Asianet Suvarna News Asianet Suvarna News

Lok sabha election 2024: ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪರವಾನಗಿ ಶಸ್ತ್ರಾಸ್ತ್ರ ಠೇವಣಿ ಇಡಲು ನಾಗರಿಕರಿಗೆ ಜಿಲ್ಲಾಡಳಿತ ಸೂಚನೆ

ಕಾಫಿನಾಡು ಚಿಕ್ಕಮಗಳೂರು ರಾಜ್ಯದಲ್ಲೇ ಅತೀ ಹೆಚ್ಚು ಬಂದೂಕುಗಳನ್ನ ಹೊಂದಿರೋ ಕಾಡಿನ ಜಿಲ್ಲೆ. ಜಿಲ್ಲಾದ್ಯಂತ ಬರೋಬ್ಬರಿ 11 ಸಾವಿರಕ್ಕೂ ಅಧಿಕ ಪರವಾನಗಿ ಬಂದೂಕುಗಳಿವೆ. ಅದು ಒಂಟಿ ಮನೆ. ಕಾಫಿ ಎಸ್ಟೇಟ್ ಇರೋರಲ್ಲೇ ಹೆಚ್ಚು. ಇದೀಗ, ಜಿಲ್ಲಾಡಳಿತ 11 ಸಾವಿರ ಬಂದೂಕುಗಳನ್ನ ವಾರಸ್ಸುದಾರರು ವಾಪಸ್ ನೀಡುವಂತೆ ಎಚ್ಚರಿಕೆ ನೀಡಿದ್ದಾರೆ

Lok sabha election 2024 District administration instructions to surrender licensed weapons at chikkamagaluru rav
Author
First Published Mar 19, 2024, 9:14 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.19): ಕಾಫಿನಾಡು ಚಿಕ್ಕಮಗಳೂರು ರಾಜ್ಯದಲ್ಲೇ ಅತೀ ಹೆಚ್ಚು ಬಂದೂಕುಗಳನ್ನ ಹೊಂದಿರೋ ಕಾಡಿನ ಜಿಲ್ಲೆ. ಜಿಲ್ಲಾದ್ಯಂತ ಬರೋಬ್ಬರಿ 11 ಸಾವಿರಕ್ಕೂ ಅಧಿಕ ಪರವಾನಗಿ ಬಂದೂಕುಗಳಿವೆ. ಅದು ಒಂಟಿ ಮನೆ. ಕಾಫಿ ಎಸ್ಟೇಟ್ ಇರೋರಲ್ಲೇ ಹೆಚ್ಚು. ಇದೀಗ, ಜಿಲ್ಲಾಡಳಿತ 11 ಸಾವಿರ ಬಂದೂಕುಗಳನ್ನ ವಾರಸ್ಸುದಾರರು ವಾಪಸ್ ನೀಡುವಂತೆ ಎಚ್ಚರಿಕೆ ನೀಡಿದ್ದಾರೆ. 11 ಸಾವಿರ ಜನರಿಗೂ ಎಚ್ಚರಿಕೆ ನೀಡಿರೋ ಜಿಲ್ಲಾಡಳಿತ ಏಳು ದಿನಗಳ ಒಳಗೆ ಕಡ್ಡಾಯವಾಗಿ ವಾಪಸ್ ನೀಡುವಂತೆ ಆದೇಶಿಸಿದ್ದು, ಕೆಲವರಿಗೆ ಮಾತ್ರ ಜಿಲ್ಲಾಡಳಿತ ವಿನಾಯಿತಿ ನೀಡಿದೆ. 

ಆತ್ಮರಕ್ಷಣೆಗೆ ಅಂತಾನೇ ನೀಡಿರುವ ಗನ್ ವಾಪಸ್ಸು : 

ಸಿದ್ದರಾಮಯ್ಯ ಬಾಯಿಯಲ್ಲೂ ಸೀತಾರಾಮ ಹೇಳಿಸಿದ್ದ ಮೋದಿ: ಕೋಟ ಶ್ರೀನಿವಾಸ್‌ ಪೂಜಾರಿ
 
ಕಾಫಿನಾಡು ಚಿಕ್ಕಮಗಳೂರು ಅಂದ್ರೆ ಅಪ್ಪಟ ಕಾಡಿನ ಜಿಲ್ಲೆ. ಕಾಡಂಚಿನ ಮನೆ. ತೋಟ. ತೋಟದ ಮಧ್ಯೆ ಒಂಟಿ ಮನೆಗಳೇ ಹೆಚ್ಚು. ಕಿಮೀಗೆ ಒಂದೊಂದು ಒಂಟಿ ಮನೆಗಳಿರೋ ಮಲೆನಾಡ ಜಿಲ್ಲೆ. ಕಾಡಿನ ಊರಲ್ಲಿ ತೋಟಗಳ ಮಧ್ಯೆ ಇರ್ಬೇಕು ಅಂದ್ರೆ ಹಳ್ಳಿಗರ ಆತ್ಮರಕ್ಷಣೆಗೆ ಸರ್ಕಾರದ ಅನುಮತಿ ಪಡೆದು ಸಾವಿರಾರು ಜನ ಮನೆಯಲ್ಲಿ ಗನ್ ಇಟ್ಟುಕೊಂಡಿದ್ದಾರೆ. ಅದು ಆತ್ಮರಕ್ಷಣೆಗೆ, ಕಾಡು ಪ್ರಾಣಿಗಳಿಂದ ಜೀವ ಉಳಿಸಿಕೊಳ್ಳಲು. ಕಳ್ಳಕಾಕರಿಂದ ಬೆಳೆ-ಜೀವ ಉಳಿಸಿಕೊಳ್ಳಲು ಸರ್ಕಾರವೇ 11 ಸಾವಿರ ಜನರಿಗೆ ಗನ್ ಇಟ್ಟುಕೊಳ್ಳಲು ಅನುಮತಿ ನೀಡಿದೆ. ಇದೀಗ, ಲೋಕಸಭಾ ಚುನಾವಣೆ ದಿನ ನಿಗದಿಯಾಗ್ತಿದ್ದಂತೆ ಜಿಲ್ಲಾಡಳಿತ ಬಂದೂಕುಗಳನ್ನ 7 ದಿನಗಳ ಒಳಗೆ ಆಯಾ ಪೊಲೀಸ್ ಸ್ಟೇಷನ್ಗೆ ಸರೆಂಡರ್ ಮಾಡುವಂತೆ ಸೂಚಿಸಿದೆ. ಈ ಮಧ್ಯೆ ಅದಕ್ಕಾಗಿಯೇ ಸ್ಕ್ರಿನಿಂಗ್ ಕಮಿಟಿಯೊಂದನ್ನ ರಚಿಸಿದ್ದು, ಸಂಘ-ಸಂಸ್ಥೆ, ಬ್ಯಾಂಕ್ ಸೇರಿದಂತೆ ಯಾರಿಗಾದ್ರೂ ಬೆದರಿಕೆ ಇದ್ದು, ಬಂದೂಕು ಅವಶ್ಯಕತೆ ಇರೋರು ಅರ್ಜಿ ಹಾಕಿ ಸರ್ಕಾರದ ಅನುಮತಿ ಪಡೆದು ಗನ್ ಇಟ್ಟುಕೊಳ್ಳೋದಕ್ಕೂ ಅನುಮತಿ ನೀಡಿದೆ. ಆದ್ರೆ, 11 ಸಾವಿರಕ್ಕೂ ಅಧಿಕ ಬಂದೂಕುಗಳನ್ನ ವಾಪಸ್ ನೀಡುವಂತೆ ಆದೇಶಿಸಿದೆ. 

ಉಡುಪಿ-ಚಿಕ್ಕಮಗಳೂರು, ಮೈಸೂರು ಕ್ಷೇತ್ರದಿಂದ ಈ ಬಾರಿ ಕಾಂಗ್ರೆಸ್‌ ಅಭ್ಯರ್ಥಿ ಡಿವಿಎಸ್‌?

ಕ್ರಿಮಿನಲ್ ಹಿನ್ನೆಲೆಯುಳ್ಳವರ ಬಾಂಡ್ : 

ಇನ್ನು ಜಿಲ್ಲೆಯಲ್ಲಿ ಕೇವಲ ಮತದಾನ ಪ್ರಕ್ರಿಯೆ ನಡೆಯೋದು ಬಿಟ್ಟರೆ ಉಳಿದದ್ದೆಲ್ಲವೂ ಉಡುಪಿಯಲ್ಲಿಯೇ. ಹಾಗಾಗಿ, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕ್ರಿಮಿನಲ್ ಹಿನ್ನೆಲೆಯುಳ್ಳವರ ಬಾಂಡ್ ಪಡೆಯಲು ಮುಂದಾಗಿದೆ. ಕಳೆದ ಎಲೆಕ್ಷನ್‍ನಲ್ಲಿ 2023 ರಲ್ಲಿ 1800 ಮಂದಿಯಿಂದ ಬಾಂಡ್ ಪಡೆದಿತ್ತು. ಅದು ಒಂದು ವರ್ಷ ವಾಯ್ದೆ ಇರೋದ್ರಿಂದ ಈಗ ಹೆಚ್ಚುವರಿ ಗುರುತಿಸಿ 653 ಮಂದಿಯನ್ನ ಬಾಂಡ್ ಪಡೆಯೋಕೆ ಜಿಲ್ಲಾಡಳಿತ ಮುಂದಾಗಿದೆ. ಅಲ್ಲಿಗೆ ಜಿಲ್ಲಾದ್ಯಂತ 2300ಕ್ಕೂ ಹೆಚ್ಚು ಜನರ ಬಾಂಡ್ ಪಡೆಯಲಾಗುತ್ತಿದೆ. ಇದಲ್ಲದೆ ಗೂಂಡಾ ಆಕ್ಟ್, ರೌಡಿ ಶೀಟರ್‍ಗಳ ಮೇಲೆಯೂ ನಿಗಾವಹಿಸುತ್ತಿದೆ ಪೊಲೀಸ್ ಇಲಾಖೆ. ಒಟ್ಟಾರೆ, ಒಂಟಿ ಮನೆ, ಕಾಫಿ ಎಸ್ಟೇಟ್ ನಲ್ಲಿ ಜೀವನ ಮಾಡ್ತಿರೋರು ಕಾಡುಪ್ರಾಣಿ, ಕಳ್ಳಕಾಕರ ಭಯದಿಂದ ಲೈಸನ್ಸ್ ತೆಗೆದುಕೊಂಡು ಮನೆಯಲ್ಲೇ ಗನ್ ಇಟ್ಟುಕೊಂಡಿರುತ್ತಾರೆ. 

 

ಸಿದ್ದರಾಮಯ್ಯ ಬಾಯಿಯಲ್ಲೂ ಸೀತಾರಾಮ ಹೇಳಿಸಿದ್ದ ಮೋದಿ: ಕೋಟ ಶ್ರೀನಿವಾಸ್‌ ಪೂಜಾರಿ

ಈ ಗನ್ ಆತ್ಮರಕ್ಷಣೆಯ ಜೊತೆ ಬೆಳೆಯನ್ನೂ ಕಾಯುತ್ತೆ. ಹಾಗಾಗಿ, ಜನರ ಜೀವದ ದೃಷ್ಟಿಯಿಂದ ಸರ್ಕಾರ ಪರವಾನಿಗಿ ಬಂದೂಕು ನೀಡಿತ್ತು. ಇದೀಗ, ಲೈಸಸ್ಸ್ ಪಡೆದು ಗನ್ ಇಟ್ಟುಕೊಂಡೋರು 7 ದಿನಗಳ ಒಳಗೆ ಬಂದೂಕು ವಾಪಸ್ ನೀಡುವಂತೆ ಆದೇಶಿಸಿದೆ. ಗನ್ ಅವಶ್ಯಕತೆ ಇದ್ದೋರು ಸರ್ಕಾರದ ಅನುಮತಿ ಪಡೆದು ಇಟ್ಕೊಳ್ಳಬಹುದು. ಆದ್ರೆ, ಒಂದು ವೇಳೆ ಯಾರಾದ್ರು ಗನ್ ವಾಪಸ್ ನೀಡದಿದ್ದರೆ ಅವರು ಬಂದೂಕು ಲೈಸನ್ಸ್ ಕ್ಯಾನ್ಸಲ್‍ನಂತಹಾ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

Follow Us:
Download App:
  • android
  • ios