Asianet Suvarna News Asianet Suvarna News

3ನೇ ದಿನವೂ ಬೆಂಗಳೂರಲ್ಲಿ ಕೊರೋನಾ ಹೆಚ್ಚಳ..!

*  ಪಾಸಿಟಿವಿಟಿ ದರವೂ ಶೇ.1.58ಕ್ಕೆ ಹೆಚ್ಚಳ
*  ಮಹದೇವಪುರದಲ್ಲಿ 12 ಕಂಟೈನ್ಮೆಂಟ್‌
*  ಶುಕ್ರವಾರ 243 ಪ್ರಕರಣ ಪತ್ತೆ. ಶನಿವಾರ 210 ಪ್ರಕರಣ ದೃಢ 
 

Coronavirus Cases Increase in Bengaluru for 3rd Day grg
Author
Bengaluru, First Published Jun 5, 2022, 4:59 AM IST

ಬೆಂಗಳೂರು(ಜೂ.05): ಸತತ ಮೂರನೇ ದಿನ ಬೆಂಗಳೂರು ನಗರದಲ್ಲಿ 200ಕ್ಕೂ ಅಧಿಕ ಸೋಂಕು ಪ್ರಕರಣ ಪತ್ತೆಯಾಗಿದ್ದು, ಶನಿವಾರ 210 ಪ್ರಕರಣ ದೃಢಪಟ್ಟಿವೆ. ಪಾಸಿಟಿವಿಟಿ ದರ ಶೇ.1.58ಕ್ಕೆ ಹೆಚ್ಚಾಗಿದೆ. 171 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್‌ ಸಾವು ದಾಖಲಾಗಿಲ್ಲ. ಮೇ 29ರ ಭಾನುವಾರ 232, ಗುರುವಾರ 276 ಹಾಗೂ ಶುಕ್ರವಾರ 243 ಪ್ರಕರಣ ಪತ್ತೆಯಾಗಿದ್ದವು.

ಸದ್ಯ ನಗರದಲ್ಲಿ ಒಟ್ಟು 2146 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ ನಾಲ್ವರು ತೀವ್ರ ನಿಗಾ ಘಟಕ ಹಾಗೂ 13 ಮಂದಿ ಸಾಮಾನ್ಯ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆ ಆರೈಕೆಯಲ್ಲಿದ್ದಾರೆ.

Covid Crisis: ಕರ್ನಾಟಕದಲ್ಲಿ 222 ಮಂದಿಗೆ ಕೋವಿಡ್‌: ಪಾಸಿಟಿವಿಟಿ ಅರ್ಧ ಇಳಿಕೆ

ನಗರದಲ್ಲಿ ಶನಿವಾರ ಹೊಸದಾಗಿ ಯಾವುದೇ ಕಂಟೈನ್ಮೆಂಟ್‌ ವಲಯ ಸೃಷ್ಟಿಯಾಗಿಲ್ಲ. ಒಟ್ಟು 12 ಕಂಟೈನ್ಮೆಂಟ್‌ ವಲಯಗಳಿದ್ದು, ಅವು ಮಹದೇವಪುರ ವಲಯಕ್ಕೆ ಸೀಮಿತವಾಗಿವೆ. ಇನ್ನು 17,290 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 2381 ಮಂದಿ ಮೊದಲ ಡೋಸ್‌, 8851 ಮಂದಿ ಎರಡನೇ ಡೋಸ್‌ ಮತ್ತು 6058 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ.​​​ ಒಟ್ಟು 14093 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಈ ಪೈಕಿ 11176 ಆರ್‌ಟಿಪಿಸಿಆರ್‌ ಹಾಗೂ 2,917 ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

7 ದಿನ ಕೊರೋನಾ ವಿವರ

ದಿನ ಪ್ರಕರಣ

ಮೇ 29 232
ಮೇ 30 159
ಮೇ 31 178
ಜೂ. 1 158
ಜೂ. 2 276
ಜೂ. 3 243
ಜೂ. 4 210
 

Follow Us:
Download App:
  • android
  • ios