Asianet Suvarna News Asianet Suvarna News

ಸಿದ್ದರಬೆಟ್ಟದಲ್ಲಿ ಕಸದಬುಟ್ಟಿ ಅಳವಡಿಸಿ ಜಾಗೃತಿ

ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟದ ಸಿದ್ದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಮತ್ತು ಬೆಟ್ಟದ ಮೇಲಿನ ಸಿದ್ದೇಶ್ವರ ಸ್ವಾಮಿಯ ಗುಹಾಲಯಗಳಲ್ಲಿ ಕಸದ ಬುಟ್ಟಿಗಳನ್ನು ಸ್ಪಿರಿಟ್ ಆಫ್ ಗಿವಿಂಗ್ ತಂಡದವರು ಅಳವಡಿಸಿದ್ದಾರೆ.

Awareness by installing dustbin in Siddarabetta snr
Author
First Published Feb 21, 2024, 10:36 AM IST

 ಕೊರಟಗೆರೆ : ತಾಲೂಕಿನ ಚನ್ನರಾಯನದುರ್ಗ ಹೋಬಳಿಯ ಸಿದ್ದರಬೆಟ್ಟದ ಸಿದ್ದೇಶ್ವರ ಸ್ವಾಮಿ ದೇವಾಲಯದ ಆವರಣದಲ್ಲಿ ಮತ್ತು ಬೆಟ್ಟದ ಮೇಲಿನ ಸಿದ್ದೇಶ್ವರ ಸ್ವಾಮಿಯ ಗುಹಾಲಯಗಳಲ್ಲಿ ಕಸದ ಬುಟ್ಟಿಗಳನ್ನು ಸ್ಪಿರಿಟ್ ಆಫ್ ಗಿವಿಂಗ್ ತಂಡದವರು ಅಳವಡಿಸಿದ್ದಾರೆ.

ದೇವಾಲಯದ ಆವರಣದಲ್ಲಿ ಬಿದ್ದಿದಂತಹ ಪ್ಲಾಸ್ಟಿಕ್ ಕವರ್‌, ಬಾಟಲ್, ಕಸ ಕಡ್ಡಿ ಇತ್ಯಾದಿಗಳನ್ನು ಸ್ವಚ್ಛಪಡಿಸಿ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸಿ ಪ್ಲಾಸ್ಟಿಕ್ ಮುಕ್ತ ಪುಣ್ಯಕ್ಷೇತ್ರ ವಾಗುವಂತೆ ಜಾಗೃತಿ ಮೂಡಿಸಿದರು.

ಸ್ಪಿರಿಟ್ ಆಫ್ ಗಿವಿಂಗ್ ತಂಡ ವತಿಯಿಂದ ಮಾತನಾಡಿದ ಭವ್ಯಾ, ಪುಣ್ಯಕ್ಷೇತ್ರಗಳು ಮತ್ತು ಪ್ರವಾಸಿ ತಾಣಗಳಲ್ಲಿ ಪರಿಸರವನ್ನು ಅತ್ಯಂತ ಸ್ವಚ್ಛವಾಗಿ ಇಡಬೇಕಾಗಿರೋದು ಎಲ್ಲರ ಕರ್ತವ್ಯವಾಗಿರುತ್ತದೆ. ಪ್ಲಾಸ್ಟಿಕ್ ಕವರ್‌ ಮತ್ತು ಪ್ಲಾಸ್ಟಿಕ್ ಬಾಟಲ್‌ಗಳು ಮಣ್ಣಿನಲ್ಲಿ ಕೊಳೆಯುವ ವಸ್ತುಗಳಲ್ಲಿ ಆದರಿಂದ ಪಶು ಪ್ರಾಣಿ ಪಕ್ಷಿಗಳ ಜೀವ ಹಾನಿ ಆಗುವುದು ಹೆಚ್ಚಾಗುತ್ತಿದ್ದು ಬುದ್ದಿವಂತರಾದ ನಾವು ತುಂಬಾ ಎಚ್ಚರವಹಿಸಬೇಕಿದೆ ಎಂದರು.

ಮೇಘಾ ಮಾತನಾಡಿ, ನೂತನವಾಗಿ ಸ್ಪಿರಿಟ್ ಆಫ್ ಗಿವಿಂಗ್ ಎಂಬ ತಂಡವನ್ನು ನಾವು ರಚಿಸಿಕೊಂಡು ರಾಜ್ಯದ ಎಲ್ಲಾ ಪುಣ್ಯಕ್ಷೇತ್ರ ಪ್ರವಾಸಿ ತಾಣ ಅನಾಥಾಶ್ರಮ ಇತ್ಯಾದಿಗಳ ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತಾ ಆಂದೋಲನ ಜಾಗೃತಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಇದೀಗ ಸಿದ್ದರಬೆಟ್ಟ ಪುಣ್ಯಕ್ಷೇತ್ರದಲ್ಲಿ ನಾಲ್ಕು ಕಸದ ಬುಟ್ಟಿಗಳನ್ನು ಅಳವಡಿಸಿ ಸಾರ್ವಜನಿಕರಿಗೆ ಮತ್ತು ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಅರಿವು ಮೂಡಿಸಿದ್ದೇವೆ ಎಂದರು.

Follow Us:
Download App:
  • android
  • ios