Asianet Suvarna News Asianet Suvarna News

ಬಿಜೆಪಿ ಸರ್ಕಾರ ಇದ್ದಾಗ ಭಯೋತ್ಪಾದಕರ ಅಡ್ಡೆಯಾಗಿತ್ತು; ನಮ್ಮ ಸರ್ಕಾರ ಬಂದ ಮೇಲೆ ಕಡಿಮೆಯಾಗಿದೆ: ರಾಮಲಿಂಗಾರೆಡ್ಡಿ

ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಆಗಿದ್ದನ್ನ ನಾನು ಸಮರ್ಥಿಸುವುದಿಲ್ಲ. ಬಾಂಬ್ ಸ್ಫೋಟಿಸಿದವರ ವಿರುದ್ಧ ಕ್ರಮ ತಗೊಬೇಕು, ಜೈಲಿಗೆ ಹಾಕಿ ಎಲ್ಲ ರೀತಿಯ ಶಿಕ್ಷೆ ಆಗಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

Minister Ramalingareddy outraged against Karnatkaa BJP at Kalaburagi rav
Author
First Published Mar 5, 2024, 2:45 PM IST

ಕಲ್ಬುರ್ಗಿ (ಮಾ.5): ಬೆಂಗಳೂರಿನಲ್ಲಿ ಬಾಂಬ್ ಸ್ಫೋಟ ಆಗಿದ್ದನ್ನ ನಾನು ಸಮರ್ಥಿಸುವುದಿಲ್ಲ. ಬಾಂಬ್ ಸ್ಫೋಟಿಸಿದವರ ವಿರುದ್ಧ ಕ್ರಮ ತಗೊಬೇಕು, ಜೈಲಿಗೆ ಹಾಕಿ ಎಲ್ಲ ರೀತಿಯ ಶಿಕ್ಷೆ ಆಗಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಇದ್ದಾಗ 6 ಕಡೆ ಸರಣಿ ಬಾಂಬ್ ಬ್ಲಾಸ್ಟ್ ಆಗಿತ್ತು. ಚಿನ್ನಸ್ವಾಮಿ ಸ್ಟೇಡಿಯಂ ಬಳಿ, ಮಲ್ಲೇಶ್ವರಂ ನಲ್ಲಿ, ವಿಮಾನ ನಿಲ್ದಾಣದಲ್ಲಿ , ಮಂಗಳೂರಿನಲ್ಲಿ   ಬಿಜೆಪಿ ಸರಕಾರ ಇದ್ದಾಗ ಬ್ಲಾಸ್ಟ್ ಆಗಿದ್ದವು. ಬಿಜೆಪಿ ಸರ್ಕಾರದಲ್ಲಿ ಭಯೋತ್ಪಾದಕರ ಅಡ್ಡೆಯಾಗಿತ್ತು. ಬಿಜೆಪಿಗೆ ಕಂಪೇರ್ ಮಾಡಿದ್ರೆ ಬಾಂಬ್ ಬ್ಲಾಸ್ಟ್, ಕ್ರಿಮಿನಲ್ ಆಕ್ಟಿವಿಟಿ ನಮ್ಮ ಅವಧಿಯಲ್ಲಿ ಬಹಳ ಕಡಿಮೆ ಆಗಿದೆ. ಮುಂದೆ ಸಂಪೂರ್ಣ ನಿಯಂತ್ರಣ ಮಾಡ್ತೇವೆ. ಪೊಲೀಸರಿಗೆ ಏನು ಕೆಲಸ ಮಾಡಬೇಕು ಗೊತ್ತಿದೆ, ಬಿಜೆಪಿಯವರನ್ನೆಲ್ಲಾ  ಕೇಳಕೊಂಡು ಮಾಡಬೇಕಾ ? ಎಂದು ಪ್ರಶ್ನಿಸಿದರು.

FSL ವರದಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದು ನಿಜ ಎಂದಿದೆ: ಡಾ ಜಿ ಪರಮೇಶ್ವರ್

ನಮ್ಮ ಸರಕಾರ ಬಂದ ಮೇಲೆ ಒಂದೇ ಕಡೆ ಆಗಿದ್ದು ಅದನ್ನೂ ನಿಯಂತ್ರಣ ಮಾಡ್ತೇವೆ. ಅಲ್ಪಸಂಖ್ಯಾತರ ಓಲೈಕೆ ಎಲ್ಲಾ ಸುಳ್ಳು ದೇಶದಲ್ಲಿರುವ ಜನ ಎಲ್ಲಾ ಒಂದೇ ಅನ್ನೋರು ನಾವು ವೋಟಿಗಾಗಿ ಬಿಜೆಪಿಯವರು ಜನರನ್ನು ಡಿವೈಡ್ ಮಾಡ್ತಿದಾರೆ. ಬಿಜೆಪಿ ಥರ ನಮಗೆ ಸುಳ್ಳು ಹೇಳಲು ಬರಲ್ಲ. ನಾವು ಗಾಂಧಿ ಫಾಲೋವರ್ಸ್. ಅವರಿಗೆ ಸುಳ್ಳು ಹೇಳದಿದ್ರೆ ತಿಂದ ಅನ್ನ ಜೀರ್ಣ ಆಗಲ್ಲ. ಮಂಡ್ಯದಲ್ಲಿ ಎರಡು ವರ್ಷದ ಹಿಂದೆ ಪಾಕಿಸ್ತಾನ ಜಿಂದಾಬಾದ ಅಂತ ಒಬ್ಬ ಘೋಷಣೆ ಕೂಗ್ತಾನೆ. ಆಗ ಇನ್ನೊಬ್ಬ ಆತನ ಬಾಯಿ ಮುಚ್ಚಿಸ್ತಾನೆ. ಆಗ ಬಿಜೆಪಿಯವರು ಏನು ಮಾಡ್ತಿದ್ರು? ಮಣ್ಣು ತಿಂತಿದ್ರಾ? ನಾವಾದ್ರೆ ತಕ್ಷಣವೇ ಅರೆಸ್ಟ್ ಮಾಡಿದ್ದೇವೆ. ಬಿಜೆಪಿಯವರು ಏನು ಮಾಡಿದ್ರು? ಎಂದು ತಿರುಗೇಟು ನೀಡಿದರು.

ಪಾಕ್ ಪರ ಘೋಷಣೆ ಕೂಗಿದ ಪ್ರಕರಣ: ತನಿಖೆ ನಡೆಸಲು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ : ಡಿಕೆ ಶಿವಕುಮಾರ

ವಿಧಾನಸೌಧದಲ್ಲಿ ಘೋಷಣೆ ಕೂಗಿದರೂ, ಕೆಲ ಸಚಿವರು ದೇಶದ್ರೋಹಿಗಳ ರಕ್ಷಣೆಗೆ ಮುಂದಾದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಘೋಷಣೆ ಕೂಗಿಲ್ಲ ಅಂತಾ ಯಾರು ಹೇಳಿದ್ರೋ ಅವರನ್ನೇ ಹೋಗಿ ಕೇಳಿ ಎಂದರು. 

Follow Us:
Download App:
  • android
  • ios