Asianet Suvarna News Asianet Suvarna News

ಸನಾತನ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ: ಕೆ.ಎಸ್. ಈಶ್ವರಪ್ಪ

ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ನಾಶಪಡಿಸಬೇಕು ಎಂದು ಹೇಳಿಕೆ ನೀಡಿದ್ದು ಅವರ ಅಪ್ರಬುದ್ಧತೆಯನ್ನು ಸೂಚಿಸುತ್ತದೆ, ಸನಾತನ ಧರ್ಮವನ್ನು ಅಳಿಸಲು ಬಂದವರು ಏನಾಗಿದ್ದಾರೆ..? ಎಂಬುದರ ಕುರಿತು ಇತಿಹಾಸ ಓದಿಕೊಂಡು ಮಾತನಾಡುವಂತೆ ಸಲಹೆ ನೀಡಿದ ಕೆ.ಎಸ್. ಈಶ್ವರಪ್ಪ 

Former Minister KS Eshwarappa Talks Over Sanatana Dharma grg
Author
First Published Oct 3, 2023, 11:30 PM IST

ಬ್ಯಾಡಗಿ(ಅ.03):  ಸನಾತನ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂಬುದು ಸಾರ್ವತ್ರಿಕ ಸತ್ಯ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು. ಪಟ್ಟಣದ ಕದರಮಂಡಲಗಿ ದೇವಸ್ಥಾನದಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿ, ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ನಾಶಪಡಿಸಬೇಕು ಎಂದು ಹೇಳಿಕೆ ನೀಡಿದ್ದು ಅವರ ಅಪ್ರಬುದ್ಧತೆಯನ್ನು ಸೂಚಿಸುತ್ತದೆ, ಸನಾತನ ಧರ್ಮವನ್ನು ಅಳಿಸಲು ಬಂದವರು ಏನಾಗಿದ್ದಾರೆ..? ಎಂಬುದರ ಕುರಿತು ಇತಿಹಾಸ ಓದಿಕೊಂಡು ಮಾತನಾಡುವಂತೆ ಸಲಹೆ ನೀಡಿದರು.

ಯಾರನ್ನೋ ಮೆಚ್ಚಿಸಲು ಉದಯನಿಧಿ ಸ್ಟಾಲಿನ್ ಇಂತಹ ಹೇಳಿಕೆಗಳನ್ನು ನೀಡಿದ್ದರೇ ನಮ್ಮ ಅಭ್ಯಂತರವಿಲ್ಲ, ಆದರೆ ಸನಾತನ ಧರ್ಮದ ಬಗ್ಗೆ ಮಾತನಾಡುವ ಹಕ್ಕು ಅವರಿಗಿಲ್ಲ, ಮಂತ್ರಿಯಾಗುವ ವೇಳೆ ಅವರ ಪ್ರಮಾಣ ವಚನದ ಸಾರಾಂಶ ತಿಳಿದುಕೊಳ್ಳಲಿ ಎಂದ ಅವರು, ಕೆಲವರು ತಪ್ಪು ಮಾತನಾಡಿ ಪ್ರಚಾರ ಗಿಟ್ಟಿಸುವ ಗೀಳು ಇರುತ್ತದೆ ಇಂತವರ ಪಟ್ಟಿಯಲ್ಲಿ ಉದಯನಿಧಿ ಸ್ಟಾಲಿನ್ ಕೂಡ ಇದ್ದಾರೆ ಎಂದರು.

ಆರ್‌ಎಸ್‌ಎಸ್‌ ಬೆಂಬಲ ಇದೆ, ಪೊಲೀಸರಿಗೆ ಚೈತ್ರಾ ಕುಂದಾಪುರ ಮಾಹಿತಿ?: ಬೊಮ್ಮಾಯಿ ಕಿಡಿ

ಸನಾತನ ಧರ್ಮದ ಮೊದಲು ಮಾತೇ ‘ಸರ್ವೆ ಜನಾಃ ಸುಖಿನೋ ಭವಂತು’. ಇದನ್ನು ಪ್ರತಿಯೊಬ್ಬರು ಅರ್ಥೈಸಿಕೊಳ್ಳಬೇಕಿದೆ. ನಮ್ಮ ಕೊನೆ ಉಸಿರು ಇರುವವರೆಗೂ ಹಿಂದೂ ಹಾಗೂ ಸನಾತನ ಧರ್ಮದ ರಕ್ಷಣೆ ಮಾಡೋಣ ಎಂದು 
ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿದರು. ಇದೇ ವೇಳೆ ಕೆ.ಎಸ್. ಈಶ್ವರಪ್ಪ ಕುಟುಂಬ ಸಮೇತ ಸುಕ್ಷೇತ್ರ ಕದರಮಂಡಲಗಿ ಶ್ರೀ ಕಾಂತೇಶಸ್ವಾಮಿ ದರ್ಶನ ಪಡೆದರು. ಬಳಿಕ ಕಾಂತೇಶ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಈಶ್ವರಪ್ಪ ಅವರನ್ನು ಗೌರವಿಸಿದರು.

ಈ ಸಂದರ್ಭದಲ್ಲಿ ಈಶ್ವರಪ್ಪ ಅವರ ಪುತ್ರ ಕೆ.ಇ. ಕಾಂತೇಶ, ದೇವಸ್ಥಾನ ಸಮಿತಿ ಅಧ್ಯಕ್ಷ ಹನುಮಂತಪ್ಪ ಕುಡಪಲಿ, ಬಿಜೆಪಿ ತಾಲೂ ಕಾಧ್ಯಕ್ಷ ಹಾಲೇಶ ಜಾಧವ್, ಜಿಲ್ಲಾ ಉಪಾಧ್ಯಕ್ಷ ವೀರೇಂದ್ರ ಶೆಟ್ಟರ್, ರಾಜು ಹೊಸಕೇರಿ, ಫಕ್ಕೀರಮ್ಮ ಚಲವಾದಿ, ನಿಂಗಪ್ಪ ಬಟ್ಟಲಕಟ್ಟಿ, ಸುರೇಶ ಆಸಾದಿ, ಶಿವಾನಂದ ಒಗ್ಗರಣಿ, ಭೀಮಪ್ಪ ನಾಯ್ಕರ, ವೈ.ಎಚ್. ಕುಡಪಲಿ, ನಾಗರಾಜ ಉಜನಿ, ಕಾಂತೇಶ ಕೋಳೂರ, ಅಶೋಕ ಕೋಳೂರ, ಸತೀಶ ತಿಮ್ಮಣ್ಣನವರ, ಹನುಮಂತಪ್ಪ ಕುರುಡಣ್ಣನವರ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು.

ನನಗೂ ಕಾಂಗ್ರೆಸ್‌ನಿಂದ ಕರೆ: ಪೂಜಾರ

ಕಾಂಗ್ರೆಸ್ ಪಕ್ಷ ಸದ್ದಿಲ್ಲದೇ ರಾಜ್ಯದಲ್ಲಿ ಆಪರೇಷನ್ ಹಸ್ತ ನಡೆಸುತ್ತಿದೆ. ಕೆಲ ಬಿಜೆಪಿ ನಾಯಕರು ಸಹ ಈಗಾಗಲೇ ಕಾಂಗ್ರೆಸ್ ಸೇರಲು ಮುಂದಾಗಿದ್ದಾರೆ. ಬಿಜೆಪಿ ತೊರೆದು ಬಂದಲ್ಲಿ ಲೋಕಸಭೆ ಟಿಕೆಟ್ ನೀಡುವುದಾಗಿ ನನಗೂ ಸಹ ಕಾಂಗ್ರೆಸ್ ನಾಯಕರೊಬ್ಬರು ಆಮಿಷವೊಡ್ಡಿದ್ದಾರೆ.ಇಂತದ್ದಕ್ಕೆ ಸೊಪ್ಪು ಹಾಕುವ ಜಾಯಮಾನ ನನ್ನದಲ್ಲ, ಬರುವ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ರಾಣೆಬೆನ್ನೂರಿನ ಮಾಜಿ ಶಾಸಕ ಅರುಣಕುಮಾರ್ ಪೂಜಾರ ಹೇಳಿದರು.

Follow Us:
Download App:
  • android
  • ios