Asianet Suvarna News Asianet Suvarna News

ಜನಾರ್ದನ ರೆಡ್ಡಿ ತನ್ನನ್ನು ತಾನೇ ಮಹಾನ್‌ ನಾಯಕ ಅಂತ ಅಂದುಕೊಂಡಿದ್ದಾನೆ: ಶಿವರಾಜ್ ತಂಗಡಗಿ ಗರಂ

ಜೂನ್ 4 ರ ನಂತರ ಯಾರು ಯಾರ ಕಪಾಳಕ್ಕೆ ಹೊಡೆಯುತ್ತಾರೆ ಅನ್ನೋದು ಗೊತ್ತಾಗುತ್ತದೆ. ಜನಾರ್ದನ ರೆಡ್ಡಿ ಆಟ ಕೊಪ್ಪಳದಲ್ಲಿ ನಡೆಯಲ್ಲ.  ಜನಾರ್ದನ ರೆಡ್ಡಿಗೆ ಪುಲ್ವಾಮ ದಾಳಿ, ಸರ್ಜಿಕಲ್‌ ಸ್ಟ್ರೈಕ್ ಬಳಿ ಗಂಧಗಾಳಿ ಗೊತ್ತಿಲ್ಲದೇ ಮಾತನಾಡುತ್ತಿದ್ದಾರೆ. ತಾಕತ್ ಇದ್ರೆ ಎರಡು ಕೋಟಿ ಉದ್ಯೋಗ ನೀಡೋ ಹೇಳಿಕೆ ಬಗ್ಗೆ ಉತ್ತರ ನೀಡಲಿ ಎಂದು ಜನಾರ್ದನ ರೆಡ್ಡಿ ಸವಾಲ್‌ ಹಾಕಿದ ಸಚಿವ ಶಿವರಾಜ್ ತಂಗಡಗಿ  
 

Minister Shivaraj Tangadagi Slams Gangavathi MLA  Janardhana Reddy grg
Author
First Published May 7, 2024, 1:00 PM IST

ಕೊಪ್ಪಳ(ಮೇ.07):  ಜನಾರ್ದನ ರೆಡ್ಡಿ ದೊಡ್ಡ ನಾಯಕನಲ್ಲ. ಸ್ವತಂತ್ರ ಹೋರಾಟ ಮಾಡಿ ಜೈಲಿಗೆ ಹೋಗಿ ಬಂದಿಲ್ಲಾ?. ಆತ ಜೈಲಿಗೆ ಹೋಗಿ ಬಂದಿದ್ದು ಯಾಕೆ ಅಂತ ಎಲ್ಲರಿಗೂ ಗೊತ್ತಿದೆ. ಮಣ್ಣು ಕಳ್ಳತನ ಮಾಡಿ ಜೈಲಿಗೆ ಹೋಗಿ ಬಂದಿದ್ದಾನೆ. ಜನಾರ್ದನ ರೆಡ್ಡಿ ತನ್ನನ್ನು ತಾನೇ ಮಹಾನ್‌ ನಾಯಕ ಅಂತ ಅಂದುಕೊಂಡಿದ್ದಾನೆ ಎಂದು ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಸಚಿವ ಶಿವರಾಜ್ ತಂಗಡಗಿ ಮತ್ತೊಮ್ಮೆ ಗುಡುಗಿದ್ದಾರೆ. 

ಇಂದು(ಮಂಗಳವಾರ)  ಕೊಪ್ಪಳ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರುವ ಕನಕಗಿರಿ ವಿಧಾನಸಭಾ‌ ಕ್ಷೇತ್ರದ ಕಾರಟಗಿಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ಪತ್ನಿ ವಿದ್ಯಾ ತಂಗಡಗಿ, ಪುತ್ರರಾದ ಶಶಿ, ಕಿರಣ್, ಸಹೋದರಾದ ವೆಂಕಟೇಶ್ ತಂಗಡಗಿ, ನಾಗರಾಜ್ ತಂಗಡಗಿ ಅವರ ಸಮೇತ ಮತದಾನ ಮಾಡಿದರು.

ಶಿವಮೊಗ್ಗ ಲೋಕಸಭಾ ಚುನಾವಣೆ: ಪತ್ನಿ ಗೆಲುವಿಗಾಗಿ ಶಿವರಾಜ್ ಕುಮಾರ್ ಟೆಂಪಲ್ ರನ್..!

ಮತದಾನದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ಅವರು,  ಜೂನ್ 4 ರ ನಂತರ ಯಾರು ಯಾರ ಕಪಾಳಕ್ಕೆ ಹೊಡೆಯುತ್ತಾರೆ ಅನ್ನೋದು ಗೊತ್ತಾಗುತ್ತದೆ. ಜನಾರ್ದನ ರೆಡ್ಡಿ ಆಟ ಕೊಪ್ಪಳದಲ್ಲಿ ನಡೆಯಲ್ಲ.  ಜನಾರ್ದನ ರೆಡ್ಡಿಗೆ ಪುಲ್ವಾಮ ದಾಳಿ, ಸರ್ಜಿಕಲ್‌ ಸ್ಟ್ರೈಕ್ ಬಳಿ ಗಂಧಗಾಳಿ ಗೊತ್ತಿಲ್ಲದೇ ಮಾತನಾಡುತ್ತಿದ್ದಾರೆ. ತಾಕತ್ ಇದ್ರೆ ಎರಡು ಕೋಟಿ ಉದ್ಯೋಗ ನೀಡೋ ಹೇಳಿಕೆ ಬಗ್ಗೆ ಉತ್ತರ ನೀಡಲಿ ಎಂದು ಸವಾಲ್‌ ಹಾಕಿದ್ದಾರೆ. 
ಬಿಜೆಪಿಯಲ್ಲಿ ದೊಡ್ಡ ಅಧಿಕಾರ ನೀಡಿದವರ ರೀತಿ ರೆಡ್ಡಿ ಮಾತನಾಡುತ್ತಿದ್ದಾನೆ. ಆತನಿಗೆ ಬಿಜೆಪಿಯವರು ಯಾವ ಅಧಿಕಾರ ಕೂಡ ನೀಡಲ್ಲ.  ನಮ್ಮನ್ನು ತೋರಿಸಿ ಜನಾರ್ದನ ರೆಡ್ಡಿ ಮಂತ್ರಿಯಾಗಿದ್ದಾನೆ. ಬಿಜೆಪಿಯವರಿಗೆ ಈ ಹಿಂದೆ ರೆಡ್ಡಿ ಯಾರಿಗೆ ಎಷ್ಟು ತೊಂದರೆ ಕೊಟ್ಟಿದ್ದಾನೆ ಅಂತ ಎಲ್ಲರಿಗೂ ಗೊತ್ತಿದೆ. ಈ ಹಿಂದೆ ಶ್ರೀರಾಮುಲರನ್ನು ಸೋಲಿಸಿದ್ದು ಯಾರು? ಅಂತ ಶಿವರಾಜ್ ತಂಗಡಗಿ ಪ್ರಶ್ನಿಸಿದ್ದಾರೆ. 

ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಡಿ.ಕೆ ಶಿವಕುಮಾರ್ ಹೆಸರು ಪ್ರಸ್ತಾಪ ವಿಚಾರದ ಬಗ್ಗೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ, ಇಷ್ಟು ಸಣ್ಣತನ ಮಾಡೋ ಅವಶ್ಯಕತೆ ಕಾಂಗ್ರೆಸ್ ಪಕ್ಷಕ್ಕಿಲ್ಲ. ಯಾರ ವ್ಯಯಕ್ತಿಕ ವಿಚಾರ ಬಗ್ಗೆ ನಾನು ಮತನಾಡಲ್ಲ. ಯಾರು ತಪ್ಪು ಮಾಡಿದ್ದಾರೋ ಅವರು ಶಿಕ್ಷೆ ಅನುಭವಿಸುತ್ತಾರೆ. ಡಿ.ಕೆ ಶಿವಕುಮಾರ್ ರಾಜ್ಯಾಧ್ಯಕ್ಷರಾಗಿ ಅವರದೇ ಆತ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. 

Follow Us:
Download App:
  • android
  • ios