Asianet Suvarna News Asianet Suvarna News

ನೇಹಾ ಹತ್ಯೆ ಪ್ರಕರಣದಲ್ಲಿ ಮತಬ್ಯಾಂಕ್ ರಾಜಕಾರಣ; ರಾಜ್ಯಸರ್ಕಾರದ ವಿರುದ್ಧ ಜೋಶಿ ಆಕ್ರೋಶ

ಹಿಂದೂಗಳ ಮೇಲೆ ಹಲ್ಲೆ, ಕೊಲೆ ಪ್ರಕರಣ ನಡೆದಾಗ ರಾಜ್ಯ ಸರ್ಕಾರ ಪ್ರತಿಬಾರಿಯೂ ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಇದೀಗ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲೂ ಮುಖ್ಯಮಂತ್ರಿ, ಗೃಹಮಂತ್ರಿ ಸೇರಿದಂತೆ ಕಾಂಗ್ರೆಸ್ ನಾಯಕರು ಇದೇ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

Hubballi Neha hiremath murder case Union minister Pralhad joshi outraged against congress government rav
Author
First Published Apr 20, 2024, 6:41 PM IST

ಧಾರವಾಡ (ಏ.20): ಹಿಂದೂಗಳ ಮೇಲೆ ಹಲ್ಲೆ, ಕೊಲೆ ಪ್ರಕರಣ ನಡೆದಾಗ ರಾಜ್ಯ ಸರ್ಕಾರ ಪ್ರತಿಬಾರಿಯೂ ಮತಬ್ಯಾಂಕ್ ರಾಜಕಾರಣ ಮಾಡುತ್ತಿದ್ದು, ಇದೀಗ ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಪ್ರಕರಣದಲ್ಲೂ ಮುಖ್ಯಮಂತ್ರಿ, ಗೃಹಮಂತ್ರಿ ಸೇರಿದಂತೆ ಕಾಂಗ್ರೆಸ್ ನಾಯಕರು ಇದೇ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.

ಇಂದು ಧಾರವಾಡದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೇಹಾ ಪ್ರಕರಣದಲ್ಲಿ ಉಭಯ ನಾಯಕರು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಯಾವುದೇ ಜವಾಬ್ದಾರಿ ತೆಗೆದುಕೊಳ್ಳದ ಹೇಳಿಕೆ ಇದು. ಈ ಮೂಲಕ ನೇಹಾ ಕುಟುಂಬ ಮತ್ತು ಸಮಾಜಕ್ಕೆ ಘೋರ ಅನ್ಯಾಯ ಮಾಡಲಾಗಿದೆ. ಕಾಂಗ್ರೆಸ್ಸಿನ ಈ ತುಷ್ಟೀಕರಣ ನೀತಿಯ ದುಷ್ಪರಿಣಾಮದಿಂದಲೇ ನೇಹಾ ಹಿರೇಮಠ ಹತ್ಯೆಯಾಗಿದೆ ಎಂದು ಆರೋಪಿಸಿದರು.

ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ಹತ್ಯೆ ಪ್ರಕರಣ; ಕಿಮ್ಸ್ ಶವಾಗಾರಕ್ಕೆ  ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಭೇಟಿ

 ಇದೊಂದೇ ಪ್ರಕರಣ ಅಲ್ಲ,  ಬೆಂಗಳೂರಿನ ರಾಮೇಶ್ವರ ಕೆಫೆ ಸ್ಫೋಟವಾದಾಗಲೂ, ಕಾಂಗ್ರೆಸ್ ನಾಯಕರು ತನಿಖೆಗೆ ಮೊದಲೇ ಸಿಲಿಂಡರ್ ಸ್ಪೋಟ ಅಂದರು, ಉಗ್ರರ ಕೃತ್ಯವೆಂದು ಎಫ್‌ಎಸ್‌ಎಲ್ ವರದಿ ಬಂದರೂ ಮುಚ್ಚಿಟ್ಟರು, ಉಡುಪಿಯ ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಇಟ್ಟ ವಿಚಾರದಲ್ಲಿ ಇದು ಮಕ್ಕಳ ಆಟ ಎಂದು ಗೃಹ ಮಂತ್ರಿ ನುಣುಚಿಕೊಂಡಿದ್ದರು. ಶಿವಮೊಗ್ಗದ ಈದ್ ಮಿಲಾದ್ ನಲ್ಲಿ ದೊಡ್ಡ ಖಡ್ಗ ಇಟ್ಟಿದ್ದರು. ಆಗ ಸ್ಥಳೀಯ ಕಾರಣ ಎಂಬ ಸಹಜ ಉತ್ತರವನ್ನು ಮುಖ್ಯಮಂತ್ರಿಗಳು ನೀಡಿದ್ದರು. ಇವರ ಮುಸ್ಲಿಂ ತುಷ್ಟೀಕರಣ ನೀತಿ ಎಷ್ಟರಮಟ್ಟಿಗೆ ಎಂದರೆ ರಾಜ್ಯದ ಶಕ್ತಿಸೌಧ ಎಂದು ಕರೆಸಿಕೊಳ್ಳುವ ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದರೂ ಆಗಲೂ ಈ ರೀತಿ ಘೋಷಣೆ ಕೂಗಿಲ್ಲ, ತಿರುಚಲಾಗಿದೆ ಎಂದು ತಿಪ್ಪೆ ಸಾರಿಸಲು ಯತ್ನಿಸಿದರು. ಕುಕ್ಕರ್ ಬಾಂಬ್ ಸ್ಫೋಟಿಸಿದವರನ್ನ, ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದವರನ್ನು ಓಟ್ ಬ್ಯಾಂಕ್ ಕಾರಣಕ್ಕೆ 'ನಮ್ಮ ಬ್ರದರ್ಸ್' ಎಂದಿದ್ದರು.

ಹತಾಶೆಗೊಂಡ ಕಾಂಗ್ರೆಸ್‌ನಿಂದ ಕೀಳುಮಟ್ಟದ ರಾಜಕಾರಣ: ಪ್ರಲ್ಹಾದ್‌ ಜೋಶಿ

ಇತ್ತೀಚೆಗೆ ನಗರತ್ ಪೇಟೆಯಲ್ಲಿ ಹನುಮಾನ ಚಾಲೀಸ್ ಹಾಡು ಹಾಕಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆಗೊಳಗಾದ ಯುವಕನ ರಕ್ಷಣೆ ಮಾಡುವ ಬದಲು ಯುವಕನ ಮೇಲೆಯೇ ಈ ಸರ್ಕಾರ ಕೇಸ್ ದಾಖಲಿಸಿತು! ಮೊನ್ನೆ ರಾಮನವಮಿ ದಿನದಂದ ಜೈಶ್ರೀರಾಮ್ ಕೂಗಿದ್ದಕ್ಕೆ ಬೈಕ್‌ನಲ್ಲಿ ಬಂದು ಅಡ್ಡಗಟ್ಟಿ ಅಲ್ಲಾ ಹೊ ಅಕ್ಬರ್ ಹೇಳುವಂತೆ ಬೆದರಿಸಿದರು. ಪ್ರಧಾನಿ ಮೋದಿ ಕುರಿತು ಹಾಡು ರಚಿಸಿದ್ದ ಯುವಕನ ಮೇಲೆ ಮರಣಾಂತಿಕ ಹಲ್ಲೆ ನಡೆಸಿದರು. ಇಷ್ಟಾದರೂ ಈ ಸರ್ಕಾರ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂಬುದು ಗಮನಿಸಿದಾಗ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಸಂಪೂರ್ಣ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಉಗ್ರ ಕೃತ್ಯಗಳು, ಕೊಲೆ, ಅತ್ಯಾಚಾರ, ಹಲ್ಲೆ ಸಾಮಾನ್ಯ ಎಂಬಂತೆ ನಡೆಯುತ್ತಿವೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Follow Us:
Download App:
  • android
  • ios