Asianet Suvarna News Asianet Suvarna News

ಲೋಕಸಭೆ ಚುನಾವಣೆ 2024: ಕಲಬುರಗಿಯಿಂದ ಖರ್ಗೆ ಹೆಸರಷ್ಟೇ ಶಿಫಾರಸ್ಸು, ಡಿಕೆಶಿ

ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿಯಿಂದ ಸ್ಪರ್ಧೆ ಮಾಡಬೇಕು ಎಂಬ ಬೇಡಿಕೆ ದೊಡ್ಡದಾಗಿಯೇ ಇದೆ. ಆದರೆ, ಖರ್ಗೆಯವರು ಎಐಸಿಸಿ ಅಧ್ಯಕ್ಷರು. ಇಡೀ ದೇಶದೆಲ್ಲೆಡೆ ಓಡಾಡಬೇಕಾಗುತ್ತದೆ. ಅವರಿಗೆ ಜವಾಬ್ದಾರಿ ಜಾಸ್ತಿ ಇದೆ. ಹೀಗಾಗಿ, ಸ್ಪರ್ಧೆಯ ತೀರ್ಮಾನವನ್ನು ಅವರೇ ಮಾಡುತ್ತಾರೆ: ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾ‌ರ್ 

Mallikarjuna Kharge Name Recommended from Kalaburagi Says DCM DK Shivakumar grg
Author
First Published Mar 9, 2024, 8:51 AM IST

ನವದೆಹಲಿ(ಮಾ.09):  ಕಲಬುರಗಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್‌ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನಷ್ಟೇ ಶಿಫಾರಸ್ಸು ಮಾಡಲಾಗಿದೆ. ಅವರು ಕಲಬುರಗಿ ಯಿಂದಲೇ ಸ್ಪರ್ಧಿಸಬೇಕು ಎಂಬುದು ಕಾಂಗ್ರೆಸ್‌ ನಾಯಕರ, ಕಾರ್ಯಕರ್ತರ ಒತ್ತಾಯ. ಆದರೆ, ಸ್ಪರ್ಧೆ ಮಾಡುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದು ಉಪ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿ. ಕೆ.ಶಿವಕುಮಾ‌ರ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಅವರು ಕಲಬುರಗಿಯಿಂದ ಸ್ಪರ್ಧೆ ಮಾಡಬೇಕು ಎಂಬ ಬೇಡಿಕೆ ದೊಡ್ಡದಾಗಿಯೇ ಇದೆ. ಆದರೆ, ಖರ್ಗೆಯವರು ಎಐಸಿಸಿ ಅಧ್ಯಕ್ಷರು. ಇಡೀ ದೇಶದೆಲ್ಲೆಡೆ ಓಡಾಡಬೇಕಾಗುತ್ತದೆ. ಅವರಿಗೆ ಜವಾಬ್ದಾರಿ ಜಾಸ್ತಿ ಇದೆ. ಹೀಗಾಗಿ, ಸ್ಪರ್ಧೆಯ ತೀರ್ಮಾನವನ್ನು ಅವರೇ ಮಾಡುತ್ತಾರೆ ಎಂದರು. ಇದಕ್ಕೂ ಮೊದಲು ಶಿವಕುಮಾರ್, ನವ ದೆಹಲಿಯ ರಾಜಾಜಿ ಮಾರ್ಗ ದಲ್ಲಿರುವ ಖರ್ಗೆ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದರು.

ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ: ಸಂಸದ ರಾಘವೇಂದ್ರ ಭವಿಷ್ಯ

ದಲಿತ ಸಿಎಂ ಕುರಿತ ಮಹದೇವಪ್ಪ ಹೇಳಿ ಕೆಗೆ ಪ್ರತಿಕ್ರಿಯಿಸಿದ ಶಿವಕುಮಾ‌ರ್, 'ಅವರಿಗೆ ಒಳ್ಳೆಯದಾಗಲಿ' ಎಂದರು. 'ಸಿಎಂ ಆಗಬೇ ಕೆಂದು ಮಹದೇವಪ್ಪನವರು ಆಸೆ ಪಡುವುದ ರಲ್ಲಿ ತಪ್ಪಿಲ್ಲ, ಆಸೆ ಪಡಲಿ ಬಿಡಿ' ಎಂದರು.

Follow Us:
Download App:
  • android
  • ios