Asianet Suvarna News Asianet Suvarna News

ನನಗೆ, ಯೋಗಿ ಆದಿತ್ಯನಾಥ್‌ಗೆ ಮಕ್ಕಳು ಇಲ್ಲ, ನಿಮ್ಮ ಮಕ್ಕಳಿಗಾಗಿ ದುಡಿಯುತ್ತೇವೆ: ಪ್ರಧಾನಿ ಮೋದಿ ಭಾವುಕ

'ನಮಗೆ ಮಕ್ಕಳಿಲ್ಲ. ಆದರೆ ಮೋದಿ ಮತ್ತು ಯೋಗಿ (ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್), ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ನುಡಿದಿದ್ದಾರೆ. 

Modi and Yogi dont have children we are working for your kids says PM in Uttar Pradeshs Etawah gvd
Author
First Published May 6, 2024, 8:03 AM IST

ಎಟಾವಾ (ಉ.ಪ್ರ.) (ಮೇ.06): 'ನಮಗೆ ಮಕ್ಕಳಿಲ್ಲ. ಆದರೆ ಮೋದಿ ಮತ್ತು ಯೋಗಿ (ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್), ನಿಮ್ಮ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿ ನುಡಿದಿದ್ದಾರೆ. ಎಸ್ಪಿ ನೇತಾರ ಮುಲಾಯಂ ಸಿಂಗ್ ಯಾದವ್ ಅವರ ತವರು, ಉತ್ತರ ಪ್ರದೇಶದ ಎಟಾವಾದಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಅವರು, ಎಸ್‌ಪಿ-ಕಾಂಗ್ರೆಸ್ ಮೈತ್ರಿಯನ್ನು ಹಿಗ್ಗಾಮುಗ್ಗಾ ಟೀಕಿಸಿದರು. 

'ಎರಡೂ ಪಕ್ಷಗಳು ತಮ್ಮ ಮಕ್ಕಳ ರಾಜಕೀಯ ಉಳಿವಿಗಾಗಿ ಚುನಾವಣೆ ಎದುರಿಸುತ್ತಿದ್ದರೆ, ಮೋದಿ-ಯೋಗಿ ನಿಮ್ಮ (ಮತದಾರರ) ಮಕ್ಕಳ ಏಳಿಗೆಗೆ ಚುನಾವಣೆ ಎದುರಿಸುತ್ತಿದ್ದಾರೆ. ನಾನು ಚಿಕ್ಕಂದಿನಲ್ಲಿ ಚಾಯ್‌ವಾಲಾ ಆಗಿದ್ದರೂ, ಕುಟುಂಬದವರಿಗೇ ಪ್ರಧಾನಿ ಹುದ್ದೆ ದೊರಕಬೇಕು ಎಂಬ ಸಂಕೋಲೆ ಕಳಚಿ ಉನ್ನತ ಸ್ಥಾನಕ್ಕೇರಿದ್ದೇನೆ. ಅದೇ ರೀತಿ 2047ರಲ್ಲಿ ನಿಮ್ಮ ಮಕ್ಕಳೂ ಪಿಎಂ, ಸಿಎಂ ಆಗಬೇಕು. ಇದೇ ನನ್ನ ಇಚ್ಛೆ' ಎಂದು ಜನತೆಗೆ ಕರೆ ನೀಡಿದರು. 

ನಾನು ಮತ್ತೆ ಪ್ರಧಾನಿ ಎಂದಿದ್ದರು ಮುಲಾಯಂ: 'ನರೇಂದ್ರ ಮೋದಿ ಮತ್ತೆ ಪ್ರಧಾನಿ ಆಗಲಿದ್ದಾರೆ ಎಂದು ಸಮಾಜವಾದಿ ಪಾರ್ಟಿ ನೇತಾರ ಮುಲಾಯಂ ಸಿಂಗ್ ಯಾದವ್ 2019ರಲ್ಲೇ ತಿಳಿಸಿದ್ದರು' ಎಂದೂ ಮೋದಿ ಮೆಲುಕು ಹಾಕಿದರು. 'ಅವರ ಈ ಮಾತನ್ನು ನಾನು ಆಶೀರ್ವಾದ ಎಂದು ಭಾವಿಸುತ್ತೇನೆ. ಅದೇ ನನಗೆ ಶ್ರೀರಕ್ಷೆ' ಎಂದೂ ಮೋದಿ ಹೇಳಿದ್ದು, ತಾವು 3ನೇ ಬಾರಿ ಪ್ರಧಾನಿ ಆಗುವ ವಿಶ್ವಾಸ ವ್ಯಕ್ತಪಡಿಸಿದರು. ಈ ಮೂಲಕ ತಮ್ಮ ವಿರುದ್ಧ ತೊಡೆ ತಟ್ಟಿರುವ ಅವರ ಪುತ್ರ ಅಖಿಲೇಶ್ ಯಾದವ್‌ಗೆ ಟಾಂಗ್ ನೀಡಿದರು.

2 ಲಕ್ಷ ಮತಗಳಿಂದ ಗೆದ್ದು ಬರುವೆ: ಕೆ.ಎಸ್‌.ಈಶ್ವರಪ್ಪ ವಿಶ್ವಾಸದ ನುಡಿ

ಮುಸ್ಲಿಮರು ಕೇವಲ ದಾಳ: ಬಳಿಕ ಸೀತಾಪುರದಲ್ಲಿ ನಡೆದ ಮತ್ತೊಂದು ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು ಮುಸ್ಲಿಮರನ್ನು ಕಾಂಗ್ರೆಸ್ ಕೇವಲ ದಾಳವಾಗಿ ಬಳಸಿಕೊಳ್ಳುತ್ತಿದೆ. ಇದು ಆ ಸಮುದಾಯಕ್ಕೆ ಈಗ ಅರ್ಥವಾಗಿದೆ ಎಂದೂ ಮೋದಿ ನುಡಿದರು.

Follow Us:
Download App:
  • android
  • ios