Asianet Suvarna News Asianet Suvarna News

ಅಂಬರೀಷ್ ಕೈ ತಪ್ಪಿ 'ಬಂಧನ' ಸಿನಿಮಾ ವಿಷ್ಣುವರ್ಧನ್ ಪಾಲಾಗಿದ್ದು ಹೇಗೆ, ಘಟನೆ ಹಿಂದಿನ ಅಸಲಿಯತ್ತೇನು ?

ಮೊದಲಬಾರಿಗೆ ನಟ ವಿಷ್ಣುವರ್ಧನ್ ಅವರು ತಮ್ಮ ಹಳೆಯ ಆ್ಯಂಗ್ರಿ ಯಂಗ್‌ಮ್ಯಾನ್ ಇಮೇಜ್ ಕಳಚಿಕೊಂಡು 'ಡೀಪ್ ಲವರ್' ಅಂದರೆ, ಅಮರಪ್ರೇಮಿಯಾಗಿ ಕಾಣಿಸಿಕೊಂಡರು. ಅಚ್ಚರಿ ಎಂದರೆ, ಬಂಧನ ಚಿತ್ರದ ಆಫರ್ ಮೊದಲು ಬಂದಿದ್ದು ನಟ ವಿಷ್ಣುವರ್ಧನ್ ಅವರಿಗಲ್ಲ.

Bandhana movie success brings new lover boy image to Angry young man actor Vishnuvardhan srb
Author
First Published Apr 18, 2024, 6:08 PM IST

ಅಭಿನಯ ಭಾರ್ಗವ, ಸಾಹಸಸಿಂಹ ಖ್ಯಾತಿಯ ನಟ ದಿವಂಗತ ವಿಷ್ಣುವರ್ಧನ್ (Vishnuvardhan)ಅವರು ಕನ್ನಡ ಚಿತ್ರರಂಗದಲ್ಲಿ ಮೇರುನಟ ಎಂಬ ಖ್ಯಾತಿಗೆ ಪಾತ್ರರಾದವರು. ಅವರ ಬರೋಬ್ಬರಿ ಇನ್ನೂರು (200) ಚಿತ್ರಗಳಲ್ಲಿ ನಟಿಸಿ, ಡಾ ರಾಜ್‌ ಹೊರತುಪಡಿಸಿದರೆ ಅತಿಹೆಚ್ಚು ಸಿನಿಮಾಗಳಲ್ಲಿ ನಟಿಸಿದವರು. ವಂಶವೃಕ್ಷ ಚಿತ್ರದ ಮೂಲಕ ತಮ್ಮ ಸಿನಿಮಾ ಜರ್ನಿಯನ್ನು ಶುರುಮಾಡಿದ್ದ ನಟ ಕುಮಾರ್, ತಾವು ನಟಿಸಿದ ಎರಡನೇ ಚಿತ್ರ 'ನಾಗರಹಾವು (Nagarahavu)ಮೊದಲು ಬಿಡುಗಡೆಯಾಗುವ ಮೂಲಕ ಕರ್ನಾಟಕದಲ್ಲಿ ವಿಷ್ಣುವರ್ಧನ್ ಹೆಸರಿನಿಂದ ಮನೆಮಾತಾದರು. 

ನಾಗರಹಾವು ಚಿತ್ರದ ಮೂಲಕ ನಟ ವಿಷ್ಣುವರ್ಧನ್ ಅವರು ಆ್ಯಂಗ್ರಿ ಯಂಗ್‌ಮ್ಯಾನ್ ಇಮೇಜ್ ಹೊಂದಿದ್ದರು. ಆದರೆ ಅವರ ವೃತ್ತಿಜೀವನದಲ್ಲಿ ಬಂದ ಇನ್ನೊಂದು ಚಿತ್ರದ ಮೂಲಕ ಅವರು ಲವರ್‌ ಬಾಯ್-ಅಮರಪ್ರೇಮಿ ಇಮೇಜ್ ಹೊಂದಿದರು. ಆ ಚಿತ್ರವೇ ಬಂಧನ (Bandhana). 80ರ ದಶಕದಲ್ಲಿ ತೆರೆಗೆ ಬಂದಿದ್ದ 'ಬಂಧನ' ಚಿತ್ರವು, 24 ಆಗಸ್ಟ್ 2024ರಂದು (24 August 1984) ಕರ್ನಾಟಕದಾದ್ಯಂತ ಬಿಡುಗಡೆ ಕಂಡು, ಬರೋಬ್ಬರಿ 100 ಕೋಟಿಗೂ ಅಧಿಕ ಕಲೆಕ್ಷನ್ ದಾಖಲಿಸಿತ್ತು. 18 ಥಿಯೇಟರ್‌ಗಳಲ್ಲಿ 469 ದಿನಗಳಷ್ಟು ಹೌಸ್‌ಫುಲ್ ಪ್ರದರ್ಶನ ಕಂಡಿರುವ ಖ್ಯಾತಿ ಬಂಧನ ಚಿತ್ರದ್ದು. 

ನಟ ಮೋಹನ್‌ಲಾಲ್‌ ಭೇಟಿಯಾದ 'ಕಾಂತಾರ' ರಿಷಬ್ ಶೆಟ್ಟಿ; ಸಡನ್ ಭೇಟಿ-ಮಾತುಕತೆ ಮರ್ಮವೇನು?

ಮೊದಲಬಾರಿಗೆ ನಟ ವಿಷ್ಣುವರ್ಧನ್ ಅವರು ತಮ್ಮ ಹಳೆಯ ಆ್ಯಂಗ್ರಿ ಯಂಗ್‌ಮ್ಯಾನ್ ಇಮೇಜ್ ಕಳಚಿಕೊಂಡು 'ಡೀಪ್ ಲವರ್' ಅಂದರೆ, ಅಮರಪ್ರೇಮಿಯಾಗಿ ಕಾಣಿಸಿಕೊಂಡರು. ಅಚ್ಚರಿ ಎಂದರೆ, ಬಂಧನ ಚಿತ್ರದ ಆಫರ್ ಮೊದಲು ಬಂದಿದ್ದು ನಟ ವಿಷ್ಣುವರ್ಧನ್ ಅವರಿಗಲ್ಲ. ರೆಬೆಲ್ ಸ್ಟಾರ್ ಅಂಬರೀಷ್ ಅವರನ್ನು ಈ ಚಿತ್ರಕ್ಕಾಗಿ ಮೊದಲು ಅಪ್ರೋಚ್ ಮಾಡಲಾಗಿತ್ತು. ಆದರೆ ನಟ ಅಂಬರೀಷ್ ಅವರು ಈ ಚಿತ್ರವನ್ನು ರಿಜೆಕ್ಟ್ ಮಾಡಿಬಿಟ್ಟರು. ಬಳಿಕ ಈ ಕತೆಯನ್ನು ನಟ ವಿಷ್ಣುವರ್ಧನ್ ಅವರಿಗೆ ಹೇಳಲಾಗಿ, ಅವರು ಅದನ್ನು ಒಪ್ಪಿ ನಟಿಸಿದರು. ಬಂಧನ ಚಿತ್ರದ ಮೂಲಕ ನಟ ವಿಷ್ಣುವರ್ಧನ್ ಹಾಗು ನಟಿ ಸುಹಾಸಿನಿ ಜೋಡಿ ತುಂಬಾ ಜನಪ್ರಿಯವಾಯಿತು.

'ಫಾರೆಸ್ಟ್' ಕಥೆ ಹೇಳೋದಿಕ್ಕೆ ಬಂದರು ಬ್ರಹ್ಮಚಾರಿ ಡೈರೆಕ್ಟರ್, ಚಂದ್ರಮೋಹನ್ ಸಿನಿಮಾದಲ್ಲಿ‌ ಯಾರೆಲ್ಲ ಇದಾರೆ ನೋಡಿ! 

ಒಟ್ಟಿನಲ್ಲಿ, 80ರ ದಶಕದಲ್ಲೇ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡುವುದು ಎಂದರೆ ಸಾಮಾನ್ಯ ಸಂಗತಿಯಲ್ಲ. ಏಕೆಂದರೆ, ಅಂದು ಕನ್ನಡ ಚಿತ್ರವೊಂದು 50 ಕೋಟಿ ಕಲೆಕ್ಷನ್ ಮಾಡುವುದೇ ದೊಡ್ಡ ಸಾಹಸ ಎಂಬಂತಾಗಿತ್ತು. ಅಂತ ಸಮಯದಲ್ಲಿ ಬಂಧನ ಚಿತ್ರವು ನೂರು ಕೋಟಿ ಗಳಿಸಿದ್ದು ಇತಿಹಾಸ ಸೃಷ್ಟಿ ಎನಿಸಿತ್ತು. ನಟ ವಿಷ್ಣುವರ್ಧನ್ ಜೀವನದಲ್ಲಿ ಬಂಧನ ಚಿತ್ರವು ಹೊಸದೊಂದು ಮೈಲಿಗಲ್ಲು ಸ್ಥಾಪಿಸಿತ್ತು ಎಂಬುದು ಸತ್ಯ ಸಂಗತಿಯೇ ಸರಿ. 

ಸ್ಕ್ರೀನ್ ಮೇಲೆ ಮೆರೆಯಲು ಸಜ್ಜಾಗಿದೆ 'ನಾಲ್ಕನೇ ಆಯಾಮ', ಯುವ ಪ್ರತಿಭೆ ಗೌತಮ್ ಜೊತೆ ರಚನಾ ಯಾನ!

Follow Us:
Download App:
  • android
  • ios