Asianet Suvarna News Asianet Suvarna News

ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಲಾಭವಾಗದು: ಕರಿಗಾರ

ಡಂಬಳ ಹೋಬಳಿ ಡೋಣಿ, ಹಾರೂಗೇರಿ, ದಿಂಡುರತಾಂಡ ಗ್ರಾಮದಲ್ಲಿ ಶನಿವಾರ ಮನೆ ಮನೆಗೆ ತೆರಳಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶದ ಜನತೆ ಮತ್ತೊಮ್ಮೆ ನರೇಂದ್ರಿ ಮೋದಿ ಪ್ರಧಾನ ಮಂತ್ರಿಯಾಗುವುದನ್ನು ಎದುರು ನೋಡುತ್ತಿದ್ದಾರೆ. ಪ್ರತಿಯೊಂದು ಜಾತಿ-ಧರ್ಮದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎನ್ನುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಕೇಂದ್ರದಲ್ಲಿ ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದ ಬಿಜೆಪಿ ಡಂಬಳ ಮಂಡಳ ಅಧ್ಯಕ್ಷ ರವಿ ಕರಿಗಾರ 

Congress will Not benefit from Guarantee Schemes in Elections Says Ravi Karigar grg
Author
First Published Feb 12, 2024, 3:00 AM IST

ಡಂಬಳ(ಫೆ.12): ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ ಮತವಾಗಿ ಪರಿವರ್ತನೆಯಾಗಲು ಸಾಧ್ಯವಿಲ್ಲ ಎಂದು ಬಿಜೆಪಿ ಡಂಬಳ ಮಂಡಳ ಅಧ್ಯಕ್ಷ ರವಿ ಕರಿಗಾರ ಹೇಳಿದರು.

ಡಂಬಳ ಹೋಬಳಿ ಡೋಣಿ, ಹಾರೂಗೇರಿ, ದಿಂಡುರತಾಂಡ ಗ್ರಾಮದಲ್ಲಿ ಶನಿವಾರ ಮನೆ ಮನೆಗೆ ತೆರಳಿ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ದೇಶದ ಜನತೆ ಮತ್ತೊಮ್ಮೆ ನರೇಂದ್ರಿ ಮೋದಿ ಪ್ರಧಾನ ಮಂತ್ರಿಯಾಗುವುದನ್ನು ಎದುರು ನೋಡುತ್ತಿದ್ದಾರೆ. ಪ್ರತಿಯೊಂದು ಜಾತಿ-ಧರ್ಮದವರು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎನ್ನುವ ಉದ್ದೇಶವನ್ನು ಬಿಜೆಪಿ ಹೊಂದಿದೆ. ಕೇಂದ್ರದಲ್ಲಿ ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಹೇಳಿದರು.

ಬಿಜೆಪಿಯಿಂದ ಧರ್ಮದ ಹೆಸರಿನಲ್ಲಿ ಜನರ ಮಧ್ಯೆ ವಿಷಬೀಜ ಬಿತ್ತುವ ರಾಜಕಾರಣ: ಸಚಿವ ಮಹದೇವಪ್ಪ

ದೇಶದಲ್ಲಿ ಭ್ರಷ್ಟಾಚಾರರಹಿತ ಆಡಳಿತ, ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ನೇರವಾಗಿ ಜಮಾ ಆಗುವುದು, ಆಯುಷ್ಮಾನ್ ಭಾರತ ಯೋಜನೆ, ಆರೋಗ್ಯ ರಕ್ಷಣೆ, ಕಿಸಾನ್ ಸಮ್ಮಾನ್ ಯೋಜನೆ, ಜಲಜೀವನ ಮಿಷನ್ ಯೋಜನೆ ಸೇರಿದಂತೆ ಮಹಿಳಾ ಸಬಲೀಕರಣಕ್ಕೆ ಆದ್ಯತೆ ನೀಡಲಾಗಿದ್ದು, ಇಡೀ ವಿಶ್ವದ ಜನ ಮೋದಿ ಆಡಳಿತವನ್ನು ಮೆಚ್ಚಿಕೊಂಡಿದ್ದು, ದೇಶದ ಭದ್ರತೆ, ಜನರ ಸುರಕ್ಷತೆ ಮತ್ತು ದೇಶದಲ್ಲಿ ಶಾಂತಿ ನೆಲೆಸಲು ಅಭಿವೃದ್ಧಿ ವೇಗ ಪಡೆಯಲು ಮತ್ತೊಮ್ಮೆ ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿಯಾಗಲು ಎಲ್ಲರೂ ಪಣ ತೊಡೋಣ ಎಂದರು.

ಈ ಸಮಯದಲ್ಲಿ ಸಿದ್ದನಗೌಡ ಪಾಟೀಲ, ಲಿಂಗನಗೌಡ ಹರ್ತಿ, ಪ್ರಭು ಕೊರ್ಲಹಳ್ಳಿ, ಈಶ್ವರಗೌಡ ಪಾಟೀಲ, ಪ್ರಕಾಶ ಓಲಿ, ಯಲ್ಲಪ್ಪ ಜಂಗಳಿ, ಜಗದೀಶ ತಳವಾರ, ರಮೇಶ ಹಡಪದ, ತೊಗರೆಪ್ಪ ಕೊರವರ, ಪ್ರಕಾಶ ಕೋತಂಬ್ರಿ, ನಾಗಪ್ಪ ಒಡ್ಡರ ಇದ್ದರು.

Follow Us:
Download App:
  • android
  • ios