Asianet Suvarna News Asianet Suvarna News

ಮಹಾಶಿವರಾತ್ರಿ: ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟ ಭಕ್ತರ ಕಾಲುಗಳಿಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿದ ವಿನಯ್ ಗುರೂಜಿ

ಮಹಾಶಿವರಾತ್ರಿ ಅಂಗವಾಗಿ ಚಿಕ್ಕಮಗಳೂರು ಜಿಲ್ಲೆಯಿಂದಲೂ ಸಾವಿರಾರು ಭಕ್ತ ತಂಡೋಪತಂಡವಾಗಿ ಪಾದಯಾತ್ರೆ ಹೊರಟಿದ್ದಾರೆ ಮೂಡಿಗೆರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರು. ಭಕ್ತರ ಪಾದಗಳಿಗೆ ಅವಧೂತ ವಿನಯ್ ಗುರೂಜಿ ಎಣ್ಣೆ ಹಚ್ಚಿ ಮಸಾಜ್ ಮಾಡಿ ಗಮನ ಸೆಳೆದರು.

Mahashivaratri special Avadhoot Vinaya Guruji who washed the feet of the devoteess at chikkamagaluru rav
Author
First Published Mar 5, 2024, 11:18 AM IST

ಚಿಕ್ಕಮಗಳೂರು (ಮಾ.5): ಮಹಾಶಿವರಾತ್ರಿ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರಾಜ್ಯದ್ಯಾಂತ ಪಾದಯಾತ್ರಿಗಳ ದಂಡು ಬರಲಾರಂಭಿಸಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ ಬೆಂಗಳೂರು ತುಮಕೂರು ಸೇರಿದಂತೆ ಎಲ್ಲಡೆಯಿಂದ ಸಾವಿರಾರು ಭಕ್ತರು ಪಾದಾಯಾತ್ರೆ ಮೂಲಕ ಶ್ರೀ ಕ್ಷೇತ್ರ ದರ್ಶನ ಪಡೆಯಲಿದ್ದಾರೆ. ಅದೇ ರೀತಿ ಚಿಕ್ಕಮಗಳೂರು ಜಿಲ್ಲೆಯಿಂದಲೂ ಸಾವಿರಾರು ಭಕ್ತ ತಂಡೋಪತಂಡವಾಗಿ ಪಾದಯಾತ್ರೆ ಹೊರಟಿದ್ದಾರೆ ಮೂಡಿಗೆರೆಯಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಟಿರುವ ಭಕ್ತರು. ಭಕ್ತರ ಪಾದಗಳಿಗೆ ಅವಧೂತ ವಿನಯ್ ಗುರೂಜಿ ಎಣ್ಣೆ ಹಚ್ಚಿ ಮಸಾಜ್ ಮಾಡಿ ಗಮನ ಸೆಳೆದರು.

Mahashivaratri: ನಿಮ್ಮ ಜನ್ಮರಾಶಿಗೆ ಅನುಗುಣವಾಗಿ ಶಿವನಿಗೆ ಈ ವಸ್ತು ಅರ್ಪಿಸಿದರೆ, ಶಿವ ಆಶೀರ್ವದಿಸುತ್ತಾನೆ!

ಪ್ರತಿವರ್ಷ ಮಹಾಶಿವರಾತ್ರಿಗೆ ಪಾದಯಾತ್ರೆ ಮೂಲಕವೇ ತೆರಳಿ ಧರ್ಮಸ್ಥಳದ ಮಂಜುನಾಥನ ಪಡೆಯುತ್ತಿರುವ ಭಕ್ತರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನೀರುಗಂಡಿಯಲ್ಲಿ ಸಾಮಾಜಿಕ ಸೇವಾ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ವಿನಯ್ ಗುರೂಜಿ, ಶಾಸಕಿ ನಯನ ಮೋಟಮ್ಮ. ಮಹಾಶಿವರಾತ್ರಿ ಹಿನ್ನೆಲೆ ನಿತ್ಯ ಧರ್ಮಸ್ಥಳ ಪಾದಯಾತ್ರಿಗಳಿಗೆ ಹೊರಡುತ್ತಿರುವ ಭಕ್ತರು. ಧರ್ಮಸ್ಥಳಕ್ಕೆ ಪಾದಯಾತ್ರಿಗಳಿಗೆ  ಊಟ-ವಸತಿಗೆ ಸೌಲಭ್ಯ ಕಲ್ಪಿಸಿರೋ  ಸಮಿತಿ. 

ಧರ್ಮಸ್ಥಳಕ್ಕೆ ಹೊರಟಿದ್ದ ಭಕ್ತರ ಕಾಲು ತೊಳೆದು ಪುಷ್ಪ ಹಾಕಿ ಪೂಜಿಸಿದರು. ಈ ವೇಳೆ ವಿನಯ್ ಗುರೂಜಿಗೆ ಶಾಸಕಿ ನಯನ ಮೋಟಮ್ಮ ಸಾಥ್ ನೀಡಿದರು

 

ಮಹಾಶಿವರಾತ್ರಿ ಪ್ರಯುಕ್ತ ಕೆಎಸ್‌ಆರ್‌ಟಿಸಿಯಿಂದ 1,500 ಹೆಚ್ಚುವರಿ ಬಸ್ ಸೇವೆ; ನಿಮ್ಮೂರಿಗೆ ಬಸ್ ಇದೆಯಾ ನೋಡಿ.

Follow Us:
Download App:
  • android
  • ios