Asianet Suvarna News Asianet Suvarna News

ವಿಕಲಚೇತನ ವ್ಯಕ್ತಿಯನ್ನ ಎತ್ತಿಕೊಂಡು ಬೇರೊಂದು ಬಸ್‌ಗೆ ಹತ್ತಿಸಿ ಮಾನವೀಯತೆ ಮೆರೆದ ಕಂಡಕ್ಟರ್

ಎರಡು ಕಾಲು ಸ್ವಾಧೀನ ಕಳೆದುಕೊಂಡ ವಿಕಲಚೇತನನೊಬ್ಬ ಬಸ್‌ನಲ್ಲಿ ಪ್ರಯಾಣಿಸಿದ್ದ ಬಸ್‌ನಿಲ್ದಾಣದಿಂದ ಇನ್ನೊಂದು ಬಸ್ ಗೆ ಹೋಗಲು ಹರಸಾಹಸ ಪಡುತ್ತಿದ್ದ. ಇದನ್ನು ಗಮನಿಸಿದ ಬಸ್ ಕಾರ್ಯನಿರ್ವಾಹಕ, ವಿಕಲಚೇತನನ್ನು ಮಗುವಿನಂತೆ ಬಸ್‌ನಿಂದ ಎತ್ತಿಕೊಂಡುಹೋಗಿ ಇನ್ನೊಂದು ಬಸ್‌ಗೆ ಹತ್ತಿಸಿ ಮಾನವೀಯತೆ ಮರೆದಿದ್ದಾರೆ.

Appreciation for the bus conductor who helped the disabled at vijayapur rav
Author
First Published Apr 24, 2024, 1:28 PM IST

ವಿಜಯಪುರ (ಏ.24): ಸಮಾಜ ಎಷ್ಟೇ ಅಭಿವೃದ್ಧಿಯಾಗಿದ್ದರೂ ವಿಕಲಚೇತನರ ವಿಚಾರದಲ್ಲಿ ಅದೇ ಹಳೆಯ ಮನಸ್ಥಿತಿಯಲ್ಲಿದೆ. ಅದರಲ್ಲೂ ದೃಷ್ಟಿದೋಷ, ಕಾಲುಗಳಿಲ್ಲದ ಅಂಗವಿಕಲರ ಬದುಕು ಒಂದು ರೀತಿ ಕಠೋರವಾದುದ್ದು. ಒಂದೆಡೆಯಿಂದ ಇನ್ನೊಂದಡೆ ಸಂಚರಿಸಲಾಗದೆ, ದುಡಿಯಲು ಆಗದೇ ಬಸ್‌ ನಿಲ್ದಾಣ, ಸಾರ್ವಜನಿಕ ರಸ್ತೆ, ದೇವಸ್ಥಾನ ಇಲ್ಲೆಲ್ಲ ದೈನೇಸಿಯಾಗಿ ಭಿಕ್ಷೆ ಬೇಡುವುದನ್ನು ನೋಡುವಾಗ ಅಯ್ಯೋ ಅನಿಸುತ್ತದೆ. ಹಾಗೆ ನೂರಾರು ಜನರು ಓಡಾಡುವ ಇಂತಹ ಸ್ಥಳದಲ್ಲಿ ಅದೆಷ್ಟು ಜನರು ಅಂಗವಿಕಲ ಸಹಾಯಕ್ಕೆ ಬರುತ್ತಾರೆ? ಜನರು ಬಹುತೇಕರು  ವಿಕಲಚೇತನರನ್ನ ಮನುಷ್ಯರಂತೆ ನೋಡದೇ ಅನಿಷ್ಟಗಳು, ದರಿದ್ರಗಳು ಎಂಬಂತೆ ಕಾಣುವುದೇ ಹೆಚ್ಚು. ಹೀಗಾಗಿ ಇಂತಹ ಅಂಗವಿಕಲರು ಎಲ್ಲೇ ಬಿದ್ದರೂ ತೆವಳುತ್ತಿದ್ದರೂ ಯಾರೂ ಸಹಾಯಕ್ಕೆ ಮುಂದಾಗುವುದಿಲ್ಲ, ಕಣ್ಣೆತ್ತಿಯೂ ನೋಡುವುದಿಲ್ಲ. ಆದರೆ ಸಮಾಧಾನದ ಸಂಗತಿ ಎಂದರೆ ಇವರ ನಡುವೆಯೂ ಒಳ್ಳೆಯ ವ್ಯಕ್ತಿಗಳಿದ್ದಾರೆ. ಅಂಗವಿಕಲ ಕಷ್ಟಕ್ಕೆ ಮರುಗುವವರಿದ್ದಾರೆಂಬುದಕ್ಕೆ ಬೇಕಾದಷ್ಟು ನಿದರ್ಶನಗಳಿವೆ. ವಿಜಯಪುರದಲ್ಲಿ ನಡೆದಿರುವ ಈ ಘಟನೆ ಮನುಷ್ಯನಲ್ಲಿ ಮಾನವೀತೆ ಇನ್ನೂ ಸತ್ತಿಲ್ಲ ಎಂಬುದಕ್ಕೆ ಸಾಕ್ಷಿಯಂತಿದೆ.

ಎರಡು ಕಾಲು ಸ್ವಾಧೀನ ಕಳೆದುಕೊಂಡ ವಿಕಲಚೇತನನೊಬ್ಬ ಬಸ್‌ನಲ್ಲಿ ಪ್ರಯಾಣಿಸಿದ್ದ ಬಸ್‌ನಿಲ್ದಾಣದಿಂದ ಇನ್ನೊಂದು ಬಸ್ ಗೆ ಹೋಗಲು ಹರಸಾಹಸ ಪಡುತ್ತಿದ್ದ. ಇದನ್ನು ಗಮನಿಸಿದ ಬಸ್ ಕಾರ್ಯನಿರ್ವಾಹಕ, ವಿಕಲಚೇತನನ್ನು ಮಗುವಿನಂತೆ ಬಸ್‌ನಿಂದ ಎತ್ತಿಕೊಂಡುಹೋಗಿ ಇನ್ನೊಂದು ಬಸ್‌ಗೆ ಹತ್ತಿಸಿ ಮಾನವೀಯತೆ ಮರೆದಿದ್ದಾರೆ. ಈ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಬಸ್‌ ನಿಲ್ದಾಣದಲ್ಲಿ ನಿನ್ನೆ ಸಾಯಂಕಾಲ ನಡೆದಿದ್ದು, ವಿಕಲಚೇತನ ಸಾಹಯಕ್ಕೆ ಬಂದ ಕಾರ್ಯನಿರ್ವಾಹಕನ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಅಂಧ ವ್ಯಕ್ತಿಯ ಕೈಹಿಡಿದು ರಸ್ತೆ ದಾಟಿಸಿ ಮಾನವೀಯತೆ ಮೆರೆದ ಟ್ರಾಫಿಕ್ ಪೊಲೀಸ್ !

 ಬಾಗಲಕೋಟೆ ಡಿಪೋಗೆ ಸೇರಿದ ಬಸ್‌ ಕಾರ್ಯನಿರ್ವಾಹಕ ವೀರುಪಾಕ್ಷ ಅಂಬಿಗೇರ, ವಿಕಲಚೇತನನಿಗೆ ಸಹಾಯ ಮಾಡಿದ ಬಸ್ ನಿರ್ವಾಹಕ. ನಿನ್ನೆ ಕಲಬುರ್ಗಿಯಿಂದ ಸಿಂದಗಿ ಮಾರ್ಗವಾಗಿ ಬಾಗಲಕೋಟೆಗೆ ತೆರಳುತ್ತಿದ್ದ ಬಸ್. ಚೌಡಾಪೂರದಲ್ಲಿ ಸಂಬಂಧಿಸಿಕರು ವಿಕಲಚೇತನನ್ನು ಇದೇ ಬಸ್‌ಗೆ ಹತ್ತಿಸಿದ್ದರು. ಸಿಂದಗಿಯಲ್ಲಿ ಬಸ್ ಇಳಿದು ವಿಜಯಪುರಕ್ಕೆ ತೆರಳಬೇಕಿದ್ದ ವಿಕಲಚೇತನ. ಈ ವೇಳೆ ಸಿಂದಗಿ ಬಸ್ ನಿಲ್ದಾಣದಲ್ಲಿ ವಿಜಯಪುರಕ್ಕೆ ತೆರಳುತ್ತಿದ್ದ ಮತ್ತೊಂದು ಬಸ್ ಕಂಡು ಕಂಡಕ್ಟರ್ ಗೆ ಮನವಿ ಮಾಡಿದ್ದಾನೆ. ಅದಕ್ಕೆ ಸ್ಪಂದಿಸಿದ ಕಂಡಕ್ಟರ್ ವಿಕಲಚೇತನನ್ನು ಎತ್ತಿಕೊಂಡು ಹೋಗಿ ವಿಜಯಪುರದ ಬಸ್ಸಿನ ಸೀಟಿಗೆ ಕೂಡಿಸಿದ್ದಾನೆ. 

 

ಆರೋಪಿಗೆ ಕಾಲಿಗೆ ಫೈರ್ ಮಾಡಿದ ಪೊಲೀಸರೇ ಆರೈಕೆ ಮಾಡಿ ಮಾನವೀಯತೆ ಮೆರೆದಿದ್ದಾರೆ!

ಈ ದೃಶ್ಯವನ್ನು ಬಸ್‌ ನಿಲ್ದಾಣದಲ್ಲೇ ಇದ್ದ ಪ್ರಯಾಣಿಕರು ಮೊಬೈಲ್ ನಲ್ಲಿ ಸೆರೆಹಿಡಿದ್ದಾರೆ. ವಿಡಿಯೋ ನೋಡಿದ ಬಳಿಕ ಕಾರ್ಯನಿರ್ವಾಹಕ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕಂಡಕ್ಟರ್ ಮಾನವೀತೆಗೆ ಸೆಲ್ಯೂಟ್ ಎಂದಿದ್ದಾರೆ.

Follow Us:
Download App:
  • android
  • ios