Asianet Suvarna News Asianet Suvarna News

ಬಿಜೆಪಿ ಸಾಮಾಜಿಕ ನ್ಯಾಯ, ಬಡವರ, ಮೀಸಲಾತಿ ವಿರೋಧಿ: ಸಿಎಂ ಸಿದ್ದರಾಮಯ್ಯ

ಅಧಿಕಾರಕ್ಕೆ ಬಂದ 11 ತಿಂಗಳಲ್ಲೇ 80 ಭರವಸೆ ಈಡೇರಿಸಿದ್ದಿವಿ, 5 ಗ್ಯಾರಂಟಿ ಯೋಜನೆ ಅದಾಗಲೇ ಅನುಷ್ಠಾನ ಮಾಡಿದ್ದೇವೆ. ಅಧಿಕಾರಕ್ಕೆ ಬಂದ ದಿನವೆ 5 ಗ್ಯಾರಂಟಿ ಜಾರಿ ಸಂಕಲ್ಪ ಮಾಡಿ ಆದೇಶ ಹೊರಡಿಸಿದೆವು. ಗ್ಯಾರಂಟಿ ಯೋಜನೆಗೆ ಬಿಜೆಪಿ ಟೀಕೆ ಮಾಡಿತು, ರಾಜ್ಯ ದಿವಾಳಿ ಆಗ್ತದೆ ಅಂದ್ರು. ಅದನ್ನು ಸವಾಲಾಗಿ ಸ್ವೀಕರಿಸಿ ಅನುಷ್ಠಾನಕ್ಕೆ ತಂದಿದ್ದೇವೆ ಎಂದ ಸಿಎಂ ಸಿದ್ದರಾಮಯ್ಯ 

CM Siddaramaiah Slams BJP grg
Author
First Published Apr 27, 2024, 10:23 AM IST

ಕಲಬುರಗಿ(ಏ.27):  ಎಂಪಿ ಎಲೆಕ್ಷನ್ ನಂತರ ರಾಜ್ಯದಲ್ಲಿ ನಾವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ನಿಲ್ಲಿಸ್ತಾರೆ ಅಂತ ಬಿಜೆಪಿ ಅಪಪ್ರಚಾರ ಮಾಡುತ್ತಿದ್ದಾರೆ, ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರೋವರೆಗೂ ಯಾವ ಕಾರಣಕ್ಕೂ ಗ್ಯಾರಂಟಿಗಳು ನಿಲ್ಲೋದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕಲಬುರಗಿಯಲ್ಲಿ ಶುಕ್ರವಾರ ನಡೆದ ಕಾಂಗ್ರೆಸ್ ಚುನಾವಣೆ ಸಮಾವೇಶದಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ 11 ತಿಂಗಳಲ್ಲೇ 80 ಭರವಸೆ ಈಡೇರಿಸಿದ್ದಿವಿ, 5 ಗ್ಯಾರಂಟಿ ಯೋಜನೆ ಅದಾಗಲೇ ಅನುಷ್ಠಾನ ಮಾಡಿದ್ದೇವೆ. ಅಧಿಕಾರಕ್ಕೆ ಬಂದ ದಿನವೆ 5 ಗ್ಯಾರಂಟಿ ಜಾರಿ ಸಂಕಲ್ಪ ಮಾಡಿ ಆದೇಶ ಹೊರಡಿಸಿದೆವು. ಗ್ಯಾರಂಟಿ ಯೋಜನೆಗೆ ಬಿಜೆಪಿ ಟೀಕೆ ಮಾಡಿತು, ರಾಜ್ಯ ದಿವಾಳಿ ಆಗ್ತದೆ ಅಂದ್ರು. ಅದನ್ನು ಸವಾಲಾಗಿ ಸ್ವೀಕರಿಸಿ ಅನುಷ್ಠಾನಕ್ಕೆ ತಂದಿದ್ದೇವೆ ಎಂದರು.

ಅನ್ನ ಕೊಟ್ಟ ಕಾಂಗ್ರೆಸ್ ಬೇಕಾ? ಬಡವರ ಹೊಟ್ಟೆ ಮೇಲೆ ಹೊಡೆದ ಬಿಜೆಪಿ ಬೇಕಾ? : ಸಿದ್ದರಾಮಯ್ಯ

ಬಿಜೆಪಿ ಸಾಮಾಜಿಕ ನ್ಯಾಯ, ಬಡವರ, ಮೀಸಲಾತಿ ವಿರೋಧಿ ಎಂದು ಟೀಕಿಸಿದ ಅವರು, ಬಿಜೆಪಿಗೆ ಮತ ಹಾಕಿ ಗೆಲ್ಲಿಸಬೇಡಿ ಎಂದು ಕರೆ ನೀಡಿದರು. ಮೋದಿ ಗ್ಯಾರಂಟಿ ಅಂತಾರೆ ಎಂದು ಅಣುಕಿಸಿದ ಸಿದ್ದರಾಮಯ್ಯ ನಮ್ಮದೇ ಜನಪರ ಗ್ಯಾರಂಟಿ ಎಂದರು.

ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಅಭಿವೃದ್ಧಿ ವಿಚಾರದಲ್ಲಿ ಜನರು ಕೇಳುವ ಪ್ರಶ್ನೆಗಳಿಗೆ ಜಾಧವ್ ಉತ್ತರಿಸಲಿ. ಹಲವಾರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ವಿರುದ್ಧ ಅವರದೇ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಗೋ ಬ್ಯಾಕ್ ಅಭಿಯಾನ ನಡೆಸಿದ್ದಾರೆ. ಹತ್ತು ವರ್ಷ ಮೋದಿ ಆಡಳಿತ ಹಾಗೂ ಐದು ವರ್ಷದ ಅವರ ಅವಧಿಯ ಅಭಿವೃದ್ದಿ ಲೆಕ್ಕ ಕೇಳಿದ್ದಾರೆ. ಮೊದಲು ಜಾಧವ್ ಜನರ ಪ್ರಶ್ನೆಗಳಿಗೆ ಉತ್ತರ ನೀಡಲಿ ಎಂದು ಆಗ್ರಹಿಸಿದರು.
ಈ ಹಿಂದಿನ ಎಲ್ಲ ಮೋದಿ ಗ್ಯಾರಂಟಿಗಳೆಲ್ಲ ಏನಾದವು? ಮೇಕ್ ಇನ್ ಇಂಡಿಯಾ, ವರ್ಷಕ್ಕೆ 2 ಕೋಟಿ ಉದ್ಯೋಗ ಸೇರಿದಂತೆ ಎಲ್ಲ ಘೋಷಿತ ಯೋಜನೆಗಳು ಜಾರಿಯಾಗಲಿಲ್ಲ. ಕಲಬುರಗಿ ಗೆ ಮಂಜೂರಾಗಿದ್ದ ರೇಲ್ವೆ ವಲಯ, ಜವಳಿ ಪಾರ್ಕ್, ನಿಮ್ಝ ನಂತಹ ಯೋಜನೆಗಳು ವಾಪಸ್ ಹೋಗಿವೆ. ಇದಕ್ಕೆ ಉತ್ತರ ಕೊಡಿ ಜಾಧವ್ ಎಂದು ಅಬ್ಬರಿಸಿದರು.

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ನಿಜವಾದ ಕಲ್ಯಾಣ ಮಾಡುತ್ತೇವೆ ಎಂದು ಭರವಸೆ ನೀಡಿದ ಖರ್ಗೆ, ನೀವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.

ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಮಾತನಾಡಿ, ಈ ಚುನಾವಣೆ ನ್ಯಾಯ ಅನ್ಯಾಯ, ಸತ್ಯ ಅಸತ್ಯದ ನಡುವೆ ನಡೆಯುವ ಚುನಾವಣೆಯಾಗಿದೆ‌. ಸಿಎಂ ಕಾಂಗ್ರೆಸ್ ಪಕ್ಷವನ್ನು ನಂಬಿ ಆಶೀರ್ವಾದ ಮಾಡಿದ್ದಾರೆ ಇದಕ್ಕೆ ಕಾರಣ‌ಈ ಹಿಂದೆ ನೀಡಿದ 161 ಭರವಸೆಗಳಲ್ಲಿ 159 ಭರವಸೆ ಈಡೇರಿಸಿದ್ದೇವೆ. ಈ ಸಲ ಅಧಿಕಾರಕ್ಕೆ ಬಂದಾಗ ಗ್ಯಾರಂಟಿ ಯೋಜನೆಗಳ ಮೂಲಕ ಜನರಿಗೆ ತಲುಪಿಸಿದ್ದೇವೆ. ಕಾಂಗ್ರೆಸ್ ಪಕ್ಷ ಯುವಕರಿಗೆ,ರೈತರಿಗೆ,‌ಮಹಿಳೆಯರಿಗೆ ಅನುಕೂಲವಾಗುವಂತೆ ಯೋಜನೆಗಳ ಭರವಸೆ ನೀಡಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಎಲ್ಲ ಭರವಸೆಗಳನ್ನು ಈಡೇರಿಸುತ್ತೇವೆ. ಹಾಗಾಗಿ ನೀವೆಲ್ಲ ಕಾಂಗ್ರೆಸ್ ಅಭ್ಯರ್ಥಿಗೆ ಗೆಲ್ಲಿಸಿ ಎಂದು ಮನವಿ ಮಾಡಿದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ್ ಮಾತನಾಡಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಜನಪರವಾಗಿ ಕೆಲಸ ಮಾಡಲಿದೆ ಎಂದರು.

ಎಂಎಲ್‌ಸಿ ತಿಪ್ಪಣ್ಣಪ್ಪ ಕಮನೂರು ಮಾತನಾಡಿ, ಸಿಎಂ ಇಂದು ಕಲಬುರಗಿ ಗೆ ಬಂದಿದ್ದಾರೆ. ಅವರು ಎರಡನೆಯ ಬಸವಣ್ಣ ನವರಿದ್ದಂತೆ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದ್ದಾರೆ, ರಾಧಾಕೃಷ್ಣ ಅವರು 1.50 ಲಕ್ಷ ಮತಗಳಿಂದ ಗೆಲ್ಲಿಸಿ ಎಂದು ನಿಮಗೆ ಮನವಿ ಮಾಡಲು ಬಂದಿದ್ದಾರೆ. ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ನಯಾಪೈಸೆ ಲಾಭವಾಗಿಲ್ಲ ಎಂದು ಸಚಿವ ಶರಣಪ್ರಕಾಶ ಪಾಟೀಲ್ ಹೇಳಿದರು.

ಹತ್ತು ವರ್ಷಗಳ ಮೋದಿ ಆಡಳಿತದಲ್ಲಿ ಬಡವರಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ನಯಾ ಪೈಸೆ ಲಾಭವಾಗಿಲ್ಲ. ಮೋದಿ ಬರೀ ಉದ್ರಿ ಭಾಷಣ ಮಾಡಿಕೊಂಡೇ ಇದ್ದಾರೆ. ಉದ್ರಿ ಭಾಷಣದಿಂದ ಯಾರ ಹೊಟ್ಟೆ ತುಂಬಲ್ಲ. ಆದರೆ ನಮ್ಮ ಸರ್ಕಾರದ ಗ್ಯಾರಂಟಿಗಳು ಪಕ್ಕಾ ಗ್ಯಾರಂಟಿಗಳಾಗಿವೆ, ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಶರಣ ಪ್ರಕಾಶ ಪಾಟೀಲ್ ಹೇಳಿದರು.

ಕಲಬುರಗಿ ಭಾಗದ ಪ್ರಗತಿಗೆ ಮೋದಿ ಜಾಣ ಕಿವುಡು ಧೋರಣೆ: ಅಜಯ್‌ ಸಿಂಗ್‌

ಈ ದೇಶದ ಕಟ್ಟ ಕಡೆಯ ವ್ಯಕ್ತಿಗೆ ಸ್ವಾಭಿಮಾನದ ಬದುಕು ರೂಪಿಸುವುದೇ ಕಾಂಗ್ರೆಸ್ ಪಕ್ಷದ ಸಿದ್ಧಾಂತ. ಆದರೆ ಬಿಜೆಪಿಯದು ಭ್ರಷ್ಟಾಚಾರವೇ ಸಿದ್ದಾಂತವಾಗಿದೆ. ಹಾಗಾಗಿ 40% ಭ್ರಷ್ಟ ಸರ್ಕಾರವನ್ನು ಜನರೇ ಕಿತ್ತು ಹಾಕಿದ್ದಾರೆ. ಸರ್ಕಾರಿ ಮೆಡಿಕಲ್ ಆಸ್ಪತ್ರೆ, ತಾಯಿ ಮಗು ಆಸ್ಪತ್ರೆ, ಕಿದ್ವಾಯಿ, ಜಯದೇವ, ಟ್ರಾಮಾ ಕೇರ್ ಸೆಂಟರ್ ಈ ಎಲ್ಲ ಯೋಜನೆಗಳನ್ನು ಕಲಬುರಗಿಗೆ ತಂದಿದ್ದೇವೆ. ಇದು ನಮ್ಮ ಅಭಿವೃದ್ದಿ ಪಟ್ಟಿ ಹಾಗೂ ಬದ್ದತೆ. ಬಿಜೆಪಿಗರು ಏನು ಮಾಡಿದ್ದಾರೆ. ಮೋದಿ ಮುಖ ನೋಡಿ ಓಟು ಹಾಕಿ ಅಂತ ಹೇಳುತ್ತಾರೆ. ಎರಡು ಬಾರಿ ಅವರ ಮುಖ ನೋಡಿ ಓಟು ಹಾಕಿದ ಜನರು ಎರಡೂ ಕೈಯಿಂದ ಉಂಡಿದ್ದಾರೆ ಎಂದು‌ ಟೀಕಿಸಿದರು.

ವೇದಿಕೆಯ ಮೇಲೆ ಸಚಿವರಾದ ರಹೀಂ ಖಾನ್, ಶಾಸಕರಾದ ಕನೀಜ್, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಫಾತಿಮಾ, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಖಾಜಾ‌ ಬಂದನವಾಜ್ ದರ್ಗಾದ ಪೀಠಾಧಿಪತಿ ಡಾ ಮುಸ್ತಫಾ ಅಲ್ ಹುಸೇನ್ ಖುಸ್ರೋ, ಮಜರ್ ಖಾನ್, ದೇವೆಂದ್ರಪ್ಪ ಮರತೂರು, ದೇವೆಂದ್ರಪ್ಪ ಮರತೂರು, ಭಾಗನಗೌಡ ಸಂಕನೂರು, ಶರಣು ಮೋದಿ, ಚಂದ್ರಿಕಾ ಪರಮೇಶ್ವರ, ಡಾ ಕಿರಣ್ ದೇಶಮುಖ್, ನೀಲಕಂಠರಾವ್ ಮೂಲಗೆ, ಡಿ.ಜಿ.ಸಾಗರ್, ಫಾರೂಖ್, ಪ್ರವೀಣ ಹರವಾಳ ಸೇರಿದಂತೆ ಮತ್ತಿತರಿದ್ದರು.

Follow Us:
Download App:
  • android
  • ios