Asianet Suvarna News Asianet Suvarna News

ಲೋಕಸಭಾ ಚುನಾವಣೆ 204: ಚಾಮರಾಜನಗರದಲ್ಲಿ ಇವಿಎಂ‌ ಧ್ವಂಸಕ್ಕೆ ಇದೇ ಮೂಲ ಕಾರಣವಾಯ್ತಾ?

ರೊಚ್ಚಿಗೆದ್ದ ಇಂಡಿಗನತ್ತ ಗ್ರಾಮದ ಜನತೆ ಮೆಂದಾರೆ ಗ್ರಾಮದ ಜನರ ಜತೆ ವಾಗ್ವಾದ ನಡೆಸಿದ್ರು. ಮಾತಿಗೆ ಮಾತು ಬೆಳೆದ ಪರಿಣಾಮ ಪೊಲೀಸರು ಮಧ್ಯೆ ಪ್ರವೇಶಿಸಿ ಲಾಠಿ ಚಾರ್ಜ್ ನಡೆಸಿದ್ರು ಇದರಿಂದ ರೊಚ್ಚಿಗೆದ್ದ ಇಂಡಿಗನತ್ತ ಹಾಡಿಯ ಜನ್ರು ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರ ಮೇಲೆ ಕಲ್ಲು ತೂರಿ ಇವಿಎಂ ಧ್ವಂಸ ಗೊಳಿಸಿದ್ರು.

No Basic Infrastructure at Villages in Chamarajanagara grg
Author
First Published May 1, 2024, 9:36 PM IST

ವರದಿ- ಪುಟ್ಟರಾಜು. ಆರ್. ಸಿ., ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಮೇ.01):  ರಾಜ್ಯಾದ್ಯಂತ ಮೊದಲನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಎಲ್ರೂ ಸಡಗರ ಸಂಭ್ರಮದಿಂದ ಬಂದು ತಮ್ಮ ಹಕ್ಕನ್ನ ಚಲಾಯಿಸ್ತಾಯಿದ್ರು. ಆದ್ರೆ ಚಾಮರಾಜನಗರದ ಇಂಡಿಗನತ್ತದಲ್ಲಿ ಮಾತ್ರ ಮತದಾನ ನಡೆಯಲೇ ಇಲ್ಲ. ಅಧಿಕಾರಿಗಳು ಮತದಾನ ಮಾಡಿ ಎಂದು ಮನವೊಲಿಸಿದ್ರೆ ಜನ ರೊಚ್ಚಿಗೆದ್ದು ಕಲ್ಲು ತೂರಿ ಇವಿಎಂ ಧ್ವಂಸಗೊಳಿಸಿದ್ರು ಇದಕ್ಕೆ ಕಾರಣವೇನು ಎಂಬುದು ಈಗ ರಿವೀಲ್ ಆಗಿದೆ.

ಏ. 26 ರಂದು ರಾಜ್ಯಾದ್ಯಂತ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ಕಾರ್ಯ ಮುಗಿದಿದೆ. ಆದ್ರೆ ಗಡಿ ನಾಡು ಚಾಮರಾಜನಗರದ ಹನೂರು ತಾಲೂಕಿನ ಇಂಡಿಗನತ್ತ ಮತಗಟ್ಟೆ 146 ರಲ್ಲಿ ಮತದಾನ ಆರಂಭವಾಗಿ 12 ಗಂಟೆ ಕಳೆದ್ರು ಒಬ್ಬೆ ಒಬ್ಬ ಮತದಾರ ಮಾತ್ರ ಮತ ಚಲಾಯಿಸಲೇ ಇಲ್ಲಾ. ಮತದಾನ ಬಹಿಷ್ಕಾರ ಮಾಡಿ ಮನೆಯಲ್ಲೇ ಉಳಿದು ಬಿಟ್ಟ. ಇದನ್ನ ಗಮನಿಸಿದ ತುನಾವಣಾ ಅಧಿಕಾರಿಗಳು ಇಂಡಿಗನತ್ತ ಹಾಗೂ ಮೆಂದಾರೆ ಹಾಡಿಯ ಜನತೆಗೆ ಮನವಿ ಮಾಡಿದ್ರು ಎಷ್ಟೇ ಮನವಿ ಮಾಡಿದ್ರು ಇಂಡಿಗನತ್ತ ಹಾಡಿಯ ಜನ ಮೂಲ ಸೌಕರ್ಯ ಸಿಗುವ ವರ್ಗೂ ಮತದಾನ ಮಾಡುವುದೇ ಇಲ್ಲವೆಂದು ಪಟ್ಟು ಹಿಡಿದ್ರೆ ಇತ್ತ ಮೆಂದಾರೆಯ ಹಾಡಿಯ ಜನ ಮತದಾನಕ್ಕೆ ಒಪ್ಪಿ ಮತಗಟ್ಟೆಗೆ ಆಗಮಿಸಿದ್ರು. 

ಚಾಮಾರಾಜನಗರದಲ್ಲಿ ಮರು ಮತದಾನಕ್ಕೆ ಚುನಾವಣಾ ಆಯೋಗ ಆದೇಶ, ಏ.29ಕ್ಕೆ ವೋಟಿಂಗ್!

ಈ ವೇಳೆ ರೊಚ್ಚಿಗೆದ್ದ ಇಂಡಿಗನತ್ತ ಗ್ರಾಮದ ಜನತೆ ಮೆಂದಾರೆ ಗ್ರಾಮದ ಜನರ ಜತೆ ವಾಗ್ವಾದ ನಡೆಸಿದ್ರು. ಮಾತಿಗೆ ಮಾತು ಬೆಳೆದ ಪರಿಣಾಮ ಪೊಲೀಸರು ಮಧ್ಯೆ ಪ್ರವೇಶಿಸಿ ಲಾಠಿ ಚಾರ್ಜ್ ನಡೆಸಿದ್ರು ಇದರಿಂದ ರೊಚ್ಚಿಗೆದ್ದ ಇಂಡಿಗನತ್ತ ಹಾಡಿಯ ಜನ್ರು ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರ ಮೇಲೆ ಕಲ್ಲು ತೂರಿ ಇವಿಎಂ ಧ್ವಂಸ ಗೊಳಿಸಿದ್ರು.

ಅಸಲಿಗೆ ಇಂಡಿಗನತ್ತ ಹಾಡಿಯ ಜನರು ಬದುಕುತ್ತಿರುವದೆ ನಾಗಮಲೆಗೆ ಆಗಮಿಸುವ ಭಕ್ತರಿಂದ. ನಾಗಮಲೆಗೆ ಹೋಗ ಬೇಕಂದ್ರೆ ಇದೇ ಇಂಡಿಗನತ್ತ ಹಾಡಿಯ ಮೂಲಕವೇ ತೆರಳ ಬೇಕು. ಇಂಡಿಗನತ್ತ ವರ್ಗೂ ಮಾತ್ರ ವಾಹನಗಳು ಬರುತ್ವೆ ಇಲ್ಲಿಯ ತನಕ ಜೀಪ್ ನಲ್ಲಿ ಬರುವ ಭಕ್ತಾಧಿಗಳು ನಂತರ ಕಾಲ್ನಡಿಗೆಯ ಮೂಲಕವೇ ನಾಗಮಲೆಗೆ ಪ್ರವೇಶಿಸುತ್ತಾರೆ. ನಾಗಮಲೆಗೆ ಆಗಮಿಸುವ ಭಕ್ತರನ್ನ ನಂಭಿಕೊಂಡು ಸಾಲ ಸೂಲ ಮಾಡಿ ಜೀಪ್, ಕ್ರೂಸರ್ ವಾಹನವನ್ನ ಗ್ರಾಮಸ್ಥರು ಖರೀದಿಸಿದ್ರು. ಕಾಡಿನ ದುರ್ಗಮ ರಸ್ತೆ ಹಾಗೂ ಕಲ್ಲು ಬಂಡೆ ರಸ್ತೆಯಾದ ಕಾರಣ ಈ ವಾಹನಗಳಿಂದ ಮಾತ್ರ ಇಂತಹ ರಸ್ತೆಯಲ್ಲಿ ಈ ವಾಹನಗಳ್ನ ಓಡಿಸಲು ಸಾದ್ಯ ಆದ್ರೆ ಕಳೆದ ಒಂದು ತಿಂಗಳ ಹಿಂದೆಯಿಂದ ಇಲ್ಲಿ ಚಾರಣಕ್ಕೆ ಅರಣ್ಯ ಇಲಾಖೆ ನಿಷೇಧ ಹಾಕಿದೆ ನಾಗಮಲೆ ಪ್ರವೇಶಕ್ಕೆ ಚಾರಣಕ್ಕೆ ಬ್ರೇಕ್ ಹಾಕಿದೆ.ನಾಗಮಲೆಗೆ ಆಗಮಿಸುವ ಭಕ್ತರನ್ನ ನಂಭಿಕೊಂಡು ಸಾಲ ಸೂಲ ಮಾಡಿ ಕೊಂಡ ಜೀಪ್100 ಕ್ಕೂ ಹೆಚ್ಚು ಕ್ರೂಸರ್ ವಾಹನಗಳನ್ನ ನಿಲ್ಲಿಸಲಾಗಿದೆ. ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಇದರಿಂದ ಇಂಡಿಗತ್ತ ಗ್ರಾಮಸ್ಥರ ಬದುಕೆ ಮೂರಾಬಟ್ಟೆಯಾಗಿದೆ. ಇವೆಲ್ಲವುದಕ್ಕೆ ಪರಿಹಾರ ಸಿಗಬೇಕಿದ್ರೆ ಬಹಿಷ್ಕಾರವೊಂದೆ ದಾರಿ ಎಂದು ಇಂಡಿಗನತ್ ಹಾಡಿಯ ಜನತೆ ತೀರ್ಮಾನ ಮಾಡಿದ್ರು ಕೊನೆಗೆ ಇದೆ ಅವರಿಗೆ ಮುಳ್ಳಾಗಿದೆ.

ಮೊದ್ಲೆ ರಸ್ತೆಯಂತು ಇಲ್ವೇ ಇಲ್ಲಾ. ಇತ್ತ ಕುಡಿಯುವ ನೀರಿಗೂ ಸಮಸ್ಯೆ ಅತ್ತ ವಿದ್ಯುತ್ ಅಂತು ಮರಿಚೀಕೆ ಇವೆಲ್ಲವುದಕ್ಕೆ ಪರಿಹಾರ ಸಿಗಲೆಂದು ಮಾಡಿದ ಗಲಾಟೆ ಈಗ ಇಂಡಿನತ್ತ ಹಾಡಿಯ ಜನತೆಗೆ ಮುಳುವಾಗಿದೆ. ಗಲಭೆ ಪ್ರಕರಣದ ಸಂಬಂದ 33 ಮಂದಿ ಅಂದರ್ ಆದ್ರೆ 250 ಕ್ಕೂ ಹೆಚ್ಚು ಗ್ರಾಮಸ್ಥರ ವಿರುದ್ದ ಎಫ್.ಐ.ಆರ್ ಆಗಿದ್ದು ಅವರೆಲ್ಲಾ ತಲೆ ಮರೆಸಿಕೊಂಡಿದ್ದಾರೆ. ಅದೇನೆ ಆಗ್ಲಿ ರಾಜ್ಯ ಸರ್ಕಾರ ಇನ್ಮುಂದೆಯಾದ್ರು ಇವರಿಗೆ ಮೂಲಭೂತ ಸೌಕರ್ಯ ನೀಡಲಿ ಎಂಬುದೆ ನಮ್ಮ ಆಶಯ. 

Follow Us:
Download App:
  • android
  • ios