Asianet Suvarna News Asianet Suvarna News

ಅನ್ನಭಾಗ್ಯ, ಗೃಹಲಕ್ಷ್ಮೀ ಜನರ ಖಾತೆಗೆ ಬಾರದ ಹಣ; ಮಳೆ ಲೆಕ್ಕಿಸದೇ ಸಾವಿರಾರು ಮಹಿಳೆಯರ ಸರತಿ ಸಾಲು!

ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಹಣ ಸಾವಿರಾರು ಕುಟುಂಬದ ಮಹಿಳೆಯರ ಖಾತೆಗೆ ಜಮಾ ಆಗ್ತಿಲ್ಲ.  ಆಧಾರ್,ಇ ಕೆವೈಸಿ,ಪಡಿತರ ಸೇರಿದಂತೆ ನಾನಾ ಸಮಸ್ಯೆಗಳಿಂದ ಬ್ಯಾಂಕ್ ಖಾತೆಗೆ ಹಣ ಸೇರಿಲ್ಲ. ಹೀಗಾಗಿ ಚಾಮರಾಜನಗರ ಆಹಾರ ಇಲಾಖೆ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖೆಯಿಂದ ವಿಶೇಷ ಕ್ಯಾಂಪ್ ಆಯೋಜಿಸಿದ್ದರು. ಮಹಿಳೆಯರು ತಾ ಮುಂದು ನಾ ಮುಂದು ಅನ್ನುವಂತೆ ಸುರಿಯೋ ಮಳೆ ಲೆಕ್ಕಿಸದೆ ಕಾದು ನಿಂತಿದ್ದರು. 

Aadhaar KYC problem Annabhagya Gruhalakshmi scheme money not recieved people at chamarajanagar rav
Author
First Published Jan 9, 2024, 9:09 PM IST

ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್  ಸುವರ್ಣ  ನ್ಯೂಸ್,  ಚಾಮರಾಜನಗರ.

ಚಾಮರಾಜನಗರ (ಜ.9) - ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಾದ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಹಣ ಸಾವಿರಾರು ಕುಟುಂಬದ ಮಹಿಳೆಯರ ಖಾತೆಗೆ ಜಮಾ ಆಗ್ತಿಲ್ಲ.  ಆಧಾರ್,ಇ ಕೆವೈಸಿ,ಪಡಿತರ ಸೇರಿದಂತೆ ನಾನಾ ಸಮಸ್ಯೆಗಳಿಂದ ಬ್ಯಾಂಕ್ ಖಾತೆಗೆ ಹಣ ಸೇರಿಲ್ಲ. ಹೀಗಾಗಿ ಚಾಮರಾಜನಗರ ಆಹಾರ ಇಲಾಖೆ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖೆಯಿಂದ ವಿಶೇಷ ಕ್ಯಾಂಪ್ ಆಯೋಜಿಸಿದ್ದರು. ಮಹಿಳೆಯರು ತಾ ಮುಂದು ನಾ ಮುಂದು ಅನ್ನುವಂತೆ ಸುರಿಯೋ ಮಳೆ ಲೆಕ್ಕಿಸದೆ ಕಾದು ನಿಂತಿದ್ದರು. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ.

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕೆಲವು ಮಹತ್ವದ ಯೋಜನೆಗಳಿಗೆ ಜನರಿಗೆ ಘೋಷಣೆ ಮಾಡಿದೆ. ಅದರಲ್ಲಿ ಗೃಹ ಯೋಜನೆಯೂ ಕೂಡ ಒಂದು.ಮನೆಯ ಯಜಮಾನಿಗೆ ಎರಡು ಸಾವಿರ ಹಣ ಕೊಡುವ ಯೋಜನೆ ಚಾಲನೆ ದೊರೆತು ಆರು ತಿಂಗಳಾಗಿದೆ. ಈಗಾಗ್ಲೇ ಐದು ಕಂತಿನ ಹಣ ಬಿಡುಗಡೆ ಕೂಡ ಆಗಿದೆ. ಆದ್ರೆ ಸಾವಿರಾರು ಕುಟುಂಬದ ಪಲಾನುಭವಿಗಳಿಗೆ ಇನ್ನೂ ಕೂಡ ಒಂದು ಕಂತಿನ ಹಣ ಕೂಡ ಸಂದಾಯವಾಗಿಲ್ಲ. ಇದಕ್ಕೆ ನಾನಾ ತಾಂತ್ರಿಕ ಕಾರಣಗಳಿವೆ. ಅಂದ್ರೆ ಬ್ಯಾಂಕ್ ಖಾತೆ ತೆರೆಯುವುದು,ಆಧಾರ್ ಲಿಂಕ್, ಇ ಕೆವೈಸಿ, ಪಡಿತರ ಚೀಟಿ ಸೇರಿದಂತೆ ನಾನಾ ಕಾರಣಗಳಿಂದ ಇನ್ನೂ ಕೂಡ ಹಣ ಜಮೆಯಾಗಿಲ್ಲ. ಈ ಹಿನ್ನಲೆ ಚಾಮರಾಜನಗರ ಆಹಾರ, ನಾಗರೀಕ ಸರಬರಾಜು ಇಲಾಖೆ ಹಾಗೂ ಮಹಿಳಾ ಮತ್ತು ಕಲ್ಯಾಣ ಇಲಾಖೆಯಿಂದ ಚಾಮರಾಜನಗರದ ಜೆಎಚ್ ಪಟೇಲ್ ಸಭಾಂಗಣದಲ್ಲಿ ವಿಶೇಷ ಕ್ಯಾಂಪ್ ಆಯೋಜಿಸಲಾಗಿತ್ತು. ಸಾವಿರಾರು ಮಹಿಳೆಯರು ತಮ್ಮ ದಾಖಲೆ ಸರಿಪಡಿಸಲು ಸುರಿಯುವ ಮಳೆಯನ್ನು ಲೆಕ್ಕಿಸದೆ ತಿದ್ದುಪಡಿ ಮಾಡಿಸಲು ಮುಗಿಬಿದ್ದಿದ್ದರು. ಜಿಲ್ಲಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಕುಟುಂಬದ ಖಾತೆಗೆ ಹಣ ಬಂದಿದ್ದು, 11 ಸಾವಿರಕ್ಕೂ ಹೆಚ್ಚು ಮಂದಿ ಗೃಹಲಕ್ಷ್ಮೀ ಯೋಜನೆಯಿಂದ ವಂಚಿತರಾಗಿದ್ದಾರೆ.

ಯಶವಂತಪುರ ರೈಲ್ವೆ ಹಳಿಯಲ್ಲಿ ಕೊಳ್ಳೇಗಾಲದ ಯುವಕನ ಮೃತದೇಹ ಪತ್ತೆ!

ಇನ್ನೂ ಗೃಹಲಕ್ಷ್ಮೀ ಅಷ್ಟೇ ಅಲ್ಲ ಅನ್ನಭಾಗ್ಯ ಡಿಬಿಟಿ ಹಣ ಕೂಡ ಸಂದಾಯವಾಗಿಲ್ಲ. ಅನ್ನಭಾಗ್ಯದ ಹಣ ಬ್ಯಾಂಕ್ ಖಾತೆಗೆ ಜಮೆ ಆಗಲೂ ಕೂಡ ಸಮಸ್ಯೆಗಳಿವೆ.ಜಿಲ್ಲಾದ್ಯಂತ ಎರಡು ಲಕ್ಷಕ್ಕೂ ಹೆಚ್ಚು ಮಂದಿಗೆ ಈಗಾಗ್ಲೇ ಹಣ ಸಂದಾಯವಾಗ್ತಿದೆ. ಆದ್ರೆ 10,500 ಕ್ಕೂ ಹೆಚ್ಚು ಫಲಾನುಭವಿಗಳು ಈ ಯೋಜನೆಯಿಂದ ಹಣ ಪಡೆಯಲು ವಂಚಿತರಾಗಿದ್ದರು. ಪ್ರತಿ ತಾಲೂಕು ಹಂತದಲ್ಲಿಯೂ ಕೂಡ ವಿಶೇಷ ಶಿಬಿರ ಆಯೋಜಿಸುವ ಮೂಲಕ ಪ್ರತಿಯೊಬ್ಬರ ಖಾತೆಗೆ ಹಣ ಜಮೆಯಾಗುವಂತೆ ಮಾಡಲೂ ವಿಶೇಷ ಕ್ಯಾಂಪ್ ಆಯೋಜಿಸಿದ್ದರು.

ರಾಮನಿಗಾಗಿ ಶಬರಿ ಕಾದಂತೆ ರಾಮಮಂದಿರಕ್ಕಾಗಿ 30 ವರ್ಷದಿಂದ ಅಯೋಧ್ಯೆ ಮೃತ್ತಿಕೆಗೆ ಪೂಜೆ!

ಒಟ್ನಲ್ಲಿ ಸರ್ಕಾರವೆನೋ ಮಹತ್ವಾಕಾಂಕ್ಷೆ ಯೋಜನೆ ಜಾರಿಗೊಳಿಸಿ ತಿಂಗಳುಗಳೇ ಉರುಳುತ್ತಿದ್ದರೂ ಕೂಡ ಆಧಾರ್ ಲಿಂಕ್,ಇ ಕೆವೈಸಿ,ಪಡಿತರ ಚೀಟಿ, ಬ್ಯಾಂಕ್ ಖಾತೆ ಸೇರಿ ಇನ್ನಿತರ ತಾಂತ್ರಿಕ ಸಮಸ್ಯೆಗಳಿಂದ ಜನರ ಖಾತೆಗೆ ಹಣ ತಲುಪುತ್ತಿಲ್ಲ.ಸರ್ಕಾರ ಹಾಗೂ ಅಧಿಕಾರಿಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಶಿಬಿರ ಆಯೋಜಿಸಿ ಜನರ ದಾಖಲೆ ಸರಿಪಡಿಸಿದ್ರೆ ಅಷ್ಟೇ ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯದ ಹಣ ಫಲಾನುಭವಿಗಳಿಗೆ ಜಮೆ ಆಗಲಿದೆಯಷ್ಟೇ.

Follow Us:
Download App:
  • android
  • ios