತ್ ಜೈಲರ್-2 ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದು, ತಲೈವಾ ಹೋದಲ್ಲಿ ಬಂದಲ್ಲಿ ಎಲ್ಲಾ ಅಭಿಮಾನಿಗಳು ಕಿಕ್ಕಿರಿದು ಸೇರ್ತಾ ಇದ್ದಾರೆ. ವಯಸ್ಸು 72 ಆದ್ರೂ ರಜನಿ ಕ್ರೇಜ್ ಅಂತೂ ಕಮ್ಮಿಯಾಗಿಲ್ಲ.