Asianet Suvarna News Asianet Suvarna News

- ಔಷಧ ಕಂಪೆನಿಗಳ ಬಗ್ಗೆ ಗ್ರಾಹಕರು ಎಚ್ಚರದಿಂದಿರಿ : ಎಲ್. ಗೋಮತಿದೇವಿ

ದೇಹದಲ್ಲಿ ಇನ್ನಷ್ಟು ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುವಂತಹ ಲಸಿಕೆಗಳನ್ನು ಔಷಧ ಕಂಪೆನಿಗಳು ನೀಡುತ್ತಿರುವುದು ಆತಂಕಕಾರಿ ಎಂದು ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಲ್. ಗೋಮತಿದೇವಿ ವಿಷಾದಿಸಿದರು.

Consumers beware of drug companies  L  Gomatidevi snr
Author
First Published Mar 5, 2024, 11:28 AM IST

  ತುಮಕೂರು : ದೇಹದಲ್ಲಿ ಇನ್ನಷ್ಟು ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುವಂತಹ ಲಸಿಕೆಗಳನ್ನು ಔಷಧ ಕಂಪೆನಿಗಳು ನೀಡುತ್ತಿರುವುದು ಆತಂಕಕಾರಿ ಎಂದು ಬೆಂಗಳೂರಿನ ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಲ್. ಗೋಮತಿದೇವಿ ವಿಷಾದಿಸಿದರು.

ತುಮಕೂರು ವಿವಿ ಸಾವಯವ ರಸಾಯನ ಶಾಸ್ತ್ರ ಅಧ್ಯಯನ ಮತ್ತು ಸಂಶೋಧನ ವಿಭಾಗವು ಸೋಮವಾರ ಆಯೋಜಿಸಿದ್ದ ‘ರಾಸಾಯನಿಕ ವಿಜ್ಞಾನದಲ್ಲಿ ಹೊಸ ಸಾಧ್ಯತೆಗಳು’ ಕುರಿತ ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ತಂಪು ಪಾನಿಯಗಳಲ್ಲಿ ಕೀಟನಾಶಕಗಳ ಅಂಶ ಪಿಪಿಎಂನಲ್ಲಿಕಂಡು ಬರುತ್ತಿದೆ. ಒಂದು ಲೋಟ ತಂಪು ಪಾನಿಯದಲ್ಲಿ ೮ ಚಮಚದಷ್ಟು ಆರೋಗ್ಯಕ್ಕೆ ಹಾನಿಯುಂಟಾಗುವ ಸಕ್ಕರೆ ಅಂಶವಿದೆ.ಇದನ್ನು ಸೇವಿಸುವವರು, ಮುಖ್ಯವಾಗಿ ಮಕ್ಕಳಲ್ಲಿ ಹಾರ್ಮೋನ್ ಸಮಸ್ಯೆಯುಂಟಾಗಿ, ದೇಹದತೂಕದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆಎಂದು ಕಳವಳ ವ್ಯಕ್ತಪಡಿಸಿದರು.

1980 ರಲ್ಲಿ ಜಪಾನ್‌ ದೇಶದ ಫುಜಿಶಿಮಾ ಮತ್ತು ಹೋಂಡಾ ವಿಜ್ಞಾನಿಗಳು ಸೇರಿ ಜಲಜನಕ ಹೈಡ್ರೋಜನ್‌ ಅನ್ನು ಆಮ್ಲಜನಕದಿಂದ ವಿಭಜಿಸಿ ಹೈಡ್ರೋ ಇಂಧನ ತಯಾರಿಸಲು ಮುಂದಾಗಿದ್ದರು. ಪ್ರಯೋಗಾಲಯದಲ್ಲಿಯೇ ಈ ಸಂಶೋಧನೆ ಕೊನೆಗಂಡಿತು. ಸಮಾಜಕ್ಕೆ ಪ್ರಯೋಜನವಾಗು ವಂತಹ ಪ್ರಯೋಗಗಳನ್ನು ಪ್ರಯೋಗಾಲಯದ ಬಾಗಿಲಿನಿಂದ ದಾಟಿಸಿ, ದೊಡ್ಡ ಮಟ್ಟದಲ್ಲಿ ಯಾವುದಾದರೂ ಸಂಸ್ಥೆಯೊಂದಿಗೆ ಅದನ್ನು ಕಾರ್ಯ ರೂಪಕ್ಕೆತರಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಕೊರೊನಾ ವೈರಸ್ ವಿರುದ್ಧ ಲಸಿಕೆ ಕಂಡುಹಿಡಿಯಲು ರಸಾಯನ ಶಾಸ್ತ್ರವೇ ಕಾರಣ. ಸಂಶೋಧನೆಗಳಿಂದ ಮಾತ್ರ ಬದಲಾವಣೆ ಸಾಧ್ಯ. ಐನ್‌ಸ್ಟೀನ್ ಹೇಳುವಂತೆ ‘ಉತ್ತರಕ್ಕಿಂತ ಪ್ರಶ್ನೆ ಮುಖ್ಯ. ಪರಿಹಾರಕ್ಕಿಂತ ಸಮಸ್ಯೆ ಮುಖ್ಯ’ ಎಂದು ಆಗ ಸಂಶೋಧನೆಗಳು ಯಾವದಿಕ್ಕಿನಲ್ಲಿ ಸಾಗಬೇಕೆಂದು ನಮಗೆ ತಿಳಿಯುತ್ತದೆ ಎಂದರು.

ರಾಯಲ್ ಸೊಸೈಟಿಆಫ್ ಕೆಮಿಸ್ಟ್ರಿ ಸಂಸ್ಥೆಯು ರಾಸಾಯನಿಕ ವಿಜ್ಞಾನದ ಬಹು ಹಂತದ ಲಕ್ಷಣಗಳ ಹಾಗೂ ರಾಸಾಯನಿಕದಲ್ಲಿ ಆಧುನಿಕ ಯುಗವು ಒಳಗಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಹಿಡಿಯುತ್ತಿದೆ. ರಸಾಯನ ಶಾಸ್ತ್ರದ ಹಲವು ಮಾದರಿಗಳನ್ನು ಬದಲಾಯಿಸಿ, ತಂತ್ರಜ್ಞಾನ ಆಧಾರಿತ ಮಾದರಿಗಳನ್ನು ತರಲು ಮುಂದಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಸಂಯೋಜಕಡಾ.ಡಿ. ಸುರೇಶ್, ವಿಜ್ಞಾನ ಕಾಲೇಜಿನ ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕಪ್ರೊ.ಎಸ್. ಶ್ರೀನಿವಾಸ ಉಪಸ್ಥಿತರಿದ್ದರು.

Follow Us:
Download App:
  • android
  • ios