Asianet Suvarna News Asianet Suvarna News

'ಸೇವೆ V/S ಸುಲಿಗೆ..' ಜೆಡಿಎಸ್‌ ಟ್ವೀಟ್‌, ಮತದಾರರ ಹೃದಯ ಗೆಲ್ತಾರಾ ಮಂಜುನಾಥ್‌?

ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿಯಾಗಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ವರಿಷ್ಠ ಎಚ್‌ಡಿ ದೇವೇಗೌಡರ ಅಳಿಯ ಡಾ.ಸಿ.ಎನ್.ಮಂಜುನಾಥ್, ಹಾಲಿ ಸಂಸದ ಡಿ.ಕೆ.ಸುರೇಶ್ ವಿರುದ್ಧ ಕಣಕ್ಕಿಳಿದಿದ್ದಾರೆ.

Bengaluru rural Loksabha election 2024 DK Suresh vs Dr CN Manjunath rav
Author
First Published Mar 15, 2024, 1:11 PM IST

ಬೆಂಗಳೂರು (ಮಾ.15): ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕನಕಪುರ ಲೋಕಸಭಾ ಕ್ಷೇತ್ರವಾದಾಗಿನಿಂದಲೂ ಡಿ.ಕೆ.ಶಿವಕುಮಾರ್ ಹಾಗು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬಗಳ ಜಿದ್ದಾಜಿದ್ದಿನ ಹೋರಾಟಕ್ಕೆ ಹೆಸರವಾಸಿಯಾಗಿದೆ. ಈ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ವಿಧಾನ ಸಭಾ ಕ್ಷೇತ್ರಗಳಲ್ಲೂ ಈ ಕುಟುಂಬದ್ದೇ ಹೋರಾಟ, ಕಾದಾಟ ಕಾಮನ್. 

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ (Bengaluru rural loksabha constituency)ಸದ್ಯ ಕರ್ನಾಟಕದ ಉಪ ಮುಕ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಂದ ಕಾಂಗ್ರೆಸ್ ನ ಭದ್ರಕೋಟೆಯಾಗಿದೆ. ದೇವೇಗೌಡ ಮತ್ತು ಡಿಕೆ ಶಿವಕುಮಾರ್ ಕುಟುಂಬಗಳ ರಾಜಕೀಯ ಘರ್ಷಣೆಗೆ ಇದೀಗ ಮತ್ತೆ ಬೆಂಗಳೂರು ಗ್ರಾಮಾಂತರ ಲೋಕಸಬಾ ಕ್ಷೇತ್ರ ಸಾಕ್ಷಿಯಾಗಲಿದ್ದು, ದೇವೇಗೌಡರ ಅಳಿಯ ಡಾ.ಮಂಜುನಾಥ್ ಹಾಗೂ ಡಿ.ಕೆ.ಶಿವಕುಮಾರ್ ತಮ್ಮ ಡಿ.ಕೆ.ಸುರೇಶ್ ನಡುವಿನ ಜಿದ್ದಾಜಿದ್ದಿ ಕಾಳಗಕ್ಕೆ ಸಿದ್ಧವಾಗಿದೆ. .

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಿಳಿಸಿ: ಸಂಸದ ಡಿ.ಕೆ.ಸುರೇಶ್

ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಡಾ ಮಂಜುನಾಥ್ ಬಡವರಿಗೆ ಸಹಾಯ ಮಾಡಿಯೇ ಹೆಸರು ಮಾಡಿದವರು. ಅದರಲ್ಲಿಯೂ ಸರಕಾರಿ ಆಸ್ಪತ್ರೆಯೊಂದು ಈ ಮಟ್ಟಿಗೆ ಬೆಳೆಸಿದ ಕೀರ್ತಿ ಅವರಿಗೇ ಸಲ್ಲುತ್ತದೆ. ಜಯದೇವಕ್ಕೆ ಮತ್ತೊಂದು ಹೆಸರ ಡಾ. ಮಂಜುನಾಥ್ ಎಂಬಂತಿದ್ದ ಈ ಹೃದಯ ತಜ್ಞರು ಇದುವರೆಗೂ ರಾಜಕೀಯದಿಂದ ದೂರವೇ ಇದ್ದವರು. ಆದರೀಗ ಜೆಡಿಎಸ್ ಬದಲು ಬಿಜೆಪಿಯಿಂದ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಆಗಿರುವುದು ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿದೆ. ಈ ಖ್ಯಾತ ಹೃದಯ ತಜ್ಞರು ಗೆದ್ದರೆ ಮೋದಿ ಸಂಪುಟದಲ್ಲಿ ಆರೋಗ್ಯ ಸಚಿವರಾಗಬಹುದು ಎಂಬ ಮಾತುಗಳು ಸೋಷಿಯಲ್ ಮೀಡಿಯದಲಾಲಿ ಚರ್ಚೆಯಾಗುತ್ತಿದೆ. ಈ ಬೆನ್ನಲ್ಲೇ ವೈದ್ಯರಾಗಿ, ವೈದ್ಯ ಸಚಿವಾಲಯದಲ್ಲಿ ಹೆಸರು ಮಾಡಿದ ಡಾ.ಹರ್ಷವರ್ಧನ್ ಅವರಿಗೆ ಟಿಕೆಟ್ ನೀಡದಿರುವುದು ಥಳಕು ಹಾಕಿ ಕೊಳ್ಳುತ್ತಿದೆ. 

ಈಗಾಗಲೇ ತಮ್ಮ ಕ್ಷೇತ್ರವೆಂದು ಬಿಂಬಿಸುವ ಮೂಲಕ, ಮಂಜುನಾಥ್ ಹೊರಗಿನವರು ಎಂಬ ಭಾವ ಮೂಡಿಸಲು ಡಿ.ಕೆ.ಸುರೇಶ್ ಕಾರ್ಯಪ್ರವೃತ್ತರಾಗಿದ್ದಾರೆ. ಒಕ್ಕಲಿಗರೇ ಹೆಚ್ಚಾಗಿರುವ ಈ ಲೋಕಸಭಾ ಕ್ಷೇತ್ರದಲ್ಲಿ ಸಹಜವಾಗಿ ಇಬ್ಬರೂ ಒಕ್ಕಲಿಗ ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಮಂಜುನಾಥ್ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಹಾಗೂ ಮೋದಿ ವರ್ಚಸ್ಸು ಕೆಲಸ ಮಾಡಿ, ಈ ಕ್ಷೇತ್ರದಲ್ಲಿ ಕಮಲ ಅರಳಬಹುದೆಂದು ಬಿಜೆಪಿ ಕಾರ್ಯಕರ್ತರು ಮಾತನಾಡಿ ಕೊಳ್ಳುತ್ತಿದ್ದಾರೆ. ಏನೇ ಆದರೂ ಗೆಲವು ಸುರೇಶ್ ಅವರದ್ದೇ ಆಗಲಿದ್ದು, ಗೆಲುವಿನ ಅಂತರ ಕಡಿಮೆಯಾಗಲಿದೆ ಎಂದು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ. 

ಆದರೆ, ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಕನಕಪುರು ವಿಧಾನಸಭಾ ಕ್ಷೇತ್ರ ಹೊರತುಪಡಿಸಿ, ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ಹೇಳುತ್ತಿದ್ದು, ಡಿಕೆ ಬ್ರದರ್ಶ್ ವೈರಿಗಳೆಲ್ಲಾ ಇದೀಗ ಒಟ್ಟಾಗಿ ಮಂಜುನಾಥ್ ಗೆಲ್ಲಿಸಲು ಪಣ ತೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. 

ಗೌಡರ ‘ಬುದ್ಧಿವಂತ’ ಅಳಿಯ ಡಾ.ಮಂಜುನಾಥ್, ಜೆಡಿಎಸ್ ಸೂಕ್ತವಲ್ಲವೆಂದು ಬಿಜೆಪಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ಹೇಳಿದ್ದಾರೆ. ಇದಕ್ಕೆ ಜೆಡಿಎಸ್ ಟ್ವಿಟರ್ ಮೂಲಕ ಜೆಡಿಎಸ್ ತಿರುಗೇಟು ನೀಡಿದ್ದು, ಸುರೇಶ್ ಏನು, ಮಂಜುನಾಥ್ ಎನೆಂಬುವುದು ಇಡಿ ರಾಜ್ಯಕ್ಕೇ ಗೊತ್ತು ಎಂದು ಟ್ವೀಟ್ ಮಾಡಿದೆ. 

ದೇವೇಗೌಡರ ಕುಟುಂಬದ ವಿರುದ್ಧ ಹೋರಾಡುವುದು ಹೊಸತಲ್ಲವೆಂದಿರುವ ಸುರೇಶ್ 2013 ರ ಲೋಕಸಭಾ ಉಪಚುನಾವಣೆಯಲ್ಲಿ ಗೌಡರ ಸೊಸೆ ಅನಿತಾ ಕುಮಾರಸ್ವಾಮಿ ಅವರನ್ನು ಇವರು ಸೋಲಿಸಿದರು. 2014 ಮತ್ತು 2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿ ಅಲೆಯ ನಡುವೆಯೂ ಗೆದ್ದು, ಕರ್ನಾಟಕದಲ್ಲಿ ಕಾಂಗ್ರೆಸ್ ಮರ್ಯಾದೆ ಉಳಿಸಿದ್ದರು. ಡಿಕೆಶಿ 1989ರಲ್ಲಿ ಕನಕಪುರ ವಿಧಾನಸಭಾ ಕ್ಷೇತ್ರದಿಂದ ಗೌಡರನ್ನು ಸೋಲಿಸಿದ್ದರು.2002 ರ ಹಿಂದಿನ ಕನಕಪುರ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ, ಗೌಡರು ಡಿಕೆಶಿಯನ್ನೂ ಸೋಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. 

ದೇವೇಗೌಡರ, ಕುಮಾರಸ್ವಾಮಿ ಪಾರ್ಟಿ ಸರಿ ಇಲ್ಲ ಅಂತ ಬುದ್ಧಿವಂತ ಅಳಿಯ ತೀರ್ಮಾನ ಮಾಡಿದ್ದಾರೆ: ಡಿಕೆ ಸುರೇಶ್‌

ಒಟ್ಟಿನಲ್ಲಿ ರಾಜಕೀಯಕ್ಕೆ ಈಗ ತಾನೇ ಪ್ರವೇಶಿಸಿರುವ ವೈದ್ಯರು, ರಾಜಕೀಯ ನಿಷ್ಣಾತ ಶಿವಕುಮಾರ್ ಕುಟುಂಬವನ್ನು ಹೇಗೆ ಎದುರಿಸಲಿಸಿದ್ದಾರೆಂಬುದನ್ನು ಇಡೀ ರಾಜ್ಯವೇ ಕುತೂಹಲದಿಂದ ನೋಡುತ್ತಿದ್ದು, ಸುಲಿಗೆVs ಸೇವ ಯುದ್ಧದಲ್ಲಿ ಯಾರು ಗೆಲ್ಲುತ್ತಾರೋ ನೋಡೋಣ ಎಂದು ಜೆಡಿಎಸ್ ಟ್ವೀಟ್ ಮಾಡಿದೆ. 

Follow Us:
Download App:
  • android
  • ios