Asianet Suvarna News Asianet Suvarna News

ಚಿತ್ರದುರ್ಗದಲ್ಲಿ ಕುಡಿಯೋ ನೀರಿಗಾಗಿ ಹಾಹಾಕಾರ: ಕಣ್ಮುಚ್ಚಿ ಕುಳಿತ ಅಧಿಕಾರಿಗಳು..!

ಸತತ ಆರೇಳು ತಿಂಗಳಿಂದ‌ ಈ ಗ್ರಾಮದಲ್ಲಿ ಕುಡಿಯುವ ನೀರಿನ‌ ಆಹಾಕಾರ‌ ಮುಗಿಲು ಮುಟ್ಟಿದೆ. ದಿನ ಬೆಳಗಾದರೆ ಇಲ್ಲಿನ ಜನರು ನೀರಿಗಾಗಿ ಪರದಾಡ್ತಿದ್ದಾರೆ. ತೋಟದ ಬಾವಿಗಳು ಹಾಗು ಕೊಳವೆ ಬಾವಿಗಳ ಮೊರೆ ಹೋಗ್ತಿದ್ದಾರೆ. ಅಲ್ಲದೇ ವಯಸ್ಸಾದ ವೃದ್ಧರು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಸಂಗ್ರಹಿಸಿಟ್ಕೊಂಡು ವಾರಗಟ್ಟಲೇ ಸೇವಿಸುವಂತಾಗಿದೆ. 

Drinking Water Problem in Chitradurga grg
Author
First Published May 1, 2024, 7:12 PM IST

ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಮೇ.01):  ಅದೊಂದು‌ ಬಿಸಿಲನಾಡು, ಬೇಸಿಗೆ ಬಂತಂದ್ರೆ ತಾಪಮಾನ ದಿನ ದಿನಕ್ಕೂ ಹೆಚ್ಚಾಗಲಿದೆ. ಆದ್ರೆ ಇಂತಹ ವೇಳೆ ಅಲ್ಲಿ ಕುಡಿಯುವ ನೀರಿನ ತಾತ್ವಾರ ಮಿತಿ ಮೀರಿದೆ. ಹೀಗಾಗಿ ಜನರು ಕಿಲೋಮೀಟರ್ ಗಟ್ಟಲೇ ದೂರ ಹೋಗಿ ನೀರು ತಂದರೂ ಸಹ ಅಧಿಕಾರಿಗಳು ಮಾತ್ರ ನಿದ್ರಾವಸ್ಥೆಯಲ್ಲಿ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.. ಹೀಗೆ ಕುಡಿಯುವ ನೀರನ್ನು‌ ತರಲು ಹರಸಾಹಸ ಪಡ್ತಿರೊ ಜನರು. ತಳ್ಳುವ ಗಾಡಿಯಲ್ಲಿ ಕೊಡಗಳನ್ನು ಇಟ್ಕೊಂಡು ದೂರದ ತೋಟಗಳತ್ತ ಸಾಗ್ತಿರೊ ಗ್ರಾಮಸ್ಥರು. ಈ  ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗ ತಾಲ್ಲೂಕಿನ ಬೆಳಗಟ್ಟ ಗ್ರಾಮದಲ್ಲಿ. 

ಹೌದು, ಸತತ ಆರೇಳು ತಿಂಗಳಿಂದ‌ ಈ ಗ್ರಾಮದಲ್ಲಿ ಕುಡಿಯುವ ನೀರಿನ‌ ಆಹಾಕಾರ‌ ಮುಗಿಲು ಮುಟ್ಟಿದೆ. ದಿನ ಬೆಳಗಾದರೆ ಇಲ್ಲಿನ ಜನರು ನೀರಿಗಾಗಿ ಪರದಾಡ್ತಿದ್ದಾರೆ. ತೋಟದ ಬಾವಿಗಳು ಹಾಗು ಕೊಳವೆ ಬಾವಿಗಳ ಮೊರೆ ಹೋಗ್ತಿದ್ದಾರೆ. ಅಲ್ಲದೇ ವಯಸ್ಸಾದ ವೃದ್ಧರು ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಸಂಗ್ರಹಿಸಿಟ್ಕೊಂಡು ವಾರಗಟ್ಟಲೇ ಸೇವಿಸುವಂತಾಗಿದೆ. ಆದ್ರೆ ಆಗೊಮ್ಮೆ, ಈಗೊಮ್ಮೆ ಗ್ರಾಪಂ ಅಧಿಕಾರಿಗಳು ಪೂರೈಸುವ ಟ್ಯಾಂಕರ್ ನೀರು ಒಬ್ರಿಗೆ ಸಿಕ್ರೆ ಮತ್ತೊಬ್ರಿಗೆ ಸಿಕ್ತಿಲ್ಲ. ಆ‌ ನೀರು ಸಿಕ್ರು‌ಸಹ ಕುಡಿಯಲು  ಯೋಗ್ಯವಾಗಿಲ್ಲ. ಹೀಗಾಗಿ ಕಂಗಾಲಾದ ಜನರು, ಮೂರ್ನಾಲ್ಕು ಕಿಲೋ‌ಮೀಟರ್ ದೂರದಿಂದ ತೋಟದ ನೀರು ತಂದು  ಸೇವಿಸುವ ಸ್ಥಿತಿ ನಿರ್ಮಾಣವಾಗಿದ್ದು,ಸಿಕ್ಕಸಿಕ್ಕ ಕಡೆ ನೀರು ಸೇವಿಸುವ ಜನರು  ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದಾರೆ. ಈ ಬಗ್ಗೆ ಗಮನ ಹರಿಸಬೇಕಾದ ಚಿತ್ರದುರ್ಗದ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳು ಜಾಣಕುರುಡು ಪ್ರದರ್ಶಿಸುತಿದ್ದಾರೆ.ಹೀಗಾಗಿ ,ಗ್ರಾಮಸ್ಥರು ನಿತ್ಯ ನೀರಿಗಾಗಿ ಪರದಾಡ್ತಾ, ತೀವ್ರ ಯಾತನೆ ಅನುಭವಿಸುವಂತಾಗಿದೆ.

ರಾಜ್ಯದಲ್ಲಿ 43 ಡಿಗ್ರಿ ತಲುಪಿದ ಉಷ್ಣಾಂಶ: ಇಬ್ಬರು ವೃದ್ಧೆಯರು ಬಲಿ

ಇನ್ನು ಇದು ಕೇವಲ ಈ‌ ಗ್ರಾಮವೊಂದರ‌ ಸಮಸ್ಯೆ ಮಾತ್ರ ಅಲ್ಲ. ಇಡೀ ಚಿತ್ರದುರ್ಗ ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಸಮಸ್ಯೆ ಮಿತಿಮೀರಿದೆ. ಅದ್ರೆ  ಬೆಳಗಟ್ಟ ಗ್ರಾಪಂ ಅಧಿಕಾರಿಗಳು ಮಾತ್ರ‌ಅವರು,ಈ ಹಿಂದೆ ನೀರಿನ ಪೂರೈಕೆಗೆ ಪಟ್ಟ ಶ್ರಮದ‌ ಯಶೋಗಾಥೆ‌ಯನ್ನೇ ಹೇಳ್ತಿದ್ದು, ತಮ್ಮ ಅಸಹಯಕತೆ‌ ಹೊರಹಾಕಿದ್ದಾರೆ .

ಒಟ್ಟಾರೆ ಚಿತ್ರದುರ್ಗ ತಾಲ್ಲೂಕಿನಾದ್ಯಂತ ಕುಡಿಯುವ ನೀರಿನ ಯಾತನೆ ಮಿತಿಮೀರಿದೆ. ಇನ್ನಾದ್ರು ಸಂಬಂಧಪಟ್ಟವರು  ಕುಡಿಯುವ ನೀರಿನ‌ ಸಮಸ್ಯೆ‌ ನಿವಾರಣೆಗೆ ಮುಂದಾಗಬೇಕಿದೆ. 

Follow Us:
Download App:
  • android
  • ios