Asianet Suvarna News Asianet Suvarna News

ಏಷ್ಯಾ ಚಾಂಪಿ​ಯನ್ಸ್‌ ಟ್ರೋಫಿ ಹಾಕಿ ಟೂರ್ನಿ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಚೀನಾ ಮೊದಲ ಎದುರಾಳಿ

ಏಷ್ಯನ್‌ ಚಾಂಪಿ​ಯನ್ಸ್‌ ಟ್ರೋಫಿ ಹಾಕಿ ಟೂರ್ನಿ ವೇಳಾಪಟ್ಟಿ ಪ್ರಕಟ
ಚೆನ್ನೈನಲ್ಲಿ ಆಗಸ್ಟ್ 03ರಿಂದ ಟೂರ್ನಿಗೆ ಅಧಿಕೃತ ಚಾಲನೆ
ಮೊದಲ ಪಂದ್ಯದಲ್ಲಿ ಭಾರತಕ್ಕೆ ಚೀನಾ ಚಾಲೆಂಜ್

Asian Champions Trophy 2023 Indian Hockey Team to face China in campaign opener kvn
Author
First Published Jun 21, 2023, 9:37 AM IST

ಚೆನ್ನೈ(ಜೂ.21): 7ನೇ ಆವೃ​ತ್ತಿಯ ಏಷ್ಯನ್‌ ಚಾಂಪಿ​ಯನ್ಸ್‌ ಟ್ರೋಫಿ ಹಾಕಿ ಟೂರ್ನಿಯ ವೇಳಾ​ಪಟ್ಟಿ ಪ್ರಕ​ಟ​ಗೊಂಡಿದ್ದು, ಟೂರ್ನಿ ಚೆನ್ನೈ​ನಲ್ಲಿ ಆಗಸ್ಟ್‌ 3ರಿಂದ 12ರ ವರೆಗೂ ನಡೆ​ಯ​ಲಿದೆ ಎಂದು ಏಷ್ಯನ್‌ ಹಾಕಿ ಫೆಡ​ರೇ​ಶನ್‌ ಮಂಗ​ಳ​ವಾರ ಘೋಷಿ​ಸಿದೆ. ಟೂರ್ನಿ​ಯಲ್ಲಿ 6 ತಂಡ​ಗಳು ಪಾಲ್ಗೊ​ಳ್ಳ​ಲಿವೆ. 

ಆಗಸ್ಟ್‌ 03ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಕೊರಿಯಾ ಹಾಕಿ ತಂಡವು ಜಪಾನ್ ತಂಡವನ್ನು ಎದುರಿಸಲಿದೆ. ಇನ್ನು ಆತಿಥೇಯ ಭಾರತ  ಹಾಕಿ ತಂಡವು ಮೊದಲ ದಿನದ ಮೂರನೇ ಪಂದ್ಯದಲ್ಲಿ ಮೇಯರ್ ರಾಧಾಕೃಷ್ಣನ್‌ ಹಾಕಿ ಸ್ಟೇಡಿಯಂನಲ್ಲಿ ನೆರೆಯ ಚೀನಾವನ್ನುಎದುರಿಸಲಿದೆ. 

3 ಬಾರಿ ಚಾಂಪಿ​ಯನ್‌ ಭಾರತ ತಂಡ  ಇದಾದ ಬಳಿಕ ಆಗಸ್ಟ್ 4ರಂದು ಜಪಾನ್‌, ಆಗಸ್ಟ್‌ 6ರಂದು ಮಲೇಷ್ಯಾ, ಆಗಸ್ಟ್ 7ಕ್ಕೆ ಕೊರಿಯಾ ಹಾಗೂ ಕೊನೆ ಪಂದ್ಯ​ದಲ್ಲಿ ಆಗಸ್ಟ್ 9ರಂದು ಪಾಕಿ​ಸ್ತಾನ ವಿರುದ್ಧ ಸೆಣ​ಸಲಿದೆ. ಲೀಗ್‌ ಹಂತದ ಮುಕ್ತಾ​ಯಕ್ಕೆ ಅಗ್ರ 4 ಸ್ಥಾನ ಪಡೆವ ತಂಡ​ಗಳು ಸೆಮಿ​ಫೈ​ನ​ಲ್‌​ಗೇ​ರ​ಲಿವೆ. ಆಗಸ್ಟ್‌ 12ಕ್ಕೆ ಫೈನಲ್‌ ಪಂದ್ಯ ನಿಗ​ದಿ​ಯಾ​ಗಿ​ದೆ.

ಏಷ್ಯನ್‌ ಚಾಂಪಿ​ಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಕೊರಿಯಾ, ಮಲೇಷ್ಯಾ, ಪಾಕಿಸ್ತಾನ, ಜಪಾನ್, ಚೀನಾ ಹಾಗೂ ಭಾರತ ಹಾಕಿ ತಂಡಗಳು ಪಾಲ್ಗೊಳ್ಳುತ್ತಿವೆ. ಒಂದು ತಂಡವು ಉಳಿದ 5 ತಂಡಗಳ ಎದುರು ಒಮ್ಮೆ ಕಾದಾಟ ನಡೆಸಲಿವೆ. 

ಈ ಕುರಿತಂತೆ ಮಾತನಾಡಿರುವ ಹಾಕಿ ಇಂಡಿಯಾ ಅಧ್ಯಕ್ಷ ದಿಲಿಪ್ ಟಿರ್ಕೆ, " ಚೆನ್ನೈನಲ್ಲಿ 2023ರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಆತಿಥ್ಯ ವಹಿಸುತ್ತಿರುವುದು ನಿಜಕ್ಕೂ ತುಂಬಾ ಸಂತೋಷವಾಗುತ್ತಿದೆ. ಇಂದು ಟೂರ್ನಿಗೆ ವೇಳಾಪಟ್ಟಿ ಪ್ರಕಟಿಸಿದ್ದು, ಒಂದು ಮೈಲುಗಲ್ಲು. ಹಾಕಿ ಪಂದ್ಯಾಟಕ್ಕೆ ಇದೀಗ ದಿನಗಣನೆ ಆರಂಭವಾಗಿದೆ" ಎಂದು ಹೇಳಿದ್ದಾರೆ. 

ಜೀವ​ನ​ಶ್ರೇಷ್ಠ 3ನೇ ಸ್ಥಾನ​ಕ್ಕೆ ಜಿಗಿದ ಸಾತ್ವಿ​ಕ್‌-ಚಿರಾ​ಗ್‌ ಕಿಲಾಡಿ ಜೋಡಿ

ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಭಾರತ(2011, 2016 & 2018) ಮತ್ತು ಪಾಕಿಸ್ತಾನ(2012, 2013 & 2018) ರಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ಟೂರ್ನಿಯ ಅತ್ಯಂತ ಯಶಸ್ವಿ ತಂಡಗಳಾಗಿ ಹೊರಹೊಮ್ಮಿವೆ. 2018ರಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಜಂಟಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದವು ಎನ್ನುವುದನ್ನು ನಾವಿಲ್ಲಿ ಸ್ಮರಿಸಬಹುದಾಗಿದೆ.

ಹಾಕಿ: ಕರ್ನಾ​ಟ​ಕ ಔಟ್‌

ರೂರ್ಕೆ​ಲಾ: 13ನೇ ಆವೃ​ತ್ತಿಯ ರಾಷ್ಟ್ರೀಯ ಕಿರಿಯರ ಹಾಕಿ ಟೂರ್ನಿ​ಯಲ್ಲಿ ಕರ್ನಾ​ಟಕ ಕ್ವಾರ್ಟರ್‌ ಫೈನ​ಲ್‌​ನಲ್ಲಿ ಅಭಿ​ಯಾನ ಕೊನೆ​ಗೊ​ಳಿ​ಸಿದೆ. ಗುಂಪು ಹಂತ​ದಲ್ಲಿ ಮೂರೂ ಪಂದ್ಯ​ಗ​ಳಲ್ಲಿ ಗೆದ್ದು ಅಜೇ​ಯ​ವಾ​ಗಿಯೇ ನಾಕೌ​ಟ್‌​ಗೇರಿದ್ದ ರಾಜ್ಯ ತಂಡ, ಸೋಮ​ವಾರ ರಾತ್ರಿ ನಡೆದ ಒಡಿಶಾ ವಿರು​ದ್ಧದ ಅಂತಿಮ 8ರ ಘಟ್ಟದ ಪಂದ್ಯ​ದಲ್ಲಿ 2-4 ಗೋಲು​ಗ​ಳಿಂದ ಪರಾ​ಭ​ವ​ಗೊಂಡಿತು.

ಫಿಫಾ ವಿಶ್ವಕಪ್‌ನಲ್ಲಿ ವೈರಲ್‌ ಆಗಿದ್ದ ಮಾಡೆಲ್‌ ಮತ್ತೆ ಪ್ರತ್ಯಕ್ಷ; ಪಡ್ಡೆ ಹುಡುಗರ ಕಣ್ಣಿಗೆ ಹಬ್ಬ

ಜು.15ಕ್ಕೆ ಬಿಸಿ​ಐಸಿ ಗಾಲ್ಫ್‌ ಟೂರ್ನಿ

ಬೆಂಗ​ಳೂ​ರು: ಬೆಂಗ​ಳೂರು ಚೇಂಬರ್‌ ಆಫ್‌ ಇಂಡ​ಸ್ಟ್ರೀಸ್‌ ಆ್ಯಂಡ್‌ ಕಾಮ​ರ್ಸ್‌​(​ಬಿ​ಸಿ​ಐ​ಸಿ​)ಯ 12ನೇ ಆವೃ​ತ್ತಿಯ ಗಾಲ್ಫ್‌ ಟೂರ್ನಿ ಜುಲೈ 15ರಂದು ಕ್ಲೋವರ್‌ ಗಾಲ್ಫ್‌ ಕೋರ್ಸ್‌​ನಲ್ಲಿ ನಡೆ​ಯ​ಲಿದೆ. ಟೂರ್ನಿ 2010ರಲ್ಲಿ ಆರಂಭ​ವಾ​ಗಿದ್ದು, ಈ ಬಾರಿ 100ಕ್ಕೂ ಹೆಚ್ಚು ಮಂದಿ ಪಾಲ್ಗೊ​ಳ್ಳುವ ನಿರೀ​ಕ್ಷೆ​ಯಿದೆ. ಆಸ​ಕ್ತರು ಬಿಸಿ​ಐಸಿ ಕಚೇರಿ ಅಥವಾ ಅಧಿ​ಕಾ​ರಿ​ಗ​ಳನ್ನು ಸಂಪ​ರ್ಕಿ​ಸಲು ಬಿಸಿ​ಐಸಿ ಪ್ರಕ​ಟಣೆ ತಿಳಿ​ಸಿದೆ.

ವನಿ​ತಾ ಫುಟ್ಬಾ​ಲ್‌: ಇಂದು ಕರ್ನಾ​ಟಕ-ಒಡಿ​ಶಾ ಫೈ​ಟ್‌

ಅಮೃ​ತ್‌​ಸ​ರ್‌: 27ನೇ ರಾಷ್ಟ್ರೀಯ ಹಿರಿಯ ಮಹಿಳೆಯರ ಫುಟ್ಬಾಲ್‌ ಚಾಂಪಿಯನ್‌ಶಿಪ್‌ನ ಫೈನಲ್‌ ಸುತ್ತಿನಲ್ಲಿ ಸತತ 2ನೇ ಗೆಲು​ವಿನ ನಿರೀ​ಕ್ಷೆ​ಯ​ಲ್ಲಿ​ರುವ ಕರ್ನಾ​ಟಕ ತಂಡ ಬುಧ​ವಾರ ನಿರ್ಣಾ​ಯಕ ಪಂದ್ಯ​ದಲ್ಲಿ ಒಡಿಶಾ ವಿರುದ್ಧ ಸೆಣ​ಸಲಿದೆ. ಟೂರ್ನಿ​ಯಲ್ಲಿ ಆಡಿ​ರುವ 3 ಪಂದ್ಯ​ಗ​ಳಲ್ಲಿ ರಾಜ್ಯ ತಂಡ ತಲಾ 1 ಗೆಲುವು, ಸೋಲು, ಡ್ರಾ ಕಂಡಿದೆ. ಸದ್ಯ ‘ಎ’ ಗುಂಪಿ​ನ​ಲ್ಲಿ ಕರ್ನಾ​ಟಕ 4 ಅಂಕ​ದೊಂದಿಗೆ 4ನೇ ಸ್ಥಾನ​ದ​ಲ್ಲಿದೆ. ತಮಿ​ಳು​ನಾ​ಡು​(09 ಅಂಕ), ಒಡಿ​ಶಾ​(06), ಚಂಡೀ​ಗಢ(04) ಮೊದಲ 3 ಸ್ಥಾನ​ಗ​ಳ​ಲ್ಲಿವೆ.

Follow Us:
Download App:
  • android
  • ios