Asianet Suvarna News Asianet Suvarna News

ತತ್ವಪದಗಳು ನೆಲಮೂಲ ಸಂಸ್ಕೃತಿಯನ್ನ ಉಳಿಸುತ್ತಿವೆ : ಕವಿ ಬಿದಲೋಟಿ ರಂಗನಾಥ್

  ತತ್ವಪದಗಳು ನೆಲಮೂಲ ಸಂಸ್ಕೃತಿಯನ್ನ ಉಳಿಸುತ್ತವೆ. ಮರೆತು ಹೋಗುತ್ತಿರುವ ಆಚಾರ ವಿಚಾರವನ್ನ ಇಂದಿನ ಪೀಳಿಗೆಗೆ ತಲುಪಿಸುವಲ್ಲಿ ತತ್ವಪದಗಳ ಮಹತ್ವದ ಕಾರ್ಯವನ್ನ ಮಾಡುತ್ತಿವೆ ಎಂದು ಕವಿ ಬಿದಲೋಟಿ ರಂಗನಾಥ್ ತಿಳಿಸಿದರು.

Tatvapadas are saving the indigenous culture : Poet Bidaloti Ranganath snr
Author
First Published Feb 23, 2024, 10:26 AM IST

  ಹೊಳವನಹಳ್ಳಿ :  ತತ್ವಪದಗಳು ನೆಲಮೂಲ ಸಂಸ್ಕೃತಿಯನ್ನ ಉಳಿಸುತ್ತವೆ. ಮರೆತು ಹೋಗುತ್ತಿರುವ ಆಚಾರ ವಿಚಾರವನ್ನ ಇಂದಿನ ಪೀಳಿಗೆಗೆ ತಲುಪಿಸುವಲ್ಲಿ ತತ್ವಪದಗಳ ಮಹತ್ವದ ಕಾರ್ಯವನ್ನ ಮಾಡುತ್ತಿವೆ ಎಂದು ಕವಿ ಬಿದಲೋಟಿ ರಂಗನಾಥ್ ತಿಳಿಸಿದರು.

ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಬಿದಲೋಟಿ ಗ್ರಾಮದ ಶ್ರೀ ಆದಿಶಕ್ತಿ ಚಾರಿಟ್ರಬಲ್ ಟ್ರಸ್ಟ್ ಹಮ್ಮಿಕೊಳ್ಳಲಾಗಿದ್ದ ತತ್ವಪದ ಮೇಳ ಹಾಗೂ ೧೧ನೇ ವರ್ಷದ ಚಾಮುಂಡೇಶ್ವರಿ ದೇವಿಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.

ಬದುಕಿನ ಮೌಲ್ಯಗಳನ್ನ ಅರಿತು ಬಾಳಬೇಕು. ಗುರು ಹಿರಿಯರನ್ನ ಗೌರವಿಸುವ ಮೂಲಕ ಸಮಾಜಕ್ಕೆ ಸತ್ಪ್ರಜೆಗಳಾಗಿ, ಸೋಬಾನೆಪದ, ಕೋಲಾಟ, ಜನಪದ, ತತ್ವಪದಗಳು ಈ ನೆಲದ ಅಸ್ಮಿತೆಗೆ ಕಾವುಕೊಡುತ್ತ ಬಂದಿವೆ. ಇವತ್ತಿನ ಯುವ ಪೀಳಿಗೆ ಹಿಂದಿನ ಸಂಪ್ರದಾಯಗಳನ್ನ ಉಳಿಸಿ ಬೆಳಸಬೇಕು ಎಂದು ತಿಳಿಸಿದರು.

ಕಾರ್ಮಿಕ ರಕ್ಷಣಾವೇದಿಕೆಯ ರಾಜ್ಯಾಧ್ಯಕ್ಷ ಕೆ. ರಾಜು ಮಾತನಾಡಿ, ಧರ್ಮ ಜಾತಿಯನ್ನ ಮೀರಿ ಒಂದು ಕಡೆ ಸೇರಿ ಆಧ್ಯಾತ್ಮ ಶೋಧನೆಯನ್ನ ಮಾಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಅದಕ್ಕಾಗಿ ಗ್ರಾಮೀಣ ಭಾಗದಲ್ಲಿ ಜನರು ತಮ್ಮ ಮಕ್ಕಳನ್ನ ಶಿಕ್ಷಣದ ಕಡೆ ಹೆಚ್ಚು ಒತ್ತು ನೀಡಿ ಅವರ ಭವಿಷ್ಯವನ್ನ ರೂಪಿಸುವಂತಾಗಬೇಕು ಎಂದು ಹೇಳಿದರು.

ಇದೆ ಸಂದರ್ಭದಲ್ಲಿ ಕಾರ್ಯಧ್ಯಕ್ಷ ತೇಜುಕುಮಾರ್‌, ಎಚ್‌ಎಂಆರ್‌ ಟ್ರಸ್ಟ್ ಅಧ್ಯಕ್ಷ ಮರಿರಂಗಯ್ಯ ಸ್ವಾಮಿ, ತತ್ವಪದಕಾರ ಕಾಡಪ್ಪ ಸ್ವಾಮಿ, ಕಲ್ಲಳ್ಳಿ ರಾಮಯ್ಯ, ತಿಮ್ಮಯ್ಯ, ನರಸಮ್ಮ, ಸಿದ್ದಗಂಗಮ್ಮ, ಸಿದ್ದರಾಜು, ಮಂಜುಶ್ರೀ, ಬೋರೆಗೌಡ, ಮಂಜುನಾಥ್, ಕಾರ್ತಿಕ್ ಸೇರಿದಂತೆ ಇತರರು ಇದ್ದರು. 

Follow Us:
Download App:
  • android
  • ios