Asianet Suvarna News Asianet Suvarna News

Kidnap Case: ಜೈಲಲ್ಲಿ ಬೇಸರದಿಂದಲೇ ಮೊದಲ ದಿನ ಕಳೆದ ಎಚ್.ಡಿ.ರೇವಣ್ಣ

ಲೈಂಗಿಕ ಹಗರಣದ ಶೋಷಿತ ಮಹಿಳೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ನಾಲ್ಕು ಗೋಡೆಗಳ ಮಧ್ಯೆ ಅಸಮಾಧಾನದಿಂದಲೇ ಮೊದಲ ದಿನ ಕಳೆದಿದ್ದಾರೆ. 

Kidnap Case HD Revanna spent the first day in jail bored gvd
Author
First Published May 10, 2024, 10:24 AM IST

ಬೆಂಗಳೂರು (ಮೇ.10): ತಮ್ಮ ಪುತ್ರ ಹಾಗೂ ಹಾಸನ ಕ್ಷೇತ್ರದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣದ ಶೋಷಿತ ಮಹಿಳೆ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ನಾಲ್ಕು ಗೋಡೆಗಳ ಮಧ್ಯೆ ಅಸಮಾಧಾನದಿಂದಲೇ ಮೊದಲ ದಿನ ಕಳೆದಿದ್ದಾರೆ. ಅಪಹರಣ ಪ್ರಕರಣದಲ್ಲಿ ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಮಾಜಿ ಸಚಿವರಿಗೆ ಸಂಜೆ ವೇಳೆ ನಿರಾಸೆಯಾಯಿತು. ತಮ್ಮ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ ಸಂಗತಿಯನ್ನು ಕಾರಾಗೃಹದ ಅಧಿಕಾರಗಳಿಂದ ರೇವಣ್ಣ ಪಡೆದರು ಎಂದು ತಿಳಿದು ಬಂದಿದೆ. 

ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ರೇವಣ್ಣ ಅವರನ್ನು ಜನಪ್ರತಿನಿಧಿಗಳ ನ್ಯಾಯಾಲ ಯವು ಬುಧವಾರ ನ್ಯಾಯಾಂಗ ಬಂಧನಕ್ಕೊಪಿಸಿತು. ಅಂತೆಯೇ ಸಂಜೆ ವೇಳೆ ಜೈಲು ಸೇರಿದ ರೇವಣ್ಣ ಅವರಿಗೆ ವಿಶೇಷ ಭದ್ರತಾ ವಿಭಾಗದಲ್ಲಿ ಸೆಲ್ ನೀಡಲಾಗಿದೆ. ಕಾರಾಗೃಹದಲ್ಲಿ ಸಾಮಾನ್ಯ ವಿಚಾರಣಾಧೀನಕೈದಿಗಳಿಗೆ ವಿತರಿಸುವ ಆಹಾರವನ್ನೇ ಅವರು ಸೇವಿಸಿದ್ದಾರೆ. ಬಳಿಕ ಗುರುವಾರ ಬೆಳಗ್ಗೆ ಪ್ರಕರಣದಲ್ಲಿ ಜಾಮೀನು ನಿರೀಕ್ಷೆಯಲ್ಲಿ ತುಸು ಲವಲವಿಕೆಯಿಂದ ಇದ್ದ ರೇವಣ್ಣ ಅವರಿಗೆ ಸಂಜೆ ವೇಳೆ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆಯಾದ ವಿಚಾರ ತಿಳಿದಿದೆ.

25 ವರ್ಷಗಳಲ್ಲಿ ಇಂತಹ ಆಪಾದನೆ ಬಂದಿಲ್ಲ, ಮಾಡದ ತಪ್ಪು ಒಪ್ಪಿಕೊಳ್ಳುವಂತೆ ಅಧಿಕಾರಿಗಳ ಒತ್ತಡ: ಜಡ್ಜ್‌ಗೆ ರೇವಣ್ಣ ದೂರು

ಜೈಲಿನಲ್ಲಿ ಶಾಸಕರ ಭೇಟಿ: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಚಿವ ರೇವಣ್ಣ ಅವರನ್ನು ಹಾಸನ ಜಿಲ್ಲೆಯ ಅರಕಲಗೂಡು ಕ್ಷೇತ್ರದ ಜೆಡಿಎಸ್ ಶಾಸಕ ಎ.ಮಂಜು ಗುರುವಾರ ಭೇಟಿಯಾಗಿ ಕುಶಲೋಪರಿ ವಿಚಾರಿಸಿದರು. ಕಾನೂನು ಪ್ರಕಾರ ರೇವಣ್ಣ ಸಂದರ್ಶನಕ್ಕೆ ಕಾರಾಗೃಹದ ಅಧಿಕಾರಿಗಳ ಅನುಮತಿ ಪಡೆದು ಮಂಜು ಭೇಟಿಯಾದರು. ಕೆಲ ಹೊತ್ತು ಸಮಾಲೋಚಿಸಿದ ಬಳಿಕ ಹೊರಬಂದ ಶಾಸಕರು, ತಮ್ಮ ಜಿಲ್ಲೆಯ ನಾಯಕ ರೇವಣ್ಣ, ಹಾಗಾಗಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಅವರಿಗೆ ನ್ಯಾಯ ಸಿಗಲಿದೆ ಎಂದರು.

ರೇವಣ್ಣನ ಮೂವರು ಬಂಟರು ಅರೆಸ್ಟ್: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ಹಗರಣದ ಶೋಷಿತ ಮಹಿಳೆ ಅಪಹರಣ ಸಂಬಂಧ ವಶಕ್ಕೆ ಪಡೆಯಲಾಗಿದ್ದ ನಾಲ್ವರ ಪೈಕಿ ಮೂವರನ್ನು ಎಸ್‌ಐಟಿ ಗುರುವಾರ ಅಧಿಕೃತವಾಗಿ ಬಂಧನಕ್ಕೊಳಪಡಿಸಿದೆ. ಮೈಸೂರಿನ ಹೆಬ್ಬಾಳದ ಮಧು, ಕೆ.ಆರ್.ನಗರ ತಾಲೂಕಿನ ಹಳೆ ಯೂರಿನಮನುಹಾಗೂಹೊಸೂರಿನಸುಜಯ್‌ ಬಂಧಿತರಾಗಿದ್ದು, ಈ ಕೃತ್ಯದಲ್ಲಿ ಮತ್ತೊಬ್ಬನನ್ನು ವಶಕ್ಕೆ ಪಡೆದು ಎಸ್‌ಐಟಿ ವಿಚಾರಣೆ ಮುಂದುವರೆಸಿದೆ. 

ರೇವಣ್ಣ ಅಲ್ಲ, ಪ್ರಜ್ವಲ್ ನನ್ನ ಮೇಲೆ ರೇಪ್ ಮಾಡಿದ್ದಾರೆ: ಅಪಹರಣವಾಗಿದ್ದ ಮಹಿಳೆ

ಸಂತ್ರಸ್ತೆ ಮಹಿಳೆಯನ್ನು ಮಾಜಿ ಸಚಿವ ರೇವಣ್ಣರವರ ಸೂಚನೆ ಮೇರೆಗೆ ಈ ಮೂವರು ಆರೋಪಿಗಳು ಅಪಹರಿಸಿ ಅಕ್ರಮ ಬಂಧನದಲ್ಲಿಟ್ಟಿದ್ದರು ಎಂದು ತಿಳಿದು ಬಂದಿದೆ. ಏ.29 ರಂದು ಕೆ.ಆರ್.ನಗರ ತಾಲೂಕಿನ ತಮ್ಮ ಮನೆಯಲ್ಲಿದ್ದ ಸಂತ್ರಸ್ತ ಮಹಿಳೆಯನ್ನು ರೇವಣ್ಣ ಬೆಂಬಲಿಗಸತೀಶ್ ಕರೆತಂದಿದ್ದರು. ಆನಂತರ ರೇವಣ್ಣರವರ ಆಪ್ತ ಸಹಾಯಕ ರಾಜಗೋಪಾಲ್‌ರವರ ತೋಟದ ಮನೆಗೆ ಕರೆದೊಯ್ದು ಮನು, ಮಧುಹಾಗೂಸುಜಯ್ ಸೆರೆಯಲ್ಲಿಟ್ಟಿದ್ದರು.

Follow Us:
Download App:
  • android
  • ios