Asianet Suvarna News Asianet Suvarna News

ಹಾಕಿ ಫೈವ್ಸ್‌: ಪಾಕಿಸ್ತಾನವನ್ನು ಬಗ್ಗುಬಡಿದು ಭಾರತ ಚಾಂಪಿಯನ್‌

ಶೂಟೌಟಲ್ಲಿ ಭಾರತ 2-0 ಅಂತರದಲ್ಲಿ ಜಯಿಸಿತು. ಚಾಂಪಿಯನ್‌ ಪಟ್ಟದೊಂದಿಗೆ ಚೊಚ್ಚಲ ಆವೃತ್ತಿಯ ಹಾಕಿ ಫೈವ್ಸ್‌ ವಿಶ್ವಕಪ್‌ಗೆ ಭಾರತ ಅರ್ಹತೆ ಗಿಟ್ಟಿಸಿಕೊಂಡಿತು. ವಿಶ್ವಕಪ್‌ 2024ರ ಜನವರಿಯಲ್ಲಿ ಮಸ್ಕಟ್‌ನಲ್ಲಿ ನಡೆಯಲಿದೆ.

India beats Pakistan in penalty shootout wins Men Hockey 5s Asia Cup 2023 kvn
Author
First Published Sep 3, 2023, 8:42 AM IST

ಸಲಾಲ(ಒಮಾನ್‌): ಪುರುಷರ ಹಾಕಿ ಫೈವ್ಸ್‌ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಶನಿವಾರ ನಡೆದ ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ ಭಾರತ ಶೂಟೌಟ್‌ನಲ್ಲಿ ಜಯ ಸಾಧಿಸಿತು. ನಿಗದಿತ 30 ನಿಮಿಷಗಳ ಅಂತ್ಯಕ್ಕೆ 4-4ರಲ್ಲಿ ಪಂದ್ಯ ಡ್ರಾಗೊಂಡಾಗ ಫಲಿತಾಂಶಕ್ಕಾಗಿ ಶೂಟೌಟ್‌ ಮೊರೆ ಹೋಗಲಾಯಿತು. ಶೂಟೌಟಲ್ಲಿ ಭಾರತ 2-0 ಅಂತರದಲ್ಲಿ ಜಯಿಸಿತು. ಚಾಂಪಿಯನ್‌ ಪಟ್ಟದೊಂದಿಗೆ ಚೊಚ್ಚಲ ಆವೃತ್ತಿಯ ಹಾಕಿ ಫೈವ್ಸ್‌ ವಿಶ್ವಕಪ್‌ಗೆ ಭಾರತ ಅರ್ಹತೆ ಗಿಟ್ಟಿಸಿಕೊಂಡಿತು. ವಿಶ್ವಕಪ್‌ 2024ರ ಜನವರಿಯಲ್ಲಿ ಮಸ್ಕಟ್‌ನಲ್ಲಿ ನಡೆಯಲಿದೆ.

ಭಾರತದ ಪರ ಉಪನಾಯಕ, ಕರ್ನಾಟಕದ ಮೊಹಮದ್‌ ರಾಹೀಲ್‌ 2, ಜುಗ್ರಾಜ್‌ ಸಿಂಗ್‌, ಮಣೀಂದರ್‌ ಸಿಂಗ್‌ ತಲಾ 1 ಗೋಲು ಬಾರಿಸಿದರು. ಶೂಟೌಟ್‌ನಲ್ಲಿ ಪಾಕ್‌ 2 ಅವಕಾಶಗಳನ್ನು ವ್ಯರ್ಥ ಮಾಡಿದರೆ, ಭಾರತ 2 ಪ್ರಯತ್ನಗಳಲ್ಲೂ ಗೋಲು ಬಾರಿಸಿತು. ಇದಕ್ಕೂ ಮೊದಲು ಶನಿವಾರವೇ ನಡೆದಿದ್ದ ಸೆಮಿಫೈನಲ್‌ನಲ್ಲಿ ಭಾರತ, ಮಲೇಷ್ಯಾ ವಿರುದ್ಧ 10-4 ಗೋಲಿನಿಂದ ಗೆದ್ದಿದ್ದರೆ, ಪಾಕ್‌ ತಂಡ ಒಮಾನ್‌ ವಿರುದ್ಧ 7-3ರಿಂದ ಜಯಗಳಿಸಿತ್ತು.

ಎಂಸಿಸಿ ಹಾಕಿ: ಕರ್ನಾಟಕ ಫೈನಲ್‌ಗೆ

ಚೆನ್ನೈ: ದೇಶದ ಅತ್ಯಂತ ಹಳೆಯ ಹಾಗೂ ಪ್ರತಿಷ್ಠಿತ ಹಾಕಿ ಟೂರ್ನಿಗಳಲ್ಲಿ ಒಂದಾದ ಎಂಸಿಸಿ-ಮುರುಗಪ್ಪ ಗೋಲ್ಡ್‌ ಅಲ್‌ ಇಂಡಿಯಾ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ಚೊಚ್ಚಲ ಬಾರಿ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಶನಿವಾರ ನಡೆದ 94ನೇ ಆವೃತ್ತಿ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ರಾಜ್ಯ ತಂಡ ಇಂಡಿಯನ್‌ ಆರ್ಮಿ ರೆಡ್‌ ತಂಡದ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 4-3 ಗೋಲುಗಳಿಂದ ರೋಚಕ ಗೆಲುವು ಸಾಧಿಸಿತು. ನಿಗದಿತ ಸಮಯದ ವೇಳೆಗೆ ಉಭಯ ತಂಡಗಳು 1-1 ಗೋಲಿನಿಂದ ಸಮಬಲ ಸಾಧಿಸಿದ್ದವು. ಇಂಡಿಯನ್‌ ಆರ್ಮಿ ಪರ 9ನೇ ನಿಮಿಷದಲ್ಲಿ ರಜಂತ್‌ ಗೋಲು ಬಾರಿಸಿದರೆ, 22ನೇ ನಿಮಿಷದಲ್ಲಿ ಚೆಲ್ಸಿ ಮೆದ್ದಪ್ಪ ಗೋಲು ಗಳಿಸಿ ರಾಜ್ಯ ಸಮಬಲ ಸಾಧಿಸಲು ನೆರವಾದರು. ಪಂದ್ಯ ಡ್ರಾಗೊಂಡ ಕಾರಣ, ಫಲಿತಾಂಶಕ್ಕಾಗಿ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು.

ಯುಎಸ್ ಓಪನ್: ಪ್ರಿ ಕ್ವಾರ್ಟರ್‌ಗೆ ಜೋಕೋ, ಇಗಾ ಲಗ್ಗೆ

ಶೂಟೌಟ್‌ನಲ್ಲಿ ರಾಜ್ಯದ ಪರ ಹಿರಿಯ ಆಟಗಾರ ಎಸ್‌.ವಿ.ಸುನಿಲ್‌ 2, ನಾಯಕ ನಿಕಿನ್‌ ತಿಮ್ಮಯ್ಯ ಹಾಗೂ ಯತೀಶ್‌ ಕುಮಾರ್‌ ತಲಾ 1 ಗೋಲು ಬಾರಿಸಿದರು. ಎದುರಾಳಿ ತಂಡದ ಪರ ಸುಮೀತ್‌ ಪಾಲ್ 1 ಹಾಗೂ ಜೊಬನ್‌ಪ್ರೀತ್‌ ಸಿಂಗ್‌ 2 ಗೋಲು ಗಳಿಸಿದರು. ಭಾನುವಾರ ನಡೆಯಲಿರುವ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ ಭಾರತೀಯ ರೈಲ್ವೇಸ್‌ ವಿರುದ್ಧ ಪ್ರಶಸ್ತಿಗಾಗಿ ಸೆಣಸಾಡಲಿದೆ. ಸೆಮಿಫೈನಲ್‌ನಲ್ಲಿ ರೈಲ್ವೇಸ್‌ ತಂಡ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಿರುದ್ಧ ಗೆಲುವು ಸಾಧಿಸಿತು.

Follow Us:
Download App:
  • android
  • ios