Asianet Suvarna News Asianet Suvarna News

ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಆಗಿರೋದ್ರಿಂದ ಈ ಬಾರಿ ಕಾಂಗ್ರೆಸ್ ಮತಗಳು ಸಹ ಬಿಜೆಪಿಗೆ : ಸಂಸದ ಮುನಿಸ್ವಾಮಿ

ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ, ಬಟ್ಟೆ ಹೊಲಿಸಿದ್ದೇನೆ, ಫೋಟೊ ರೆಡಿಯಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ನಾನು ಪಕ್ಷದ ಕೆಲಸ ಮಾಡ್ತೀನಿ ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.

Lok sabha election 2024 MP Muniswamy reacts about BJP JDS alliance contest at kolar rav
Author
First Published Mar 18, 2024, 8:20 PM IST

ಕೋಲಾರ (ಮಾ.18) ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಹೈಕಮಾಂಡ್ ನನಗೆ ಟಿಕೆಟ್ ನೀಡಿದೆ, ಬಟ್ಟೆ ಹೊಲಿಸಿದ್ದೇನೆ, ಫೋಟೊ ರೆಡಿಯಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ನಾನು ಪಕ್ಷದ ಕೆಲಸ ಮಾಡ್ತೀನಿ ಎಂದು ಸಂಸದ ಮುನಿಸ್ವಾಮಿ ತಿಳಿಸಿದರು.

ಇಂದು ಕೋಲಾರದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಸಾಧ್ಯತೆ ಕುರಿತು ಮಾಧ್ಯಮ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ಟಿಕೆಟ್ ಯಾರಿಗೆ ನೀಡುತ್ತದೆ ಅನ್ನೋದು ಮುಖ್ಯವಲ್ಲ, ಈ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಗೆಲ್ಲಬೇಕು, ಮೋದಿ ಮತ್ತೆ ಪ್ರಧಾನಿಯಾಗಬೇಕು. ಸುಮಾರು ಆರು ತಿಂಗಳಿಂದ ಬಿಜೆಪಿ ಹೈಕಮಾಂಡ್ ಮೂರುನಾಲ್ಕು ಸಲ ಸರ್ವೇ ಮಾಡಿದ್ದಾರೆ. ಯಾರಿಗೆ ಟಿಕೇಟ್ ನೀಡಿದ್ರೆ ಗೆಲ್ಲುತ್ತಾರೆ ಅಂತ ನಮ್ಮ ಹೈಕಮಾಂಡ್ ಗೂ ತಿಳಿದಿದೆ. 2019ರ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಮತಗಳಿಂದ ಗೆದ್ದಿದ್ದೇನೆ ಅಂತ ಜೆಡಿಎಸ್ ನ ಕೆಲವರು ಆರೋಪಿಸಿದ್ದರು. ಆದರೆ ದೇಶಭಕ್ತರು ನನಗೆ ಮತ ನೀಡುವ ಮೂಲಕ ನರೇಂದ್ರ ಮೋದಿಯವರನ್ನ ಪ್ರಧಾನಿ ಮಾಡಿದ್ದಾರೆ. ಕಾಂಗ್ರೆಸ್ ಮತಗಳಿಂದ ಗೆದ್ದಿದ್ದೇನೆ ಎಂಬ ಹೇಳಿಕೆ ನೀಡಿದ್ದ ಜೆಡಿಎಸ್‌ನ ನಟರಾಜ್ ಮೊದಲು ಇದನ್ನ ತಿಳಿದುಕೊಳ್ಳಬೇಕು. ಇನ್ಮುಂದೆ ನೋಡಿ ಮಾತಾಡಬೇಕು ಎಂದು ತಿವಿದರು.

ಮಂಡ್ಯ, ಕೋಲಾರ ಜೆಡಿಎಸ್ ಪಾಲಾದ್ರೂ, ಮುನಿಸಿಕೊಳ್ಳದ ಮುನಿಸ್ವಾಮಿ; ಬಿಜೆಪಿ ನಿರ್ಧಾರಕ್ಕೆ ಬದ್ಧವೆಂದ ಸುಮಲತಾ!

ಕುಮಾರಣ್ಣ, ದೇವೇಗೌಡರ ಬಗ್ಗೆ ನನಗೆ ಅಪಾರ  ಗೌರವವಿದೆ. ನಮ್ಮ ವರಿಷ್ಠರು ತೆಗೆದುಕೊಳ್ಳುವ ನಿರ್ಣಯಕ್ಕೆ ನಾನು ಬದ್ಧನಾಗಿದ್ದೇನೆ. ನಮ್ಮ ಕಾರ್ಯಕರ್ತರು ಮೈತ್ರಿ ಬಗ್ಗೆ ಏನೂ ಮಾತನಾಡಬಾರದು. ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪ್ರಬಲವಾಗಿದೆ. ಕಳೆದ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇದ್ರೂ ಸಹ ನನಗೆ 7 ಲಕ್ಷ ಮತ ಬಂದಿದೆ ಎಂದರು.

ಟಿಕೆಟ್ ಹಂಚಿಕೆ ವಿಚಾರ ಏನೇ ಇರಲಿ ನಾವೆಲ್ಲ ಈ ಎನ್‌ಡಿಎ ಅಭ್ಯರ್ಥಿ ಪರವಾಗಿ ಕೆಲಸ ಮಾಡುತ್ತೇವೆ. ಹೈಕಮಾಂಡ್ ಗೆ ನಮ್ಮ ಅಭಿಪ್ರಾಯ ತಿಳಿಸಿ ನಾವೆಲ್ಲಾ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದೇವೆ. ಈ ಬಾರಿ ಲೋಕಸಭಾ ಚುನಾವವಣೆಯಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲರೂ ಮೋದಿ ಪರವಾಗಿ ಮತ ಹಾಕುತ್ತಾರೆ. ಈ ಬಾರಿ ಮೈತ್ರಿ ಅಭ್ಯರ್ಥಿ ಕನಿಷ್ಠ 3 ಲಕ್ಷ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಎರಡಂಕಿ ದಾಟಲ್ಲ: ಸಂಸದ ಎಸ್.ಮುನಿಸ್ವಾಮಿ

ಹೈಕಮಾಂಡ್ ನನ್ನ ಸ್ಪರ್ಧೆ ಬೇಡ ಅಂತಾ ಹೇಳಿದ್ರೆ ನಾನು ಸ್ಪರ್ಧೆ ಮಾಡೋದಿಲ್ಲ. ಜೆಡಿಎಸ್ ನವರು ಸಹ ನಮ್ಮ ಜೊತೆ ಚುನಾವಣೆ ಪ್ರಚಾರ ಆರಂಭ ಮಾಡಬೇಕು. ಈ ಬಾರಿ NDA ಮೈತ್ರಿ ಕೂಟ 400 ರಿಂದ 415 ಸೀಟು ಗೆಲ್ಲಲಿದೆ. ಟಿಕೇಟ್ ಸಿಗದವರಿಗೆ ಮುಂದೆ ಸ್ಥಾನಮಾನ ಸಿಗಲಿದೆ. ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿ ಆಗಿರೋದ್ರಿಂದ ಕಾಂಗ್ರೆಸ್ ಮುಕ್ತ ಆಗಲಿದೆ ಎಂದು ಟಾಂಗ್ ನೀಡಿದರು.

Follow Us:
Download App:
  • android
  • ios