Asianet Suvarna News Asianet Suvarna News

ಈಶ್ವರಪ್ಪ ಬದಲಾವಣೆಗೆ ಕಾರಣ ನನಗೆ ಅರ್ಥವಾಗುತ್ತಿಲ್ಲ: ಬಿ.ವೈ.ರಾಘವೇಂದ್ರ

ಈಶ್ವರಪ್ಪ ಅವರು ಎರಡು ವಾರದ ಕೆಳಗೆ ರಾಘಣ್ಣ ನೆಚ್ಚಿನ ಸಂಸದ. ಅವರನ್ನು ಹೆಚ್ಚಿನ ಮತದಿಂದ ಗೆಲ್ಲಿಸಬೇಕು ಎಂದು ಆಶೀರ್ವಾದ ಮಾಡಿದ್ದರು. ಈಗ ಅವರ ಬದಲಾವಣೆಗೆ ಕಾರಣ ನನಗಂತೂ ಅರ್ಥವಾಗುತ್ತಿಲ್ಲ ಇದಕ್ಕೆಲ್ಲ ಮುಂದಿನ ದಿನದಲ್ಲಿ ಮತದಾರರೇ ಉತ್ತರ ಕೊಡುತ್ತಾರೆ ಎಂದ ಸಂಸದ ಬಿ.ವೈ.ರಾಘವೇಂದ್ರ 

I Do Not Understand the Reason for KS Eshwarappa's Change says BY Raghavendra grg
Author
First Published Mar 31, 2024, 1:20 PM IST

ಶಿವಮೊಗ್ಗ(ಮಾ.31):  ಈಶ್ವರಪ್ಪ ಅವರು ಯಡಿಯೂರಪ್ಪ ಕುಟುಂಬದಿಂದ ಬಿಜೆಪಿ ಹಾಳಾಗಿದೆ ಎನ್ನುತ್ತಿರುವುದು ನೋವಾಗಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈಶ್ವರಪ್ಪ ಅವರು ಎರಡು ವಾರದ ಕೆಳಗೆ ರಾಘಣ್ಣ ನೆಚ್ಚಿನ ಸಂಸದ. ಅವರನ್ನು ಹೆಚ್ಚಿನ ಮತದಿಂದ ಗೆಲ್ಲಿಸಬೇಕು ಎಂದು ಆಶೀರ್ವಾದ ಮಾಡಿದ್ದರು. ಈಗ ಅವರ ಬದಲಾವಣೆಗೆ ಕಾರಣ ನನಗಂತೂ ಅರ್ಥವಾಗುತ್ತಿಲ್ಲ ಇದಕ್ಕೆಲ್ಲ ಮುಂದಿನ ದಿನದಲ್ಲಿ ಮತದಾರರೇ ಉತ್ತರ ಕೊಡುತ್ತಾರೆ ಎಂದರು.

ಯಡಿಯೂರಪ್ಪ ಅವರ ಜೊತೆ ಸೇರಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಈಶ್ವರಪ್ಪ ಅವರ ಪಾತ್ರ ಹಿರಿದು. ಆದರೆ, ಇತ್ತೀಚೆಗೆ ಕಾರ್ಯಕರ್ತರ ಸಭೆ ಕರೆದು ಶಿವಮೊಗ್ಗ ಕ್ಷೇತ್ರದಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಕೇಂದ್ರ ನಾಯಕರು ಹಾಗೂ ಯಡಿಯೂರಪ್ಪ ಅವರಿಗೆ ಸಂದೇಶ ನೀಡುತ್ತೇನೆ ಎಂದು ಈಶ್ವರಪ್ಪ ಬಹಿರಂಗವಾಗಿ ಹೇಳಿದ್ದಾರೆ. ಅದೇ ರೀತಿ, ಪ್ರಧಾನಿ ಮೋದಿ ಬಗ್ಗೆ ಗೌರವವಿದೆ. ಆದರೆ, ಹೈಕಮಾಂಡ್ ಗೆ ಬುದ್ಧಿ ಕಲಿಸುತ್ತೇನೆ ಎಂದೂ ಹೇಳಿದ್ದಾರೆ. ಆದ್ದರಿಂದ, ಈಶ್ವರಪ್ಪ ಅವರ ದ್ವಂದ್ವ ನಿಲುವು ತಿಳಿಯುತ್ತಿಲ್ಲ ಎಂದರು.

ಬಿ.ವೈ.ರಾಘವೇಂದ್ರ ಮಠಾಧೀಶರಿಗೆ ಬೆದರಿಕೆ ಹಾಕಿದ್ದು ನಿಜ: ಕೆ.ಎಸ್.ಈಶ್ವರಪ್ಪ

ಕಾಂಗ್ರೆಸ್‌ನವರು ವೈಯಕ್ತಿಕ ಟೀಕೆ ಬಿಡಬೇಕು:

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ವರ್ಷ ಕಳೆಯುತ್ತಿದೆ. ಹಾಲು ಉತ್ಪಾದಕರಿಗೆ ಬಾಕಿ ಹಣ ಹಾಕಿಲ್ಲ. ಬರಗಾಲದಲ್ಲಿ ರೈತರಿಗೆ ಪೂರಕ ಯೋಜನೆ ತರಲಿಲ್ಲ. ಇನ್ನಾದರೂ ತಪ್ಪು ತಿದ್ದುಕೊಳ್ಳದಿದ್ದರೆ ಚುನಾವಣೆಯಲ್ಲಿ ಜನರೇ ನಿಮಗೆ ಉತ್ತರ ಕೊಡುತ್ತಾರೆ. ಬರಗಾಲ ವೇಳೆ ರೈತರಿಗೆ ಎರಡು ಸಾವಿರ ರುಪಾಯಿ ಕೊಟ್ಟಿದ್ದೀರಿ. ಈ ಹಿಂದೆ ಯಡಿಯೂರಪ್ಪ ಅವರು ಕೃಷಿ ಸನ್ಮಾನ್‌ ಯೋಜನೆಯಡಿ 4 ಸಾವಿರ ರುಗಳ ನಿಲ್ಲಿಸಿ, ಈಗ ಕಾಟಚಾರಕ್ಕೆ 2 ಸಾವಿರು ರು, ಕೊಟ್ಟು ನಾವು ರೈತರ ಪರ ಎಂದು ತೋರಿಸಿಕೊಳ್ಳುವ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು. ಈ ಚುನಾವಣೆಯು ರಾಷ್ಟ್ರದ ವಿಚಾರ, ಹಿಂದುತ್ವ ವಿಚಾರ ಇಟ್ಟುಕೊಂಡು ನಡೆಯುತ್ತಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ನವರು ವೈಯಕ್ತಿಯವಾಗಿ ಟೀಕೆ ಮಾಡುತ್ತಿರುವುದು ಸರಿಯಲ್ಲ. ಎಚ್‌.ಡಿ.ಕುಮಾರಸ್ವಾಮಿ ಚುನಾವಣೆ ಸಂದರ್ಭದಲ್ಲಿ ಹಾರ್ಟ್ ಆಪರೇಷನ್‌ ಮಾಡಿಸಿ ಬರುತ್ತಾರೆ ಎಂದು ಹಗುರವಾಗಿ ಮಾತನಾಡುತ್ತಿದ್ದಾರೆ. ವೈಯಕ್ತಿಕವಾಗಿ ಟೀಕೆ ಮಾಡುವುದನ್ನು ಕಾಂಗ್ರೆಸ್‌ ನಾಯಕರು ಬಿಡಬೇಕು ಎಂದು ವಾಗ್ದಾಳಿ ನಡೆಸಿದರು.

Follow Us:
Download App:
  • android
  • ios