Asianet Suvarna News Asianet Suvarna News

ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣ: ಬಿಜೆಪಿಗರಿಗೆ ನಾಚಿಕೆಯಾಗಬೇಕು, ಸಲೀಂ ಅಹಮದ್ ವಾಗ್ದಾಳಿ

ಪ್ರಜ್ವಲ್‌ ಪ್ರಕರಣದಲ್ಲಿ ಬಿಜೆಪಿ, ಜೆಡಿಎಸ್ ಜೊತೆಗಿನ ಮೈತ್ರಿ ಕೈಬಿಡಬೇಕಾಗಿತ್ತು. ಪ್ರಧಾನಿ ಮೋದಿ, ಅಮಿತ್ ಶಾ ಖಂಡಿಸಬೇಕಿತ್ತು, ಆದರೆ ಇಲ್ಲಿವರೆಗೂ ಮಾತಾಡಿಲ್ಲ. ಮೋದಿ ಜರ್ಮನ್ ಅಂಬೆಸ್ಸಿಗೆ ಕರೆ ಮಾಡಿ ಕೂಡಲೇ ಬಂಧಿಸಬೇಕಾಗಿತ್ತು. ನಮ್ಮ ಪಕ್ಷದವರು ತಪ್ಪು ಮಾಡಿದರೆ ಕಾಂಗ್ರೆಸ್ ಪಕ್ಷ ಬಿಡಲ್ಲ: ಕಾಂಗ್ರೆಸ್‌ ಎಂಎಲ್‌ಸಿ ಸಲೀಂ ಅಹಮದ್ 

Congress MLC Saleem Ahmed Slams BJP Leaders grg
Author
First Published May 2, 2024, 9:15 PM IST

ಬೀದರ್(ಮೇ.02): ಬಿಜೆಪಿ ಪಕ್ಷದ ಮುಖಂಡರಿಗೆ ನಾಚಿಕೆಯಾಗಬೇಕು. ಬೇಟಿ ಪಡಾವೊ, ಬೇಟಿ ಬಚಾವ್ ಅಂತ ಹೇಳುತ್ತಾರೆ. ಕರ್ನಾಟಕದಲ್ಲಿ ಇಂತಹ ದೊಡ್ಡ ಹಗರಣ ನಡೆದರೂ ಬಿಜೆಪಿ- ಜೆಡಿಎಸ್ ಮುಖಂಡರು ಖಂಡಿಸಿಲ್ಲ, ಇವರಿಗಲ್ಲ ನಾಚಿಕೆಯಾಗಬೇಕು. ರಾಜಕೀಯ ಬಿಟ್ಟು ಮಹಿಳೆಯರ ಮೇಲೆ ದೌರ್ಜನ್ಯ ಮಾಡಿದಾರೆ ಅದಕ್ಕೆ ತೀವ್ರವಾಗಿ ಖಂಡಿಸಬೇಕು ಎಂದು ಕಾಂಗ್ರೆಸ್‌ ಎಂಎಲ್‌ಸಿ ಸಲೀಂ ಅಹಮದ್ ಕಿಡಿ ಕಾರಿದ್ದಾರೆ. 

ಹಾಸನ ಜೆಡಿಎಸ್‌ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಲೀಂ ಅಹಮದ್ ಅವರು, ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಬೇಕಾದರೆ ಕ್ಲಿಯರೆನ್ಸ್ ಬೇಕು. ಈ ಕ್ಲಿಯರೆನ್ಸ್ ಯಾರು ಕೊಟ್ಟಿದಾರೆ ಅವರ ವಿರುದ್ಧ ಕೂಡ ತನಿಖೆಯಾಗಬೇಕು. ಪ್ರಕರಣದಲ್ಲಿ ಯಾರಾರು ಇದಾರೆ ಎಲ್ಲರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಬೇಕು. ಇದರಲ್ಲಿ ರಾಜಕಾರಣ ಬೆರೆಸಬಾರದು, ಯಾರೇ ಇದ್ದರೂ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ. 

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಮಾಡಿದ ಕಾಂಗ್ರೆಸ್ ಸಚಿವರ ಆಪ್ತನ ವಿರುದ್ಧ ಎಫ್ಐಆರ್!

ಪ್ರಜ್ವಲ್‌ ಪ್ರಕರಣದಲ್ಲಿ ಬಿಜೆಪಿ, ಜೆಡಿಎಸ್ ಜೊತೆಗಿನ ಮೈತ್ರಿ ಕೈಬಿಡಬೇಕಾಗಿತ್ತು. ಪ್ರಧಾನಿ ಮೋದಿ, ಅಮಿತ್ ಶಾ ಖಂಡಿಸಬೇಕಿತ್ತು, ಆದರೆ ಇಲ್ಲಿವರೆಗೂ ಮಾತಾಡಿಲ್ಲ. ಮೋದಿ ಜರ್ಮನ್ ಅಂಬೆಸ್ಸಿಗೆ ಕರೆ ಮಾಡಿ ಕೂಡಲೇ ಬಂಧಿಸಬೇಕಾಗಿತ್ತು. ನಮ್ಮ ಪಕ್ಷದವರು ತಪ್ಪು ಮಾಡಿದರೆ ಕಾಂಗ್ರೆಸ್ ಪಕ್ಷ ಬಿಡಲ್ಲ. ಕುಮಾರಸ್ವಾಮಿ ಕಾಂಗ್ರೆಸ್ ಮೇಲೆ ಆರೋಪ ಮಾಡ್ತಾನೇ ಇರುತ್ತಾರೆ. ಬಿಜೆಪಿ ಪಕ್ಷದವರ ಈ ಪೆನ್‌ಡ್ರೈವ್‌ ಬಿಡುಗಡೆ ಮಾಡಿದಾರೆ. ಕುಮಾರಸ್ವಾಮಿ ಹೇಳಿದಾರೆ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು. ಇನ್ನೊಂದು ಮಾತು ಹೇಳಿದಾರೆ ಅವರ ಫ್ಯಾಮಿಲಿ ಬೇರೆ, ನಮ್ಮ ಫ್ಯಾಮಿಲಿ ಬೇರೆ. ಅವರ ಸ್ಟೇಟ್ಮೆಂಟ್ ಏನು ಅಂತನೇ ನಮಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದ್ದಾರೆ. 

Follow Us:
Download App:
  • android
  • ios