Asianet Suvarna News Asianet Suvarna News

ಕೋಲಾರ: ಶ್ರೀರಾಮ ಮಂದಿರದ ಎಲೆಕ್ಟ್ರಿಕಲ್ ಕಾರ್ಯದಲ್ಲಿ ಕನ್ನಡಿಗ

ರಾಮಮಂದಿರದಲ್ಲಿ ಹಲವಾರು ಶಿಲ್ಪಿಗಳು ವಿವಿಧ ಕಾರ್ಯಗಳಲ್ಲಿ ಅತಿ ಹೆಚ್ಚು ಕನ್ನಡಿಗರೇ ಕೆಲಸ ಮಾಡುತ್ತಿದ್ದು ಪ್ರವೀಣ್‌ಕುಮಾರ್ ಕೂಡ ಎಲೆಕ್ಟ್ರಿಕಲ್ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Kannadiga in the Electrical Work of Sri Rama Mandir in Ayodhya grg
Author
First Published Jan 3, 2024, 10:30 PM IST

ಟೇಕಲ್(ಜ.03):  ಅಯೋಧ್ಯೆ ರಾಮಮಂದಿರಕ್ಕೆ ಎಲೆಕ್ಟ್ರಿಕಲ್ ಕಾರ್ಯನಿರ್ವಹಿಸಲು ಕೋಲಾರ ಜಿಲ್ಲೆ ಟೇಕಲ್‌ನ ಬನಹಳ್ಳಿ ಗ್ರಾಮದ ಪ್ರವೀಣ್‌ಕುಮಾರ್.ಬಿ.ಕೆ ಎರಡು ತಿಂಗಳಿಂದ ಕಾರ್ಯನಿರ್ವಹಿಸುತ್ತಿರುವುದು ಇಲ್ಲಿನ ಬನಹಳ್ಳಿ ಗ್ರಾಮದ ಜನತೆಯ ಹೆಮ್ಮೆಯ ಸಂಗತಿಯಾಗಿದೆ. ರಾಮಮಂದಿರದಲ್ಲಿ ಹಲವಾರು ಶಿಲ್ಪಿಗಳು ವಿವಿಧ ಕಾರ್ಯಗಳಲ್ಲಿ ಅತಿ ಹೆಚ್ಚು ಕನ್ನಡಿಗರೇ ಕೆಲಸ ಮಾಡುತ್ತಿದ್ದು ಪ್ರವೀಣ್‌ಕುಮಾರ್ ಕೂಡ ಎಲೆಕ್ಟ್ರಿಕಲ್ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಲೆಕ್ಟ್ರಿಕಲ್ ಸೂಪರ್‌ವೈಸರ್

ಬೆಂಗಳೂರಿನಲ್ಲಿ ವಿವಿಧ ಕಟ್ಟಡಗಳಲ್ಲಿ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದ ಪ್ರವೀಣ್‌ಕುಮಾರ್‌, ಬಳಿಕ ಮಧ್ಯೆ ಭಾರತದ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಎಲೆಕ್ಟ್ರಿಕಲ್ ಸೂಪರ್‌ವೈಸರ್ ಆಗಿ ಸೇರ್ಪಡೆಯಾಗಿದ್ದಾರೆ. ಕಳೆದ ನವೆಂಬರ್‌ನಲ್ಲಿ ಈ ಕಂಪನಿ ರಾಮಮಂದಿರದ ಎಲೆಕ್ಟ್ರಿಕಲ್ ಕಾರ್ಯನಿರ್ವಹಿಸಲು ಆಯ್ಕೆಯಾಗಿದ್ದು, ಇಲ್ಲಿಯ ಕೆಲಸಗಾರರಲ್ಲಿ ಪ್ರವೀಣ್‌ಕುಮಾರ್ ಸಹ ಒಬ್ಬರಾಗಿದ್ದಾರೆ.

ರಾಮಮಂದಿರ ಉದ್ಘಾಟನೆ ಕಾಂಗ್ರೆಸ್‌ನವರಿಗೆ ಸಹಿಸಿಕೊಳ್ಳೊಕೆ ಆಗ್ತಿಲ್ಲ: ಕೇಂದ್ರ ಸಚಿವ ನಾರಾಯಣಸ್ವಾಮಿ

ಪ್ರವೀಣ್‌ಕುಮಾರ್ ಹೇಳುವಂತೆ, ನಾನು ಕಾರ್ಯಕ್ಕೆ ಆಯ್ಕೆಯಾಗಿರುವುದು ನನ್ನ ಸೌಭಾಗ್ಯ. ಕಳೆದ ಎರಡು ತಿಂಗಳನಿಂದ ನಾವು ಮಂದಿರದ ಎಲೆಕ್ಟ್ರಿಕಲ್ ಕೆಲಸ ಮಾಡುತ್ತಿದ್ದೇವೆ. ನನ್ನ ಕೈಲಾದ ಮಟ್ಟಿಗೆ ಶ್ರೀರಾಮನ ಸೇವೆ ಮಾಡುತ್ತಿರುವುದಾಗಿ ನಮ್ಮ ತಂದೆ ತಾಯಿ ಆಶೀರ್ವಾದ ನನ್ನ ಬನಹಳ್ಳಿ ಗ್ರಾಮದ ತಾಯಿ ಚಾಮುಂಡೇಶ್ವರಿ, ಮುನೇಶ್ವರಸ್ವಾಮಿರವರ ಕೃಪೆ ನನ್ನ ಮೇಲಿದೆ ಎನ್ನುತ್ತಾರೆ.

Follow Us:
Download App:
  • android
  • ios