userpic
user icon

ಬರಗಾಲದ ಹಿನ್ನೆಲೆಯಲ್ಲಿ ಹಂಪಿ ಉತ್ಸವ ಕೈಬಿಡುವುದು ಸರಿಯಾದ ಕ್ರಮವಲ್ಲ: ಉಗ್ರಪ್ಪ

Congress Leader VS Ugrappa Talks Over Hampi Utsav grg
VS Ugrappa

Synopsis

ಮೈಸೂರು ದಸರಾ ಉತ್ಸವಕ್ಕೆ ಪ್ರೇರಣೆಯಾದ ಹಂಪಿ ಉತ್ಸವ ಆಚರಣೆಯನ್ನು ಕೈ ಬಿಡುವುದು ಸರಿಯಲ್ಲ. ಬರ ಹಾಗೂ ಕಾವೇರಿ ಸಮಸ್ಯೆ ನಡುವೆಯೂ ಮೈಸೂರು ದಸರಾ ಉತ್ಸವ ಆಚರಿಸಲಾಗುತ್ತಿದೆ. ಅದೇ ರೀತಿ ಸರಳವಾಗಿ ಹಂಪಿ ಉತ್ಸವ ಆಚರಣೆ ಮಾಡಬೇಕು. ಹಂಪಿ ಉತ್ಸವ ಈ ಭಾಗದ ಜನರ ಉತ್ಸವವಾಗಿದೆ: ಮಾಜಿ ಸಂಸದ ವಿ.ಎಸ್. ಉಗ್ರಪ್ಪ 

ಹೊಸಪೇಟೆ(ಸೆ.24): ಬರಗಾಲದ ಹಿನ್ನೆಲೆಯಲ್ಲಿ ಹಂಪಿ ಉತ್ಸವದ ಆಚರಣೆಯನ್ನು ಕೈಬಿಡುವುದು ಸರಿಯಾದ ಕ್ರಮವಲ್ಲ. ಮೈಸೂರು ದಸರಾ ಉತ್ಸವದಂತೆ ಹಂಪಿ ಉತ್ಸವವನ್ನು ಸರಳವಾಗಿ ಆಚರಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ದಸರಾ ಉತ್ಸವಕ್ಕೆ ಪ್ರೇರಣೆಯಾದ ಹಂಪಿ ಉತ್ಸವ ಆಚರಣೆಯನ್ನು ಕೈ ಬಿಡುವುದು ಸರಿಯಲ್ಲ. ಬರ ಹಾಗೂ ಕಾವೇರಿ ಸಮಸ್ಯೆ ನಡುವೆಯೂ ಮೈಸೂರು ದಸರಾ ಉತ್ಸವ ಆಚರಿಸಲಾಗುತ್ತಿದೆ. ಅದೇ ರೀತಿ ಸರಳವಾಗಿ ಹಂಪಿ ಉತ್ಸವ ಆಚರಣೆ ಮಾಡಬೇಕು. ಹಂಪಿ ಉತ್ಸವ ಈ ಭಾಗದ ಜನರ ಉತ್ಸವವಾಗಿದೆ. ಪ್ರತಿವರ್ಷದಂತೆ ಈ ಬಾರಿಯೂ ನವೆಂಬರ್ ೩, ೪ ಹಾಗೂ ೫ರಂದು ಹಂಪಿ ಉತ್ಸವ ಆಚರಣೆಗೆ ದಿನಾಂಕ ನಿಗದಿಗೊಳಿಸಿ, ಸರ್ಕಾರ ಅಗತ್ಯ ಅನುದಾನ ಮೀಸಲಿಡಬೇಕು ಎಂದರು.

ಬಿಜೆಪಿ ಟಿಕೆಟ್‌ ಡೀಲ್‌: ಮಠದಲ್ಲೇ ನಡೆದಿತ್ತೇ ಕೋಟಿ‌ ಕೋಟಿ ವಂಚನೆಯ ಮಾತುಕತೆ?

ನ್ಯಾಯಾಲಯದ ವಿಚಾರಣೆ ನೆಪವೊಡ್ಡಿ ಹಂಪಿಯ ಮೂಲ ನಿವಾಸಿಗಳನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ. ಹಂಪಿ ಜೀವಂತ ಸ್ಮಾರಕವಾಗಿದ್ದು, ಸ್ಥಳೀಯರಿಂದ ಹಂಪಿ ಪ್ರವಾಸೋದ್ಯಮದ ಅಭಿವೃದ್ಧಿಯೂ ಸಾಧ್ಯವಾಗಲಿದೆ. ಜತೆಗೆ ದೇಶ-ವಿದೇಶಿ ಪ್ರವಾಸಿಗರಿಗೆ ಅನುಕೂಲವಾಗಲಿದೆ. ಪ್ರವಾಸೋದ್ಯಮ ನೆಚ್ಚಿಕೊಂಡು ಹಂಪಿ ಜನರು ಬದುಕು ಕಟ್ಟಿಕೊಂಡಿದ್ದಾರೆ. ಅವರ ಜೀವನೋಪಾಯಕ್ಕಾಗಿ ಜಿಲ್ಲಾಡಳಿತ ಯೋಜನೆ ರೂಪಿಸಬೇಕಿದ್ದು, ಈ ವಿಷಯವಾಗಿ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.

ನಗರಸಭೆ ಸದಸ್ಯ ಕೆ. ಮಹೇಶ್, ಮುಖಂಡರಾದ ವಿನಾಯಕ ಶೆಟ್ಟರ್, ಉಮೇಶ್, ನಿಂಬಗಲ್ ರಾಮಕೃಷ್ಣ, ಮಂಜುನಾಥ ಗೌಡ ಮತ್ತಿತರರಿದ್ದರು.

Latest Videos