Asianet Suvarna News Asianet Suvarna News

ಎಲ್‌ಕೆ ಅಡ್ವಾಣಿಗೆ ಭಾರತ ರತ್ನ ಘೋಷಣೆ; ಅಯೋಧ್ಯೆಯಿಂದ ಬಂತು ಪೇಜಾವರ ಶ್ರೀಗಳ ಸಂದೇಶ!

ಮಾಜಿ ಉಪಪ್ರಧಾನಿ ನೀಡುವ ವಿಚಾರ ಕೇಳಿ ತುಂಬಾ ಸಂತೋಷವಾಗಿದೆ. ರಾಮ ಮತ್ತು ಕೃಷ್ಣದೇವರ ಅನುಗ್ರಹ ಅಡ್ವಾಣಿಯವರಿಗೆ ಸದಾ ಕಾಲ ಇರಲಿ ಉಡುಪಿ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ಸ್ವಾಮೀಜಿ ತಿಳಿಸಿದ್ದಾರೆ.

Announcement of Bharat Ratna to LK Advani Pejavar shri reaction udupi rav
Author
First Published Feb 3, 2024, 1:56 PM IST

ಉಡುಪಿ (ಫೆ.3): ಮಾಜಿ ಉಪಪ್ರಧಾನಿ ನೀಡುವ ವಿಚಾರ ಕೇಳಿ ತುಂಬಾ ಸಂತೋಷವಾಗಿದೆ ಎಂದು ಉಡುಪಿ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನ ಸ್ವಾಮೀಜಿ ತಿಳಿಸಿದ್ದಾರೆ.

ಶ್ರೀರಾಮಚಂದ್ರನ ಭಕ್ತಿಯನ್ನು ದೇಶದಲ್ಲಿ ಜಾಗೃತವಾಗಿಟ್ಟವರು ಅಡ್ವಾಣಿಯವರು. ರಥಯಾತ್ರೆಯ ಮೂಲಕ ಸುಪ್ತವಾಗಿದ್ದ ರಾಮಮಂದಿರ ಹೋರಾಟಕ್ಕೆ ಬಲ ತುಂಬಿದವರು. ಶ್ರೀ ವಿಶ್ವೇಶ ತೀರ್ಥರ ಜೊತೆ ವಿಶೇಷ ಒಡನಾಟ ಇಟ್ಟುಕೊಂಡಿದ್ದ ಅಡ್ವಾಣಿಯವರು. ಈ ವಯಸ್ಸಿನಲ್ಲೂ ಅವರ ಶ್ರದ್ಧೆ ಮೆಚ್ಚುವಂಥದ್ದು. ಅಡ್ವಾಣಿಯವರು ದೇಶದ ರಾಜಕಾರಣಕ್ಕೆ ಉತ್ತಮ ಮಾರ್ಗದರ್ಶಿಯಾಗಿದ್ದಾರೆ. ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಹುಟ್ಟಿ ದೊಡ್ಡ ರಾಜಕಾರಣಿಯಾಗಿ ಬೆಳೆದವರು ಅಡ್ವಾನಿ. ಕಾರ್ಯಕರ್ತನಿಂದ ಉಪ ಪ್ರಧಾನಿ, ಗೃಹ ಇಲಾಖೆ ಹಾಗೂ ವಾರ್ತಾ ಸಚಿವರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅವರು ಕೇವಲ ರಾಜಕೀಯ ಮಾತ್ರವಲ್ಲ, ಧಾರ್ಮಿಕ ಪ್ರಜ್ಞೆ ಇರುವ ವ್ಯಕ್ತಿಯಾಗಿದ್ದರು ಎಂದು ತಿಳಿಸಿದರು.

Breaking: ಬಿಜೆಪಿಯ ಭೀಷ್ಮ ಎಲ್‌ ಕೆ ಅಡ್ವಾಣಿಗೆ ಭಾರತರತ್ನ ಘೋಷಣೆ

ನಾನು ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಿಶ್ವಾಸ್ಥನಾದಾಗ ಅಡ್ವಾಣಿಯವರನ್ನು ಭೇಟಿಯಾಗಿದ್ದೆ. ಅವರು ಓರ್ವ ವಿನಯವಂತ ರಾಜಕಾರಣಿ. ನಾನು ಅವರ ಮನೆಗೆ ತೆರಳಿ ಅವರನ್ನು ಅಭಿನಂದಿಸಿ ಬಂದಿದ್ದೆ. ಮನೆಯಿಂದ ಬರುವಾಗ ಅವರುಇಳಿ ವಯಸ್ಸಿನಲ್ಲೂ ಬಾಗಿಲವರೆಗೆ ಬಂದು ನನ್ನನ್ನು ಬಿಳ್ಕೊಟ್ಟು ಹೋಗಿದ್ದರು ಅದನ್ನೆಂದು ಮರೆಯಲಾರೆ. ರಾಮ ಮತ್ತು ಕೃಷ್ಣದೇವರ ಅನುಗ್ರಹ ಅಡ್ವಾಣಿಯವರಿಗೆ ಸದಾ ಕಾಲ ಇರಲಿ ಎಂದು ಹಾರೈಸಿದ್ದಾರೆ.

ರಾಮಮಂದಿರ ಕಟ್ಟಲು ಮೋದಿಗೆ ದೀಕ್ಷೆ ಕೊಟ್ಟನಂತೆ ಶ್ರೀರಾಮ: ರಾಮ ಸತ್ಯ ಬಿಚ್ಚಿಟ್ಟ ಬಿಜೆಪಿ ಭೀಷ್ಮ..!

 

Follow Us:
Download App:
  • android
  • ios